Monday, 8 September 2014

ಸೆಪ್ಟೆಂಬರ್ 8 : ವಿಶ್ವ ಸಾಕ್ಷರತಾ ದಿನ
     
ಇಂದು ವಿಶ್ವ ಸಾಕ್ಷರತಾ ದಿನ. ಶಿಕ್ಷಣ ಮೂಲಭೂತ ಹಕ್ಕು. ಎಲ್ಲರಿಗೂ ಶಿಕ್ಷಣ ಕೈಗೆಟುಕುವಂತಾಗಬೇಕು. ಸಮಾಜದಲ್ಲಿ ಯಾವುದೇ ಜಾತಿಧರ್ಮಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ ಪ್ರತಿಯೊಬ್ಬರಿಗೂ ಶಿಕ್ಷಣ ದೊರಯಬೇಕು. ಅಕ್ಷರದ ಜೊತೆಗೆ ಬದುಕನ್ನು ಕಲಿಯುವಂತಾಗಬೇಕು. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಕಳೆದ ಹತ್ತು ವರ್ಷಗಳಲ್ಲಿ ಭಾರತದ ಸಾಕ್ಷರತೆಯ ಪ್ರಮಾಣ ನಿಧಾನವಾಗಿ ಶೇ.9.2ರಷ್ಟು ಏರಿಕೆ ಕಂಡಿದೆ. 2011ರ ಜನಗಣತಿಯ ತಾತ್ಕಾಲಿಕ ವರದಿ ಪ್ರಕಾರ ಭಾರತದ 121 ಕೋಟಿ ಜನರಲ್ಲಿ ಸಾಕ್ಷರರ ಪ್ರಮಾಣ ಶೇ.74.04.ಅಂದರೆ ಶೇ.26 ಮಂದಿ ಇಂದಿಗೂ ಅನಕ್ಷರಸ್ಥರು. 2001ರಲ್ಲಿ ಸಾಕ್ಷರತೆಯ ಪ್ರಮಾಣ ಶೇ.64.83 ಇತ್ತು. ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ, ಪುರುಷರಿಗೆ ಹೋಲಿಸಿದರೆ ಮಹಿಳಾ ಸಾಕ್ಷರತೆಯ ಪ್ರಮಾಣ ನೆಗೆದಿರುವುದು. 2001ರಲ್ಲಿ ಶೇ.53.67ರಷ್ಟಿದ್ದ ಮಹಿಳಾ ಸಾಕ್ಷರತೆ ಪ್ರಮಾಣವು ಹತ್ತು ವರ್ಷಗಳಲ್ಲಿ ಶೇ.65.46ಕ್ಕೇರಿದೆ. ಈ ನೆಗೆತಕ್ಕೆ ಹೋಲಿಸಿದರೆ ಪುರುಷರ ಸಾಕ್ಷರತೆಯ ವೃದ್ಧಿಯ ಪ್ರಮಾಣ ಕಡಿಮೆ. ಅಂದರೆ ಶೇ.75.26 ಇದ್ದದ್ದು ಶೇ.82.14ಕ್ಕೆ ಅದು ವೃದ್ಧಿಯಾಗಿದೆ. ಕೇರಳವು ಶೇ.93.91 ಸಾಕ್ಷರತೆಯೊಂದಿಗೆ ದೇಶದಲ್ಲಿ ನಂ.1 ಸಾಕ್ಷರತಾ ರಾಜ್ಯ ಎಂಬ ಸ್ಥಾನವನ್ನು ಕಾಯ್ದುಕೊಂಡಿದೆ. ಕೇರಳದ ಬಳಿಕ ಎರಡನೇ ಸ್ಥಾನದಲ್ಲಿರುವುದು ಲಕ್ಷದ್ವೀಪ (ಶೇ.92.28). ಬಿಹಾರವಿನ್ನೂ ಶೇ.63.82 ಸಾಕ್ಷರತೆಯೊಂದಿಗೆ ಈ ಏಣಿಯ ಕೆಳತುದಿಯಲ್ಲಿದೆ. ಅರುಣಾಚಲ ಪ್ರದೇಶ ಶೇ.66.95 ಸಾಕ್ಷರತೆಯೊಂದಿಗೆ ಬಿಹಾರಕ್ಕಿಂತ ಮುಂದಿದೆ. ಒಟ್ಟು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಕೇರಳ, ಲಕ್ಷದ್ವೀಪ, ಮೀಜೋರಾಂ, ತ್ರಿಪುರ, ಗೋವಾ, ದಾಮನ್-ದಿಯು, ಪುದುಚೇರಿ, ಚಂಡೀಗಢ, ದೆಹಲಿ, ಮತ್ತು ಅಂಡಮಾನ್-ನಿಕೋಬಾರ್‌ಗಳು ಶೇ.85ಕ್ಕಿಂತ ಹೆಚ್ಚಿನ ಸಾಕ್ಷರತೆ ಪ್ರಮಾಣವನ್ನು ಸಾಧಿಸಿವೆ
ಮಾನವ ಹಕ್ಕುಗಳ  ಯುಗದಲ್ಲಿ ಶಿಕ್ಷಣವನ್ನು ಒಂದು ಸಾಮಾಜಿಕ ಒಳಿತನ್ನಾಗಿ ಪರಿಗಣಿಸಬೇಕು.ಗುಣಾತ್ಮಕ  ಶಿಕ್ಷಣ ಒದಗಿಸಬಲ್ಲ ಸುಸಜ್ಜಿತ ಶಾಲೆಗಳನ್ನು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರದ ಅನುದಾನದ ಜತೆಗೆ ತನ್ನ ಕಡೆಯಿಂದ ಅಗತ್ಯ ಸಂಪನ್ಮೂಲಗಳನ್ನು ವ್ಯಯಿಸಲು ರಾಜಕೀಯ ಇಚ್ಚಾಶಕ್ತಿ ಬೇಕುಅಭಿವಧ್ಧಿಗಾಗಿ ಶಿಕ್ಷಣ ಅನ್ನುವುದಕ್ಕಿಂತ ಶಿಕ್ಷಣವೇ ಅಭಿವದ್ಧಿಯಾಗಬೇಕು.




No comments: