Tuesday, 26 January 2016
Friday, 1 January 2016
ನವ ವರುಷದ 2016 ಶುಭ ಹಾರೈಕೆಗಳು
ಹೊಸ ವರುಷ ಬರಲಿ
ಹೊಸ ಹರುಷ ತರಲಿ
ಹಳೆಯದನು ಹಿಂದೆ
ದೂಡಿ
ಹೊಸ ಹಾಡ ಕೇಳಿ
ಹೊಸ ಭಾವ ತಾಳಿ
ಜನ ನಿಲಲಿ ಒಂದು
ಗೂಡಿ
ಮತ ಭೇದ, ರೋಷ
ಮತ್ಸರವು, ದ್ವೇಷ
ಕೊಲೆ, ಸುಲಿಗೆ, ಹಿಂಸೆ ತೊಲಗಿ-
ಸೌಹಾರ್ದ ಬೆಳೆದು
ಮನ ಮನವ ಬೆಸೆದು
ಸುಖ-ಶಾಂತಿ-ಪ್ರೀತಿ-ಬೆಳಗಿ-
ಮನೆ ಮನೆಯ ಜನಕು
ನೆಮ್ಮದಿಯ ಬದುಕು
ಸಿಗುವಂಥ ಸುದಿನ
ಬರಲಿ
ಸೌಭಾಗ್ಯ ಮಿಕ್ಕಿ
ಸಂತೋಷ ಉಕ್ಕಿ
ಜಗದಗಲ ಹರಿಯುತಿರಲಿ
ಚಿತ್ರ ಮತ್ತು ಕವನ ಕೃಪೆ: ಗೂಗಲ್
Subscribe to:
Posts (Atom)