Saturday 24 December 2016

ಸಂಭ್ರಮದ ಕ್ರಿಸ್ಮಸ್ ಆಚರಣೆ
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿ.23 ರಂದು ಶಾಲಾ ಮಕ್ಕಳು ಅಧ್ಯಾಪಕರೊಂದಿಗೆ
ಸಡಗರದಿಂದ ಹಬ್ಬವನ್ನು ಆಚರಿಸಿದರು. ಗೆಳೆಯರಿಗೆ ತಾವು ತಯಾರಿಸಿದ
ಶುಭಾಶಯ ಪತ್ರಗಳನ್ನು ನೀಡಿದರು. ಮಕ್ಕಳು ಪರಸ್ಪರ ಸಿಹಿ ಹಂಚಿಕೊಂಡರು. ಕ್ರಿಸ್ಮಸ್ ಸ್ಟಾರ್,
ಗೋದಲಿ ರಚಿಸಿ ಮಕ್ಕಳು ಸಂಭ್ರಮಪಟ್ಟರು.











Friday 2 December 2016

CONGRATULATIONS WINNERS..!!
 MANJESHWARA SUB DIST KALOLSAVAM WINNERS IN ARABIC SANGHA GANAM, MAPPILAPAT & ARABI GANAM...

HIBA FATHIMA, ANAS, SINAN, MOIDEEN ASLAH, RAHIMA

Monday 14 November 2016

ಚಟ್ಟಂಚಾಲ್ ಹಯ್ಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ
ಕಾಸರಗೋಡು ರೆವೆನ್ಯೂ ಜಿಲ್ಲಾ ಮಟ್ಟದ ಶಾಸ್ತ್ರ ಮೇಳದಲ್ಲಿ ಸಮಾಜ ವಿಜ್ಞಾನ ಚಾರ್ಟ್ ವಿಭಾಗದಲ್ಲಿ ಪ್ರಥಮ 'ಗ್ರೇಡ್ ಸ್ಥಾನ ಪಡೆದ ಹೇರೂರು ಸರಕಾರಿ ಯಲ್.ಪಿ ಶಾಲಾ ಪುಟಾಣಿಗಳಾದ 
ಮೋಯಿದೀನ್ ಅಸ್ಲಾಹ ಮತ್ತು ಹಿಬಾ ಫಾತಿಮಾ

Tuesday 25 October 2016


CONGRATULATION KIDS...!!

4th Consecutive FIRST place for GBLPS Heroor in LP S.Sc Charts event
In Sub dist Sastrolsavam held at GHSS Kayarkatte


Sunday 2 October 2016


ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.

            ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಅಕ್ಟೋಬರ್ 2 ರಂದು ಜನಿಸಿದ ಮಹಾನ್ ನಾಯಕರ ಭಾವಚಿತ್ರಗಳಿಗೆ ಶಾಲಾ ಮಕ್ಕಳ ಜೊತೆಗೂಡಿ ಪುಷ್ಪಾರ್ಚನೆ ಮಾಡಲಾಯಿತು. ಈ ಮಹಾನ್ ನಾಯಕರ ತ್ಯಾಗ ಬಲಿದಾನಗಳ ಜೀವನ ಕಥೆಗಳನ್ನು ಮಕ್ಕಳಿಗೆ ಹೇಳಲಾಯಿತು. ಗಾಂಧೀ ಕಂಡ ಸ್ವಚ್ಚ ಸುಂದರ ಭಾರತದ ಕನಸಿನಂತೆ "ಸೇವನಾ ವಾರ"ವನ್ನು ಆರಂಭಿಸಲಾಯಿತು. ಶಾಲಾ ಪರಿಸರವನ್ನು ಮಕ್ಕಳೊಂದಿಗೆ ಸೇರಿ ಶುಚಿಗೊಳಿಸಲಾಯಿತು. 



ಸೇವನಾ ವಾರಚಾರಣೆ ಪ್ರಯುಕ್ತ ಮಾಲಿನ್ಯ ಮುಕ್ತ ಶಾಲಾ ಪರಿಸರ ಸ್ವಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಕ್ಕಳು ಅಧ್ಯಾಪಕರು ಶಾಲಾ ಪರಿಸರ ಶುಚಿಗೊಳಿಸಿ  ಸೇವನಾ ವಾರಾಚರಣೆಯಲ್ಲಿ ಪಾಲ್ಗೊಂಡರು.



Friday 9 September 2016

"ಪೂವಿಳಿ ಪೂವಿಳಿ ಪೊನ್ನೋಣಮಾಯಿ
ನೀ ವರು ನೀವರು ಪೊನ್ನೋಣ ತುಂಬಿ..."

ಕೇರಳೀಯರೆಲ್ಲರೂ ತಮ್ಮ ಸಾಂಪ್ರದಾಯಿಕತೆಯನ್ನು ಒರೆಗೆ ಹಚ್ಚಿಕೊಳ್ಳುವ ವಿನೂತನ ಪರ್ವ,
ಜಗತ್ತಿನೆಲ್ಲೆಡೆಯಿರುವ ಕೇರಳೀಯರು ತಮ್ಮ ಜಾತಿ ಮತ ಅಂತಸ್ತು ಬದಿಗೊತ್ತಿ
ಸಮಾನತೆಯಿಂದ, ಸಂಭ್ರಮದಿಂದ ಆಚರಿಸುವ ಒಂದೇ ಹಬ್ಬ ಓಣಂ. ಓಣಂ ವಿಶೇಷತೆಯೇ ಅದು. ಈ ದಿನಗಳಲ್ಲಿ ಕೇರಳ ನಾಡು ತನ್ನ ಸಾಂಪ್ರದಾಯಿಕತೆಯಲ್ಲಿ ಮುಳುಗೇಳುತ್ತದೆ.
ಬಲಿ ಚಕ್ರವರ್ತಿಯ ಓಣಂ ದಿನಗಳಲ್ಲಿ ಭೂಮಿಗೆ ಬರುತ್ತಾನೆಂಬುದು ಇಲ್ಲಿನವರ ನಂಬಿಕೆ.
ಅದರ ಪ್ರತೀಕವಾಗಿ ಬಲಿ ಚಕ್ರವರ್ತಿ, ವಾಮನ ವೇಷಧಾರಿಗಳು ಮನೆಮನೆಗೆ ಬಂದು "ತಿರುಮೇನೀ..." ಎಂದು ಕೂಗು ಹಾಕಿದೊಡನೆ ಮನೆಯ ಯಜಮಾನ ಆತನಿಗೆ ಫಲಾಹಾರಗಳನ್ನು ಕೊಟ್ಟು ಸತ್ಕರಿಸುತ್ತಾನೆ. ಅದಕ್ಕೆ ಪ್ರತಿಯಾಗಿ 'ಮಾವೇಲಿ' ಬಹುಮಾನವಿತ್ತು ವೇಷಧಾರಿ ಹಿಂದಿರುಗುತ್ತಾನೆ. ಈ ಹಬ್ಬದ ವಿಶೇಷತೆಗಳ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವಂತದ್ದಲ್ಲ.. ನಮ್ಮ ಶಾಲೆಯಲ್ಲಿ ಓಣಂ ಸಂಭ್ರಮ ಹೀಗೆ.. ನೋಡಿ...


ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು...





























Monday 5 September 2016


ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಾಲಾ ಪರಿಸರ ಶುಚೀಕರಣ ಕಾರ್ಯ ಕೈಗೊಳ್ಳಲಾಯಿತು. ಶುಚಿತ್ವ,  ನೈರ್ಮಲ್ಯ ಇವು ಆರೋ ಗ್ಯದ ಗುಟ್ಟು. ಈ ವಿಚಾರದಲ್ಲಿ ರಾಜೀ ಬೇಡ.  ವೈಯಕ್ತಿಕ ಶುಚಿತ್ವದ ಜತೆಗೆ ತಮ್ಮ ಶಾಲೆ, ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದರ ಮೂಲಕ ಆರೋಗ್ಯವಂತರಾಗಿ ಬಾಳೋಣ.