ನೆಚ್ಚಿನ ಮುಖ್ಯಶಿಕ್ಷಕರಿಗೆ ವಿದಾಯ
ಸಮಾರಂಭ...
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ನಮ್ಮ ವಿದ್ಯಾಲಯದಿಂದ ನಿವೃತ್ತಿ
ಜೀವನಕ್ಕೆ ಕಾಲಿಡುತ್ತಿರುವ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಶ್ರೀ ಅಬ್ಬಾಸ್ .ಕೆ ಅವರಿಗೆ
ಶಾಲಾ ರಕ್ಷಕ-ಶಿಕ್ಷಕ ವೃಂದದಿಂದ ಬೀಳ್ಕೊಡುಗೆ ಸಮಾರಂಭವು 30 ಮಾರ್ಚ್ 2016 ರಂದು ಜರಗಿತು. ಪಂಚಾಯತ್ ಸದಸ್ಯರಾದ ಶ್ರೀಮತಿ ರೇವತಿ ನಾಯ್ಕ್ ಸಭೆಯನ್ನು
ಉದ್ಘಾಟಿಸಿದರು. ನಿವೃತ್ತರಾಗುತ್ತಿರುವ ಅಭಾಸ್.ಕೆ ಅವರಿಗೆ ಶಾಲು ಹೊದೆಸಿ, ನೆನಪಿನ ಕಾಣಿಕೆ, ಫಲ
ಪುಷ್ಪಗಳನ್ನು ನೀಡಲಾಯಿತು. ಸುಮಾರು 33 ವರ್ಷಗಳ ಸೇವಾ ಜೀವನದಿಂದ ನಿವೃತ್ತರಾಗುವ ನೆಚ್ಚಿನ ಮುಖ್ಯಶಿಕ್ಷಕರಿಗೆ
ಎಲ್ಲರೂ ಶುಭಕೋರಿದರು. ಯಸ್.ಎಂ.ಸಿ ಅಧ್ಯಕ್ಷ ಸಿದ್ದಿಕ್, ಯಸ್.ಯಸ್.ಜಿ ಸದಸ್ಯ ಶ್ರೀ ಕೃಷ್ಣ ಹೆಬ್ಬಾರ್,
ನೆರೆಯ ಶಾಲಾ ಶಿಕ್ಷಕ ಸಜೀವನ್, ಶಾಲಾ ಶಿಕ್ಷಕರಾದ ಕೃಷ್ಣಕುಮಾರ್, ಪ್ರವೀಣ್, ಪೂರ್ಣಿಮಾ, ಫಾತಿಮಾ
ಮುಂತಾದವರು ಉಪಸ್ತಿತರಿದ್ದರು.
No comments:
Post a Comment