Tuesday, 31 March 2015

ಹ್ಯಾಪಿ ಸಮ್ಮರ್ ವೆಕೇಷನ್...
ಪರೀಕ್ಷೆ ಕಳೆಯಿತು.. ಇನ್ನು ರಜೆಯ ಕಾಲ... ಮೋಜಿನ ಕಾಲ... ಒಂದಷ್ಟು ಕ್ಲಿಕ್ಕುಗಳು.












Monday, 30 March 2015

Wednesday, 25 March 2015

Wishing you all a Happy Retirement filled with fun and happiness. all the best as you enter into a new phase of your life. May you enjoy the extra time that you'll be spending with them.


Manjeshwar Sub Dist Retiring Head Masters and  Teachers 2014-15

Monday, 23 March 2015

Rashtrakavi M. Govinda Pai Day



 Biography of M. Govinda Pai (1883–1963 )
Manjeshwar Govinda Pai (Kannada: ಮಂಜೇಶ್ವರ ಗೋವಿಂದ ಪೈ), also known as Rastrakavi Govinda Pai, was a Kannada poet. He was awarded the first Rashtrakavi title by the Madras Government (Kasaragod district was part of South Kanara district of Madras state prior to the States reorganisation on 1 November 1956). Rashtrakavi M. Govinda Pai was the one who put Manjeshwar on the literary maps of India. 
Early Life 
M. Govinda Pai was born on 23 March 1883 in a Konkani GSB family at his maternal grandfather's house in Manjeshwar. He was the first son of Mangalore Sahukaar Thimmappa Pai and Devaki Amma. Govinda Pai went to school in Mangalore. For college education, Pai went to Madras (Chennai). Due to the sudden death of his father, he had to return back. 
Career 
Govinda Pai was also a prolific prose writer. His earliest composition in prose was Srikrishna Charita (1909) which provides for remarkable reading. His best works written in blank verse, viz., Golgotha (the last days of Christ, published in 1937), Vaisakhi (The last days of Buddha, published in 1946) and Hebberalu (The Thumb, the story of Ekalavya retold, published in 1946) have won for Govinda Pai a lasting place in the gallery of the greatest poets of Kannada literature. Gommata Jinastuti was his first published work. 
He was able to read and write fluently 25 languages including Tulu, Sanskrit, Telagu, Tamil, Marathi, Bengali, Persian, Pali, Urdu, Greek and Japanese apart from Kannada, Konkani and English. He translated several Japanese works into Kannada. 
Works 
His poems are... 
Gilivindu (1930) (Parrot Flocks) 
His first collection Gilivindu consists of 46 poems exhibits poets perspective towards life, his love for the country, his responsiveness to the nature around him and his love for Kannada. 
Nandadeepa (The enduring lamp) 
His Nandadeepa consisting of 37 poems, a tribute of divotion to God. 
Hrudayaranga 
His other works are... 
Hebberalu (On Ekalavya) , Chitrabhanu (On Quit India movement) , Vaishaki (About the last days f the Buddha),  Mannina Sogadu , Taayi 
               In 1949, the then Madras Government conferred on him the "Rashtrakavi" Award.The other Kannada poet who was conferred "Rashtrakavi" title later was Kuvempu. M.Govinda Pai was the president of Kannada Sahitya Sammelana at Bombay in 1951.  On his 125th birth anniversary, a national award was instituted in his name and his old house at Manjeshwar is mooted to be a national monument.  In Udupi near to his native place, "ಗೋವಿಂದ ಪೈ ಸಂಶೋಧನ ಕೇಂದ್ರ" ( "Research Institute of Govind Pai") is established near MGM College of Dr. T.M.A Pai Foundation of Manipal instituitions. Other centres in the viscinity are Yakshagana & Janapada Samshodhana Kendra, Kanakadasa Peetha and Tulu lexicon project.  Govind Pai was acknowledged by the Kerala government also. The Govind Pai memorial college under Kannur university in Manjeswar is a testimonial for this. Manjeshwara ,though a muslim majority area who predominantly speaks malayalam has always appreciated Govind Pai for his literary efforts.

Thanks  to Google.

Sunday, 22 March 2015

ಇಂದು ವಿಶ್ವ ಜಲ ದಿನ...

 


ವಿಶ್ವದ ಸಮಸ್ತ "ಜೀವಜಂತು" ಗಳಿಗೆ "ಜೀವತಂತು" ಈ ಜಲ. ೭೦೦ ಕೋಟಿ  ಮಾನವ ಪ್ರಾಣಿಗಳು ಮತ್ತು ಅದೆಷ್ಟೋ ಲೆಕ್ಕವಿರದ ಸಂಖ್ಯೆಯ ಮಾನವೇತರ ಜೀವಿಗಳಿಗೆ ನೀರು ಜೀವನಾಧಾರ. ಮಾನವನ ದೇಹದ ಒಟ್ಟೂ ತೂಕದಲ್ಲಿ ೬೦-೬೫% ಭಾಗ ನೀರೇ ಎಂಬುದು ವೈಜ್ಞಾನಿಕ ಸತ್ಯ. ಮಾನವನಿರಬಹುದು, ಇತರೆ ಪ್ರಾಣಿ ಪಕ್ಷಿಗಳಿರಬಹುದು,ಇಲ್ಲವೇ ಸಸ್ಯ ಸಂಕುಲವಿರಬಹು ಇವೆಲ್ಲವುದಕ್ಕೂ ನೀರು ಅತ್ಯಮೂಲ್ಯ. ವರ್ತಮಾನದಲ್ಲಿ ಸಂಶೋಧನೆಗಳು ಹೇಳಿರುವಂತೆ ಈ "ಕ್ಷೀರಪಥ ತಾರಾಗಣ"ದಲ್ಲಿ  ಭೂಮಿಮಾತ್ರ ಮಾನವ ವಾಸಯೋಗ್ಯ ತಾಣ  ಮತ್ತು  ಶುದ್ಧ ಸಿಹಿನೀರು ಸಿಗುವ ಏಕೈಕ ಗ್ರಹ. ಆದರೆ ಇದನ್ನು ಅರ್ಥೈಸಿಕೊಳ್ಳದ ನಾವು ನೀರನ್ನು ಯತೆಚ್ಚವಾಗಿ ಬಳಸಿ ನೈಸರ್ಗಿಕ ಸಂಪತ್ತನ್ನು ಹಾಳುಗೆಡವುತ್ತಿದ್ದೇವೆ. ನೈಸರ್ಗಿಕ ಸಂಪತ್ತನ್ನು ದುರ್ವಿನಿಯೋಗ ಮಾಡುತ್ತಿದ್ದೇವೆ.

ಇದೆಲ್ಲವುದರ ಅರಿವುಗಳ ನಡುವೆ, ಮತ್ತದೇ ಗೊಣಗಾಟಗಳ ನಡುವೆ, ಇನ್ನೊಂದು "ವಿಶ್ವ ಜಲ ದಿನ" ಸದ್ದಿಲ್ಲದೇ ಆಗಮಿಸಿ, ಸರಿದು ಹೋಗುತ್ತಿದೆ. ಹೌದು ಇಂದು ಮಾರ್ಚ್ ೨೨ "ವಿಶ್ವ ಜಲ ದಿನ". ನಿಜವಾದ ಅರ್ಥದಲ್ಲಿ ಪ್ರತಿಯೊಬ್ಬ ನಾಗರೀಕನಿಗೂ ಇದರ ಮಹತ್ವವನ್ನು ಸಾರಿ ಹೇಳುವ, ಅರ್ಥಮಾಡಿಸುವ ಅಗತ್ಯವಿದೆ. ಈ ನೈಸರ್ಗಿಕ ಸಂಪತ್ತುಗಳು ನಮ್ಮ ಭವಿಷ್ಯದ ನಾಗರೀಕತೆಯ ಸೊತ್ತು ಎನ್ನುವುದನ್ನೂ ತಿಳಿಸಬೇಕಿದೆ. ಒಬ್ಬ ಸಾಧಾರಣ ನಾಗರೀಕನಾಗಿ "ಜಲ ಸಂಪತ್ತನ್ನು ಉಳಿಸಲು" ನಾವೇನು ಮಾಡಬಹುದೆಂದು ಅರಿಯುವ ಕಾರ್ಯವಾಗಬೇಕಿದೆ.
            ಜಗತ್ತಿನ ದೊಡ್ಡಣ್ಣ ಭಯೋತ್ಪಾದನೆ ನಿರ್ಮೂಲನೆಯ ಹೆಸರಲ್ಲಿ, ಸ್ವಾರ್ಥ ಸಾಧನೆಗಾಗಿ , ತೈಲ ನಿಕ್ಷೇಪಗಳನ್ನು ಕೊಳ್ಳೆ ಹೊಡೆಯಲು, ಮಹಾಯುದ್ದಗಳನ್ನು , ಭೀಕರ ಕಾದಾಟಗಳನ್ನು ನಡೆಸಿದಂತೆ, ಮುಂದೊಂದು ದಿನ ಜಗತ್ತಿನ ಎಲ್ಲ ದೇಶಗಳೂ ಹನಿ ನೀರಿಗಾಗಿ ಹೊಡೆದಾಡಬಹುದು. ಜಲಕ್ಷಾಮ ಎಂಬುದು ಮನುಕುಲದ ಕ್ಷಯವಾಗುವುದಕ್ಕೆ ದಾರಿಯಾಗಬಹುದು.ಅಂತ:ದಿನಗಳು ಬರುವಮೊದಲೇ ಎಚ್ಚೆತ್ತುಕೊಂಡು, ಕಾರ್ಯತತ್ಪರವಾಗುವುದು ಜಾಣತನವಲ್ಲವೇ?...

ಕೃಪೆ : ಬಲ್ಲ ಮೂಲಗಳಿಂದ 

Friday, 20 March 2015

ಯುಗಾದಿ ಹಬ್ಬ: ಸಹಬಾಳ್ವೆ-ಸಮನ್ವಯ ಜೀವನಕ್ಕೆ ನಾಂದಿ


ಯುಗ-ಯುಗಾದಿ ಕಳೆದರೂ 
ಯುಗಾದಿ ಮರಳಿ ಬರುತಿದೆ 
ಹೊಸವರುಷಕೆ-ಹೊಸಹರುಷವ 
ಹೊಸತು ಹೊಸತು ತರುತಿದೆ
- ದ.ರಾ.ಬೇಂದ್ರೆ

          ಹೌದು. ಪ್ರಕೃತಿಯು ತನ್ನ ಹಳೆಯ ತೊಗಲನ್ನು ಬಿಟ್ಟು ಹೊಸತೊಗಲನ್ನು ಮೈವೆತ್ತುತ್ತಾ ಬರುವ ಈ ಸುಸಮಯದಲ್ಲಿ ಇಡೀ ನಾಡು ಹೊಸತನದ ಗೆಟಪ್ಪಿನಲ್ಲಿದೆ. ಗಿಡ-ಮರ-ಬಳ್ಳಿಗಳು ತಮ್ಮ ಹಳೆಯ ರೂಪವನ್ನು ಬದಲಾಯಿಸಿಕೊಂಡು ಹೊಂಬಣ್ಣದ ಚಿಗುರೆಲೆಯನ್ನು ಹೊದ್ದು ಚಿನ್ನಾಟವಾಡುತ್ತಾ ತೂಗಾಡುತ್ತಿವೆ. ಸಂತನ ಆಗಮನದಿಂದ ಪುಳಕಿತರಾದಂತೆ ಇಡೀ ನಾಡು ತೋರುತ್ತಿದೆ. ಇಂತಹ ಹೊತ್ತಲ್ಲಿ ಇದಕ್ಕೆ ಸೆಡ್ಡು ಹೊಡೆಯುವಂತೆ ಸೂರ್ಯನು ತನ್ನ ರಣಬಿಸಿಲಿನಝಳವನ್ನು ತೋರುತ್ತಾ ಕುಹಕವಾಡುವಂತೆ ಜನರು ಬೆವರಲ್ಲಿ ಮೀಯುತ್ತಾ ಬಸವಳಿದಿದ್ದಾರೆ.
ಆದರೂ ವಸಂತ ಋತುವಿನ ಚೆಲುವು, ಮೋಹಕತೆಗೆ ಆನಂದ ತುಂದಿಲರಾಗಿದ್ದಾರೆ. ಅಲ್ಲದೆ, ಬಿಸಿಲ ಬೇಗೆಯ ನಿವಾರಣೆಗೆ ಮದ್ದೆಂಬಂತೆ ಹೊಂಗೆಯ ನೆರಳು, ತುಂಗೆಯ ಕಂಪು, ಬೇವು-ಮಾವುಗಳ ಗೊಂಚಲು- ಗೊಂಚಲುಗಳ ತೊನೆದಾಟ ಬಸವಳಿದ ಮನಕ್ಕೆ ಉಲ್ಲಾಸ ನೀಡುವಂತಿದೆ. ಬಿಸಿಲ ಬೇಗೆಯನ್ನು ತುಂಗೆ ಹೂವಿನ ಕಂಪು, ಮರಿದುಂಬಿಗಳ ಝೇಂಕಾರ, ಹೊಂಗೆ ಮರದ ನೆರಳು ಕೊಂಚ ತಗ್ಗಿಸುವಂತಿವೆ... ಭಾರತೀಯ ಸಂಸ್ಕೃತಿಯಲ್ಲಿ 'ಯುಗಾದಿ ಹಬ್ಬ'ಕ್ಕೆ ತನ್ನದೇ ಆದ ಒಂದು ಅತ್ಯುನ್ನತವಾದ ಸಾಂಸ್ಕೃತಿಕ ಮಹತ್ವವಿದೆ.
              ಆದುದರಿಂದ ಭಾರತೀಯರು ಅದರಲ್ಲೂ ದಕ್ಷಿಣ ಭಾರತದವರಲ್ಲಿ ಕರ್ನಾಟಕದ ಜನರು ತಮ್ಮ ಹೊಸ ವರುಷದ ದಿನವು 'ಯುಗಾದಿ'ಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ.
ಹೀಗೆ, ಯುಗಾದಿ ಹಬ್ಬವು ಜನರಲ್ಲಿ ಸಂಭ್ರಮ-ಸಡಗರ ನೀಡುವ ಜೊತೆಗೆ ಅವರ ಮನದಲ್ಲಿ ಹೊಸಭರವಸೆ, ಆಶಯ, ಗುರಿ, ಉದ್ದೇಶ, ಬಯಕೆ, ಕನಸನ್ನು ಚಿಗುರಿಸುತ್ತಾ ನವವರುಷಕ್ಕೆ ಆಶಾಕಿರಣವಾಗಿ ಬರುತ್ತಿದೆ; ಬಂದಿದೆ.
ಗ್ರಾಮೀಣರ ಆಡುಮಾತಿನಲ್ಲಿ ಹೇಳುವುದಾದರೆ, ಯುಗಾದಿಯು "ಉಗಾದಿ" ಎನಿಸಿಕೊಳ್ಳುತ್ತದೆ. ಉಗಾದಿ ಹಬ್ಬವು ಶಿಶಿರ ಋತು ಕಳೆದು ವಸಂತನಾಗಮನದ ಮೊದಲ ಹಬ್ಬ. ಇದು ಭಾರತೀಯರ ಪಾಲಿಗೆ 'ನವ ಮನ್ವಂತರ'. ಅಲ್ಲದೆ, ಇದು ಭಾರತೀಯರಾದ ನಮ್ಮ ಪಾಲಿಗೆ 'ಹೊಸವರುಷ'
ಮೊದಲ ದಿನ. ಯುಗಾದಿಯಂದು ಹರಳೆಣ್ಣೆಯನ್ನು ಮೈ- ಕೈಗೆ ಹಚ್ಚಿಕೊಂಡು, ಸ್ನಾನಮಾಡಿ, ಹೊಸಬಟ್ಟೆ ತೊಟ್ಟು ಸಂಭ್ರಮಿಸುವುದು ವಾಡಿಕೆ. ಅಲ್ಲದೆ ಅಂದು ಜೀವನದ ಸಮನ್ವಯ ಸೂತ್ರದ ಸಂಕೇತವಾದ 'ಬೇವು-ಬೆಲ್ಲ ತಿನ್ನುವುದು' ಒಂದು ಸತ್ಸಂಪ್ರದಾಯಕ್ಕೆ ಬರೆದ ಮುನ್ನುಡಿಯಾಗುತ್ತದೆ. ಬೇವು-ಬೆಲ್ಲ ತಿನ್ನುವುದರ ಮೂಲ ಉದ್ದೇಶವಿಷ್ಟೆ; ಕಷ್ಟ-ಸುಖ, ನೋವು ನಲಿವು ಪ್ರತಿಯೊಬ್ಬರ ಬಾಳಲ್ಲಿ ಸಮನಾಗಿರಲಿ ಎಂಬುದು. ಇಂಥ ಸದ್ಭಾವನೆಯನ್ನು ಯುಗಾದಿ ಎಲ್ಲರಿಗೂ ತಿಳಿಸುತ್ತದೆ.
ನಲಿವಿನ ಧ್ಯೋತಕ-ಯುಗಾದಿ:
            ಭಾರತೀಯ ಸಂಸ್ಕೃತಿಯಲ್ಲಿ 'ಯುಗಾದಿ ಹಬ್ಬ'ಕ್ಕೆ ತನ್ನದೇ ಆದ ಒಂದು ಅತ್ಯುನ್ನತವಾದ ಸಾಂಸ್ಕೃತಿಕ ಮಹತ್ವವಿದೆ. ಆದುದರಿಂದ ಭಾರತೀಯರು ಅದರಲ್ಲೂ ದಕ್ಷಿಣಭಾರತದವರಲ್ಲಿ ಕರ್ನಾಟಕದ ಜನರು ತಮ್ಮ ಹೊಸವರುಷದ ದಿನವು 'ಯುಗಾದಿ'ಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ. ಅದಕ್ಕಾಗಿಯೇ ಅಂದು ತಮ್ಮ ನೆಂಟರಿಷ್ಟರು, ಬಂಧು- ಬಾಂಧವರು, ಕುಟುಂಬವರ್ಗದವರೆಲ್ಲರೂ ಒಂದೆಡೆ ಸೇರಿ ಯುಗಾದಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ತೊಡಗುತ್ತಾರೆ. ಅದಕ್ಕಾಗಿಯೇ ದೊಡ್ಡ ಮರಗಳಿಗೆ ಜೋಕಾಲಿಗಳನ್ನು ಕಟ್ಟಿ ಉಯ್ಯಾಲೆಯಾಡುತ್ತಾ ಕೇಕೆ ಹಾಕಿ ಸಂಭ್ರಮಿಸುತ್ತಾ, ಖುಷಿಪಡುತ್ತಾರೆ.ಇಂತಹ ಸಂಭ್ರಮದ ನೋಟಗಳನ್ನು ಕಾಣಬೇಕಾದರೆ ಗ್ರಾಮೀಣ ಭಾಗಕ್ಕೇ ಹೋಗಬೇಕು. ಆದರೆ, ಶುದ್ಧ ಮನರಂಜನಾತ್ಮಕವಾದ ಇಂಥ ಸಂಭ್ರಮದ ನೋಟಗಳು ನೋಡಲು ಇಂದು ವಿರಳವಾಗಿವೆ.
ಒಲವು ವೃದ್ಧಿಯ ಯುಗಾದಿ:
             ನಾವು ಸಂಬಂಧಗಳನ್ನೇ ಅನುಮಾನದಿಂದ ನೋಡುವಂತಹ ಪರಿಸ್ಥಿತಿಯ ದಿನಮಾನದಲ್ಲಿ ಯುಗಾದಿ ಹಬ್ಬವು, ಪರಸ್ಪರರಲ್ಲಿ ಒಲವು ವೃದ್ಧಿಸುವಂತಹ ಆಚರಣೆಯಾಗಿದೆ. ಕೆಲಸ-ಕಾರ್ಯದ ಕಾರಣದಿಂದಲೋ ಮತ್ಯಾವುದೋ ಕಾರಣದಿಂದಲೋ ಅಪರೂಪಕ್ಕೆ ಒಂದೆಡೆ ಸೇರುವ, ವೈಮನಸ್ಸಿನ ಕಾರಣದಿಂದಲೋ ದೂರಾಗಿರುವ ಸಂಬಂಧಿಕರನ್ನು ಮತ್ತೆ ಒಂದೆಡೆ ಸೇರಿಸುವಲ್ಲಿ ಇಂತಹ ಹಬ್ಬ-ಆಚರಣೆಗಳು ಸಹಕಾರಿಯಾಗುತ್ತವೆ. ಅಲ್ಲದೆ, ಅಷ್ಟೇನೂ ಆಪ್ತರಾಗಿಲ್ಲದ, ಪರಸ್ಪರ ಗೌರವ, ಪ್ರೀತಿ, ವಿಶ್ವಾಸವಿರದವರ ನಡುವೆ ಆತ್ಮೀಯತೆ ಬೆಳೆಯಲು ಇವು ನಾಂದಿಯಾಡುತ್ತವೆ. ಕನ್ನಡದ ಶ್ರೇಷ್ಠ ಕವಿ ದ.ರಾ.ಬೇಂದ್ರೆ ಯವರ ಕವಿತೆ, 'ನಾನು ಬಡವ, ಆಕೆ ಬಡವಿ; ಒಲವೇ ನಮ್ಮ ಬದುಕು' ಎಂಬಂತೆ, ಯುಗಾದಿ ಹಬ್ಬವು ಎಲ್ಲರಲ್ಲೂ ಪ್ರೀತಿ, ವಿಶ್ವಾಸ, ಗೌರವ ಮನೋಭಾವನೆಯ ಒರತೆಯನ್ನು ಉಕ್ಕಿಸುತ್ತದೆ.
ಸಹಬಾಳ್ವೆ-ಸಮನ್ವಯಕ್ಕೆ ನಾಂದಿ:
              ಯುಗಾದಿ ಹಬ್ಬದಂದು ಬೇವು-ಬೆಲ್ಲ ತಿನ್ನುವ ಆಚರಣೆಯು ಒಂದು ವಿಶಿಷ್ಟ ಪರಿಕಲ್ಪನೆಯೇ ಸರಿ. ಸಿಹಿ-ಕಹಿ, ಸುಖ-ಕಷ್ಟ, ನಲಿವು-ನೋವು ಎಂಬ ಮಾತಿನಂತೆ, ಜೀವನದಲ್ಲಿ ಇವೆರಡರ ಸಮಾನ ಇರುವಿಕೆ ಅಗತ್ಯವಾಗಿದೆ. ಆಗ ಮಾತ್ರ ಜೀವನ ಸುಗಮವಾಗಿ ಸಾಗಲು ಸಾಧ್ಯ. ಆದರೆ, ಕಷ್ಟಕ್ಕಿಂತ ಸುಖವೇ ಬೇಕು ಎಂದು ಬಯಸುವವರು ಹೆಚ್ಚಿರುವ ಪರಿಸ್ಥಿತಿಯಲ್ಲಿ ಕಷ್ಟವನ್ನು, ಕಹಿಯನ್ನು, ನೋವನ್ನು ಬಯಸುವವರೇ ಇಲ್ಲವೆನ್ನುವಂತಾಗಿದೆ. ಆದರೆ, ಜೀವನ ಎನ್ನುವುದು ಕಷ್ಟ-ಸುಖಗಳ ಸಂಯೋಜನೆಯಾಗಿದೆ. ಹಾಗಾಗಿ, ಇವೆರಡು ಒಂದನ್ನೊಂದು ಬಿಟ್ಟಿರಲಾರವು. ಇವು ಒಂಥರಾ ಕತ್ತಲು-ಬೆಳಕು, ರಾತ್ರಿ-ಹಗಲು ಹೇಗೆ ಒಂದನೊಂದು ಬಿಟ್ಟಿರಲಾರವೋ ಹಾಗೆಯೇ ಕಷ್ಟವಿಲ್ಲದೆ, ಸುಖವಿಲ್ಲ; ಸುಖವಿಲ್ಲದೆ ಕಷ್ಟವಿಲ್ಲ ಎಂಬುದು ಸತ್ಯವಾಗಿದೆ. ಈ ಆಶಯದಂತೆ ನಾವು ಯುಗಾದಿ ಹಬ್ಬದಲ್ಲಿ ಬೇವು- ಬೆಲ್ಲವನ್ನು ಹಂಚಿ ತಿನ್ನುತ್ತೇವೆ.
           ಕೂಡಿ ಬಾಳಿದರೆ ಸ್ವರ್ಗಸುಖ ಎಂಬುದು ಯುಗಾದಿ ಹಬ್ಬದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಜೀವನದಲ್ಲಿ ಏನೇ ಏರುಪೇರಾದರೂ ಸರ್ವರೂ ಸುಖದಿಂದ, ಸಮನ್ವಯದಿಂದ, ಒಟ್ಟಾಗಿ ಬಾಳಬೇಕೆನ್ನುವ ಆಶಯವೂ ಇದರಲ್ಲಿದೆ. ಆ ಮೂಲಕ ಸ್ವರ್ಗಕ್ಕೆ ಕಿಚ್ಚುಹಚ್ಚುತ್ತಾ ಬಾಳುವೆ ನಡೆಸಬೇಕು. 'ಸುಖಜೀವನ' ನಡೆಸುವುದೇ ಸ್ವರ್ಗದ ಹೋಲಿಕೆಗಿರುವ ಮತ್ತೊಂದು ಶಬ್ದ. ಇಂತಹ ಉತ್ತಮೋತ್ತಮ ನಡೆ, ಗುಣಗಳನ್ನು, ಬಿತ್ತುವುದಕ್ಕೆ ಯುಗಾದಿ ನಾಂದಿಯಾಗಲಿದೆ. ಜನರಲ್ಲಿ ಹಳತಾದುದರ ಕೊನೆಯೇ ಹೊಸತನಕ್ಕೆ ಆರಂಭ.
          ನಾವು ಯಾವುದೇ ಹೊಸದು ಬಂದಮೇಲೆ ಹಳೆಯದರ ಕುರಿತು ಅಸಡ್ಡೆ ಹೊಂದುವುದು ಸಾಮಾನ್ಯ. ಆದರೆ, ಹೊಸತಾದುದು ಬರಲು ಹಳೆಯದು ಅವಕಾಶ ಮಾಡಿಕೊಡದಿದ್ದರೆ ಹೊಸದು, ಹೊಸತನ ಬರಲು ಹೇಗೆ ಸಾಧ್ಯ? ಆದುದರಿಂದ ಹೊಸತನದ, ಹೊಸದರ ಆರಂಭವಾಗಲು 'ಹಳೆಯದರ' ಪಾಲು, ಸಹಾಯ, ಸಹಕಾರ ಪ್ರಮುಖವಾಗಿದೆ. ಹಾಗಾಗಿ, ಹೊಸತು-ಹಳತು ಎಂಬುವು ಪ್ರಕೃತಿಯ ಬದಲಾವಣೆಯ ಎರಡು ಮುಖಗಳು.
ಇವೆರಡರಲ್ಲಿ ಯಾವುದಿರದಿದ್ದರೂ ಮತ್ತೊಂದಕ್ಕೆ ಬೆಲೆಯಿರುವುದಿಲ್ಲ. ಈ ವಿಷಯವಾಗಿ ಯುಗಾದಿ ಹಬ್ಬವು ಮೌನವಾಗಿಯೇ ಜನರಲ್ಲಿ ಅರಿವನ್ನು ಮೂಡಿಸುತ್ತದೆ.
             ಅದಕ್ಕೆಂತಲೇ ಯುಗಾದಿ ಅಂದರೆ, ಮತ್ತೊಂದು ಯುಗದ ಆದಿ; ಆರಂಭ; ಮನ್ವಂತರದ ಬದಲಾವಣೆಯ ಕಾಲ. ಈ ನವಮನ್ವಂತರವು ಸಕಲ ಜೀವಾತ್ಮರಿಗೂ ಲೇಸನ್ನು ತರಲಿ ಎಂಬುದು ಎಲ್ಲರ ಆಶಯವಾಗಲಿ; ಅದು ಪ್ರತಿಯೋರ್ವರ ಆತ್ಮಸಿದ್ಧಿಯ ಭಾವಮಂತ್ರವಾಗಲಿ.

ನಮ್ಮ ಶಾಲಾ ಶಿಕ್ಷಕ ತಂಡ ಮತ್ತು ಮಕ್ಕಳ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳು.


ಕೃಪೆ: ಬಲ್ಲ ಮೂಲಗಳಿಂದ 


Thursday, 19 March 2015

I ನೇ ಮತ್ತು II ನೇ ತರಗತಿ ಮಕ್ಕಳಿಗೆ ವಾಲ್ ಫ್ಯಾಂಟಸಿ ಸ್ಟೋರಿ ಫ್ಲೆಕ್ಸ್ ... 
# ಕೊಡುಗೆ ಪ್ರವೀಣ್ ಕುಮಾರ್. Asst Teacher




ನಮ್ಮ ಶಾಲಾ ಪುಟ್ಟ ಹಸಿರು ತರಕಾರಿ ತೋಟ 

 ವರ್ಷದ ಎರಡನೇ ಬಾರಿ ಕೊಯ್ಲು