Friday, 5 September 2014

 ಸ್ನೇಹ ಬಾಂಧವ್ಯ ಬೆಸೆಯುತ್ತಾ ನಮ್ಮ ವಿದ್ಯಾಲಯದಲ್ಲಿ ಓಣಂ...

      ಶಾಂತಿ, ಸಮನ್ವಯತೆ, ಸಮೃದ್ಧಿಯ ಪ್ರತೀಕವಾದ ಓಣಂ ಹಬ್ಬದ ಆಚರಣೆಯನ್ನು ಸೆಪ್ಟೆಂಬರ್ 5 ರಂದು ನಮ್ಮ ವಿದ್ಯಾಲಯದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶಾಲಾ ಮಕ್ಕಳು ಆಕರ್ಷಕ ಪೂಕ್ಕಳಂ ರಚಿಸಿ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಸಂಭ್ರಮಪಟ್ಟರು. ಸ್ವಾದಿಷ್ಟವಾದ ‘ಓಣ ಸದ್ಯ’ ಉಂಡರು. ಬಳಿಕ ಜರಗಿದ ಸಮಾರೋಪ ಸಭೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ  ಶೋಭಾ.ಟಿ  ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯ ಶಿಕ್ಷಕ ಅಬ್ಬಾಸ್ ಕೆ ಸ್ವಾಗತಿಸಿ ಪ್ರವೀಣ್ ಕುಮಾರ್ ವಂದಿಸಿದರು. ಓಣಂ ಹಬ್ಬ ಸೌಹಾರ್ದದಿಂದ ಕೂಡಿದ ಸ್ನೇಹ ಬಾಂಧವ್ಯ ಬೆಸೆಯುವ ಹಬ್ಬ ಎನ್ನುವ ಕವಿತೆಯ ಸಾಲುಗಳನ್ನು ಆಲಾಪಿಸುತ್ತಾ ಮಕ್ಕಳನ್ನು ರಂಜಿಸುತ್ತಾ  ಕೃಷ್ಣ ಕುಮಾರ್ ಕಾರ್ಯಕ್ರಮ ನಿರೂಪಣೆಗೈದರು. ಪಿ.ಟಿ.ಎ, ಯಂ.ಪಿ.ಟಿ.ಎ, ಕ್ಲಬ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

OnamPookkalam 



Staff and Children



Maveli Story By Krishna Kumar Palliath



Ona sadhya








Pookalam Design







No comments: