Friday 9 September 2016

"ಪೂವಿಳಿ ಪೂವಿಳಿ ಪೊನ್ನೋಣಮಾಯಿ
ನೀ ವರು ನೀವರು ಪೊನ್ನೋಣ ತುಂಬಿ..."

ಕೇರಳೀಯರೆಲ್ಲರೂ ತಮ್ಮ ಸಾಂಪ್ರದಾಯಿಕತೆಯನ್ನು ಒರೆಗೆ ಹಚ್ಚಿಕೊಳ್ಳುವ ವಿನೂತನ ಪರ್ವ,
ಜಗತ್ತಿನೆಲ್ಲೆಡೆಯಿರುವ ಕೇರಳೀಯರು ತಮ್ಮ ಜಾತಿ ಮತ ಅಂತಸ್ತು ಬದಿಗೊತ್ತಿ
ಸಮಾನತೆಯಿಂದ, ಸಂಭ್ರಮದಿಂದ ಆಚರಿಸುವ ಒಂದೇ ಹಬ್ಬ ಓಣಂ. ಓಣಂ ವಿಶೇಷತೆಯೇ ಅದು. ಈ ದಿನಗಳಲ್ಲಿ ಕೇರಳ ನಾಡು ತನ್ನ ಸಾಂಪ್ರದಾಯಿಕತೆಯಲ್ಲಿ ಮುಳುಗೇಳುತ್ತದೆ.
ಬಲಿ ಚಕ್ರವರ್ತಿಯ ಓಣಂ ದಿನಗಳಲ್ಲಿ ಭೂಮಿಗೆ ಬರುತ್ತಾನೆಂಬುದು ಇಲ್ಲಿನವರ ನಂಬಿಕೆ.
ಅದರ ಪ್ರತೀಕವಾಗಿ ಬಲಿ ಚಕ್ರವರ್ತಿ, ವಾಮನ ವೇಷಧಾರಿಗಳು ಮನೆಮನೆಗೆ ಬಂದು "ತಿರುಮೇನೀ..." ಎಂದು ಕೂಗು ಹಾಕಿದೊಡನೆ ಮನೆಯ ಯಜಮಾನ ಆತನಿಗೆ ಫಲಾಹಾರಗಳನ್ನು ಕೊಟ್ಟು ಸತ್ಕರಿಸುತ್ತಾನೆ. ಅದಕ್ಕೆ ಪ್ರತಿಯಾಗಿ 'ಮಾವೇಲಿ' ಬಹುಮಾನವಿತ್ತು ವೇಷಧಾರಿ ಹಿಂದಿರುಗುತ್ತಾನೆ. ಈ ಹಬ್ಬದ ವಿಶೇಷತೆಗಳ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವಂತದ್ದಲ್ಲ.. ನಮ್ಮ ಶಾಲೆಯಲ್ಲಿ ಓಣಂ ಸಂಭ್ರಮ ಹೀಗೆ.. ನೋಡಿ...


ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು...





























Monday 5 September 2016


ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಾಲಾ ಪರಿಸರ ಶುಚೀಕರಣ ಕಾರ್ಯ ಕೈಗೊಳ್ಳಲಾಯಿತು. ಶುಚಿತ್ವ,  ನೈರ್ಮಲ್ಯ ಇವು ಆರೋ ಗ್ಯದ ಗುಟ್ಟು. ಈ ವಿಚಾರದಲ್ಲಿ ರಾಜೀ ಬೇಡ.  ವೈಯಕ್ತಿಕ ಶುಚಿತ್ವದ ಜತೆಗೆ ತಮ್ಮ ಶಾಲೆ, ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದರ ಮೂಲಕ ಆರೋಗ್ಯವಂತರಾಗಿ ಬಾಳೋಣ.






|| ಸರ್ವರಿಗೂ ಗೌರಿ - ಗಣೇಶ ಹಬ್ಬದ ಶುಭಾಶಯಗಳು ||


ಗಣೇಶ ಚತುರ್ಥಿ ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ.

ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ.ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ,ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ. ನಿಮ್ಮೆಲ್ಲರಿಗೂ ಗೌರಿ - ಗಣೇಶ ಹಬ್ಬದ ಶುಭಾಶಯಗಳು

ಶಿಕ್ಷಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು
        ಗುರುವೆಂದರೆ ಆತ ಕೇವಲ ಶಿಕ್ಷಕನಲ್ಲ. ಒಬ್ಬ ನಿಸ್ವಾರ್ತ ಮಾರ್ಗದರ್ಶಿಯೇ ನಿಜವಾದ ಗುರು. ತಪ್ಪು ಮಾಡಿದಾಗ ಬುದ್ದಿ ಹೇಳಿ, ಯಶಸ್ಸಿನೆಡೆಗಿನ ಯತ್ನಕ್ಕೆ ಹುರಿದುಂಬಿಸುವವನು. ಗುರು ಶಿಷ್ಯನ ಸಂಬಂದ ಯಾವತ್ತಿದ್ದರೂ ಪವಿತ್ರ. ಆ ಆದರ್ಶ ಬಾಂದವ್ಯ ಉಜ್ವಲ ಭವಿಷ್ಯಕ್ಕೆ ದಾರಿದೀಪ. ಪ್ರತಿಯೊಬ್ಬರ ಬದುಕಿನಲ್ಲೂ ಶಿಕ್ಷಕರದು ಒಂದು ಪ್ರಮುಖ ಪಾತ್ರ. ಹಾಗಂತ ಎಲ್ಲ ಅಧ್ಯಾಪಕರೂ ಮನದಲ್ಲಿ ಅಚ್ಚಳಿಯದೆ ಉಳಿಯುದಿಲ್ಲ. ಅದರಲ್ಲಿ ಕೆಲವರು ಮಾತ್ರ ನಮ್ಮ ಬದುಕಲ್ಲಿ ಎಂದೂ ಮರೆಯದ ಹಾಡಿನಂತೆ ಸದಾ ನಮ್ಮ ಮನದಲ್ಲಿ ನೆಲೆದು ಕ್ಷಣ ಕ್ಷಣಕ್ಕೂ ನೆನೆಸಿಕೊಳ್ಳುವ ಬಾಳಿನ ಬೆಳಕಾಗಿ ಅಮೂರ್ತ ದ್ರೋಣರಂತಿರುತ್ತಾರೆ. ಯಾಕೆಂದರೆ, ಅವರು ನಮ್ಮ ತಪ್ಪನು ತಿದ್ದಿ ಬುದ್ದಿ ಹೇಳುವಾಗ ನಾವು ನಮ್ಮ ಕಾಲಿಗೆ ಬುದ್ದಿ ಹೇಳಿರುತ್ತೇವೆ. ಕೊಟ್ಟ ಕೆಲಸ ಮಾಡಲು ಆಗದೆ ಅವರು ನಮ್ಮ ಬೆನ್ನ ಹಿಂದೆ ಬಂದಾಗ ರಂಗೋಲಿ ಅಡಿ ನುಸುಳಲು ಯತ್ನಿಸಿದ್ದೇವೆ. ಇದೆಲ್ಲವುಗಳು ನಮಗೆ ಜ್ನಾನ ನೈವೇದ್ಯೆ ನೀಡಿದ ಶಿಕ್ಷಕರನ್ನು ಕಣ್ಣ ಮುಂದೆ ತರುತ್ತವೆ!.

        ಸೆಪ್ಟೆಂಬರ್ 5 ಶಿಕ್ಷಕರ ದಿನ. ದೇಶದ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಕೃಷ್ಣನ್ ಜನ್ಮದಿನ. ಅದಕ್ಕೂ ಮೊದಲು ಯಶಸ್ವಿ ಶಿಕ್ಷಕರಾಗಿದ್ದ ಅವರು ತಮ್ಮ ಜನ್ಮದಿನವನ್ನು ಶಿಕ್ಷರಿಗಾಗಿ ಮೀಸಲಿಟ್ಟರು. ವಿದ್ಯಾರ್ಥಿಗಳ ಸರ್ವತೋಮುಖ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುವ ಶಿಕ್ಷಕರಿಗೆ ನಮ್ಮದೊಂದು ಶಿಕ್ಷಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು. ನಮ್ಮನ್ನು ತಿದ್ದಿ ತೀಡಿ, ಜೀವನವನ್ನೆದುರಿಸಲು ಅಣಿಯಾಗಿಸಿದ ಗುರುಗಳಿಗೆ ಸಾವಿರ ನಮನಗಳು.

Friday 2 September 2016

ವರ್ಷಾರಂಭದ ಎರಡನೇ ಜೈವ ಬೆಳೆ ಕೊಯ್ಲು...
ಪೋಷಕಾಂಶಯುಕ್ತ ಮರಗೆಣಸು ಶಾಲಾ ಮಧ್ಯಾಹ್ನದೂಟಕ್ಕೆ ಹೇಳಿ ಮಾಡಿಸಿದ ಆಹಾರೋತ್ಪನ್ನ.