ನಮ್ಮ ಶಾಲಾ ಬ್ಲಾಗಿನ ಉದ್ಘಾಟನಾ ಸಮಾರಂಭ ನೆರವೇರಿತು...
ದಿನಾಂಕ 30.9.2014 ರಂದು ಮಧ್ಯಾಹ್ನ 2.30 ಕ್ಕೆ ಮಂಗಲ್ಪಾಡಿ ಪಂಚಾಯತ್ ಪ್ಲೇನಿಂಗ್ ಕಾರ್ಡಿನೇಟರ್ ಹಾಗೂ ಮಂಗಲ್ಪಾಡಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಜಶೇಖರ್ ಅನಂತಪುರ ನಮ್ಮ ಶಾಲಾ ಬ್ಲಾಗನ್ನು ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕ ಶ್ರೀ ಅಬ್ಬಾಸ್ ಕೆ ಸ್ವಾಗತಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶೋಭಾ .ಟಿ ಶುಭಾಶಂಸನೆಗೈದರು. ಅಧ್ಯಾಪಕರಾದ ಪ್ರವೀಣ್ ಕುಮಾರ್ ಹಾಗೂ ಕೃಷ್ಣ ಕುಮಾರ್ ಪಳ್ಳಿಯತ್ ಬ್ಲಾಗಿನ ಅಗತ್ಯ ಮಾಹಿತಿ ನೀಡಿದರು. ಜಾಫರ್ ವಂದಿಸಿದರು.
ಶ್ರೀ ರಾಜಶೇಖರ್ ಅನಂತಪುರ ನಮ್ಮ ಶಾಲಾ ಬ್ಲಾಗನ್ನು ಉದ್ಘಾಟಿಸುತ್ತಿರುವ ಕ್ಷಣ...
No comments:
Post a Comment