Saturday, 24 December 2016
Sunday, 2 October 2016
ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.
ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ
ಅಕ್ಟೋಬರ್ 2 ರಂದು ಜನಿಸಿದ ಮಹಾನ್ ನಾಯಕರ ಭಾವಚಿತ್ರಗಳಿಗೆ
ಶಾಲಾ ಮಕ್ಕಳ ಜೊತೆಗೂಡಿ ಪುಷ್ಪಾರ್ಚನೆ ಮಾಡಲಾಯಿತು. ಈ ಮಹಾನ್ ನಾಯಕರ ತ್ಯಾಗ ಬಲಿದಾನಗಳ ಜೀವನ
ಕಥೆಗಳನ್ನು ಮಕ್ಕಳಿಗೆ ಹೇಳಲಾಯಿತು. ಗಾಂಧೀ ಕಂಡ ಸ್ವಚ್ಚ ಸುಂದರ ಭಾರತದ ಕನಸಿನಂತೆ "ಸೇವನಾ
ವಾರ"ವನ್ನು ಆರಂಭಿಸಲಾಯಿತು. ಶಾಲಾ ಪರಿಸರವನ್ನು ಮಕ್ಕಳೊಂದಿಗೆ ಸೇರಿ ಶುಚಿಗೊಳಿಸಲಾಯಿತು.
ಸೇವನಾ ವಾರಚಾರಣೆ ಪ್ರಯುಕ್ತ ಮಾಲಿನ್ಯ ಮುಕ್ತ ಶಾಲಾ ಪರಿಸರ ಸ್ವಚತಾ ಕಾರ್ಯಕ್ರಮಕ್ಕೆ
ಚಾಲನೆ ನೀಡಲಾಯಿತು. ಮಕ್ಕಳು ಅಧ್ಯಾಪಕರು ಶಾಲಾ ಪರಿಸರ ಶುಚಿಗೊಳಿಸಿ ಸೇವನಾ ವಾರಾಚರಣೆಯಲ್ಲಿ ಪಾಲ್ಗೊಂಡರು.
Friday, 9 September 2016
"ಪೂವಿಳಿ
ಪೂವಿಳಿ ಪೊನ್ನೋಣಮಾಯಿ
ನೀ ವರು ನೀವರು ಪೊನ್ನೋಣ ತುಂಬಿ..."
ಕೇರಳೀಯರೆಲ್ಲರೂ
ತಮ್ಮ ಸಾಂಪ್ರದಾಯಿಕತೆಯನ್ನು ಒರೆಗೆ ಹಚ್ಚಿಕೊಳ್ಳುವ ವಿನೂತನ ಪರ್ವ,
ಜಗತ್ತಿನೆಲ್ಲೆಡೆಯಿರುವ
ಕೇರಳೀಯರು ತಮ್ಮ ಜಾತಿ ಮತ ಅಂತಸ್ತು ಬದಿಗೊತ್ತಿ
ಸಮಾನತೆಯಿಂದ, ಸಂಭ್ರಮದಿಂದ ಆಚರಿಸುವ ಒಂದೇ ಹಬ್ಬ ಓಣಂ. ಓಣಂ ವಿಶೇಷತೆಯೇ ಅದು. ಈ ದಿನಗಳಲ್ಲಿ ಕೇರಳ
ನಾಡು ತನ್ನ ಸಾಂಪ್ರದಾಯಿಕತೆಯಲ್ಲಿ ಮುಳುಗೇಳುತ್ತದೆ.
ಬಲಿ
ಚಕ್ರವರ್ತಿಯ ಓಣಂ ದಿನಗಳಲ್ಲಿ ಭೂಮಿಗೆ ಬರುತ್ತಾನೆಂಬುದು ಇಲ್ಲಿನವರ ನಂಬಿಕೆ.
ಅದರ
ಪ್ರತೀಕವಾಗಿ ಬಲಿ ಚಕ್ರವರ್ತಿ, ವಾಮನ ವೇಷಧಾರಿಗಳು ಮನೆಮನೆಗೆ ಬಂದು
"ತಿರುಮೇನೀ..." ಎಂದು ಕೂಗು ಹಾಕಿದೊಡನೆ ಮನೆಯ ಯಜಮಾನ
ಆತನಿಗೆ ಫಲಾಹಾರಗಳನ್ನು ಕೊಟ್ಟು ಸತ್ಕರಿಸುತ್ತಾನೆ. ಅದಕ್ಕೆ ಪ್ರತಿಯಾಗಿ 'ಮಾವೇಲಿ' ಬಹುಮಾನವಿತ್ತು ವೇಷಧಾರಿ ಹಿಂದಿರುಗುತ್ತಾನೆ.
ಈ ಹಬ್ಬದ ವಿಶೇಷತೆಗಳ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವಂತದ್ದಲ್ಲ.. ನಮ್ಮ ಶಾಲೆಯಲ್ಲಿ ಓಣಂ
ಸಂಭ್ರಮ ಹೀಗೆ.. ನೋಡಿ...
ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು...
Subscribe to:
Posts (Atom)