Friday, 5 September 2014


ಶಿಕ್ಷಕರ ದಿನಾಚರಣೆ ಆಚರಣೆಗೊಂಡಿತು...




ಶಿಕ್ಷಕರ ದಿನಾಚರಣೆಯ ದಿನ ಬೆಳಿಗ್ಗೆಯೇ ತಾವು ತಯಾರು ಮಾಡಿ ಕೊಂಡು ಬಂದ ಶುಭಾಶಯ ಪತ್ರಗಳನ್ನು ಮಕ್ಕಳು ತಮ್ಮ ನೆಚ್ಚಿನ ಅಧ್ಯಾಪಕರುಗಳಿಗೆ ಕೊಡುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಶ್ರಧ್ಧೆಯಿಂದ ಆಚರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಅಬ್ಬಾಸ್.ಕೆ  ಶಿಕ್ಷಕರು ಸಮಾಜವನ್ನು ಕಟ್ಟುವಲ್ಲಿ ಹಿಂದೆಂದಿಗಿಂತಲೂ ಅತ್ಯಗತ್ಯವಾಗಿರುವ ಸಂದರ್ಭ ಇದಾಗಿದೆ ಎಂದು ಅಧ್ಯಾಪಕ ವೃಂದದವರನ್ನು ಅಭಿನಂದಿಸಿದರು. ಡಾ | ಸರ್ವಪಳ್ಳಿ ರಾಧಾಕೃಷ್ಣನ್ ರವರ ತ್ಯಾಗ ಪರಿಶ್ರಮದ ಜೀವನ ಚರಿತ್ರೆಯನ್ನು ಅಧ್ಯಾಪಕ ಕೃಷ್ಣ ಕುಮಾರ್ ಪಳ್ಳಿಯತ್ ವಿವರಿಸಿ ಹೇಳಿದರು. ಶಿಕ್ಷಕರ ದಿನಾಚರಣೆಯಂಗವಾಗಿ ಅಧ್ಯಾಪಕರುಗಳು ಮಕ್ಕಳಿಗೆ ಐಸ್ ಕ್ರೀಂ ಸಲಾಡ್ ವಿತರಿಸಿದರು... 

No comments: