Thursday, 1 June 2017


ಸಡಗರದ ಶಾಲಾ ಪ್ರವೇಶೋತ್ಸವ

          2017-18 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರವೇಶೋತ್ಸವವನ್ನು ನವಾಗತ ಪುಟಾಣಿಗಳೊಂದಿಗೆ ಸಡಗರ ಹಾಗೂ ವಿನೂತನವಾಗಿ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ  ಗೀತ. ಕೆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಾ ಪುಷ್ಪಗುಚ್ಛ ನೀಡಿ ನೂತನ ಪುಟಾಣಿಗಳನ್ನು ಬರಮಾಡಿಕೊಂಡರು. ಪಂಚಾಯತ್ ಸದಸ್ಯೆ ಶ್ರೀಮತಿ ರೇವತಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಬರಹ ಲೋಕಕ್ಕೆ ಕಾಲಿಟ್ಟ ಹೊಸ ಕಂದಮ್ಮಗಳಿಗೆ ಪಠ್ಯ ಪುಸ್ತಕ, ಕಲಿಕಾ ಕಿಟ್  ನೀಡಿ ಹಾರೈಸಿದರು. SMC ಅಧ್ಯಕ್ಷೆ ವನಜ ಶುಭಾಶಂಸನೆಗೈದರು. ಶಾಲಾ ಅಧ್ಯಾಪಕರಾದ ಕೃಷ್ಣ ಕುಮಾರ್, ಪ್ರವೀಣ್ ಹಾಡುಗಳು ಮತ್ತು ಆಟಗಳ ಮೂಲಕ ಮಕ್ಕಳನ್ನು ರಂಜಿಸುತ್ತಾ ಸಿಹಿ ಹಂಚಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಶಿಕ್ಷಕಿ ದೀಕ್ಷಿತಾ ವಂದಿಸಿದರು.. 














1 comment:

Unknown said...

Good Job
Book online bus ticket from Redbus