Sunday, 21 December 2014

ಹ್ಯಾಪಿ  ಕ್ರಿಸ್ ಸ್ 

 ಕ್ರಿಸ್ ಮಸ್ ಹಬ್ಬವನ್ನು ಮಕ್ಕಳೊಂದಿಗೆ ಆಚರಿಸಲಾಯಿತು. ಮಕ್ಕಳು ಕ್ರಿಸ್ ಮಸ್ ಕೇಕ್ ಮುರಿದು, ಶುಭಾಶಯ ಪತ್ರಗಳನ್ನು ಪರಸ್ಪರ ಹಂಚಿಕೊಂಡು ಭೇದ ಭಾವ ಮರೆತು ಕ್ರಿಸ್ ಮಸ್ ಹಬ್ಬವನ್ನು ಆಚರಿಸಿದರು. ಜಗತ್ತನ್ನು ಉಳಿಸಲು ತನ್ನ ಪುತ್ರನನ್ನು ಕಳುಹಿಸಿಕೊಟ್ಟ ದೇವನಿಗೆ ಕೃತಜ್ಞತೆ ಹೇಳಿದರು.  ಬೆಳಗ್ಗಿನ ಪರೀಕ್ಷೆ ಕಳೆದು ಮಕ್ಕಳು ಕ್ರಿಸ್ ಮಸ್ ಟ್ರೀ, ಗೋದಲಿಯನ್ನು ರಚಿಸಿ ಖುಷಿಪಟ್ಟರು. ಲೋಕಕ್ಕೆ ಬೆಳಕು ನೀಡಲು ಬಂದ ಕ್ರಿಸ್ತ ಜಗದಗಲಕ್ಕೆ ಸಂತೋಷವನ್ನು ತಂದುಕೊಟ್ಟ. ತಾನು ಹುಟ್ಟಿದ್ದು ಕತ್ತಲೆಯ ದನದ ಕೊಟ್ಟಿಗೆಯಲ್ಲಾದರೂ ಆತ ನೀಡಿದ ಬೆಳಕು ಜಗಕ್ಕೆ ದೀವಿಗೆಯಾಗಿದೆ. ಧರ್ಮ, ದೇವರು ವಿಚಾರದಲ್ಲಿ ಯಾವ ಪಂಗಡದಲ್ಲೂ ವ್ಯತ್ಯಾಸ ಇಲ್ಲ, ಕೇವಲ ಆಚರಣೆಯ ಕ್ರಮದಲ್ಲಿ, ಪ್ರಾರ್ಥನಾ ಭಾಷೆಯಲ್ಲಿ ಮಾತ್ರ ವ್ಯತ್ಯಾಸ ಕಾಣಿಸಬಹುದಷ್ಟೇ ಎಂದು ಮಕ್ಕಳು ಕ್ರಿಸ್ ಮಸ್ ಸಂದೇಶವನ್ನು ಸಾರಿದರು. 

ಕ್ರಿಸ್ ಮಸ್ ಗ್ರೀಟಿಂಗ್ಸ್...
ಕ್ರಿಸ್ ಮಸ್ ಕೇಕ್ ...
ಕ್ರಿಸ್ತುವಿನ ಜೀವನ ಕಥನ 
ಮೆಚ್ಚಿನ ಗೆಳೆಯ, ಗೆಳತಿಯರಿಗೆ ಕ್ರಿಸ್ ಮಸ್ ಕೇಕ್ ಜೊತೆ  ಗ್ರೀಟಿಂಗ್ಸ್...



ಕ್ರಿಸ್ ಮಸ್ ಗ್ರೀಟಿಂಗ್ಸ್ ರಚನೆಯಲ್ಲಿ ಮಗ್ನರಾದ ಮಕ್ಕಳು...



ಕ್ರಿಸ್ ಮಸ್ ಗ್ರೀಟಿಂಗ್ಸ್...

2 comments:

M M Surendran said...

Nannayirrikkunnu.ABinandananghal

GBLPS HEROOR said...

Thank you sir... Happy X'mas 2 you.