Saturday, 5 September 2015

ಶ್ರೀ ಕೃಷ್ಣಾಷ್ಟಮಿ ಶುಭಾಶಯಗಳು..



ಶ್ರೀ ಕೃಷ್ಣ ಜನ್ಮಾಷ್ಟಮಿ/ಗೋಕುಲಾಷ್ಟಮಿ ಹಬ್ಬವನ್ನು ಶ್ರವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಆಚರಿಸುತ್ತಾರೆ. ಇದು ಶ್ರೀ ಕೃಷ್ಣನ ಜನ್ಮದಿನ. ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಅ೦ದು ರೋಹಿಣಿ ನಕ್ಷತ್ರದಲ್ಲಿ ಚ೦ದ್ರೋದಯ ಸಮಯದಲ್ಲಿ ಮಥುರಾದ ವಸುದೇವ ಮತ್ತು ದೇವಕಿಯರ ಮಗನಾಗಿ ಜನಿಸಿದ. ಭಾರತ ಹಾಗೂ ವಿದೇಶೀ ನೆಲದಲ್ಲಿಯೂ ಪ್ರಖ್ಯಾತವಾಗಿದೆ ಶ್ರೀ ಕೃಷ್ಣ ಜನ್ಮಾಷ್ಟಮಿ/ಗೋಕುಲಾಷ್ಟಮಿ ಆಚರಿಸಲಾಗುತ್ತದೆ  ಕೃಷ್ಣನ ಭಕ್ತರುವಿಶ್ವದ ನಾನಾ ಮೂಲೆಗಳಲ್ಲಿರುವುದರಿಂದ ಇದು ಅಷ್ಟು ಪ್ರಖ್ಯಾತವಾಗಿದೆ. ಕೃಷ್ಣಾಷ್ಟಮಿಯನ್ನು ಎರಡು ದಿನಗಳಲ್ಲಿ ಆಚರಿಸಲಾಗುತ್ತದೆ. ಮೊದಲನೆ ದಿನ ಹುಟ್ಟಿದ ಸಂಭ್ರಮವಾದರೆ ಮಾರನೆಯ ದಿನ ಕಾರ್ಯಕ್ರಮಗಳು ವಿಜೃಂಭಿಸುತ್ತವೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡುಗಳಲ್ಲಿ  ಕೃಷ್ಣಾಷ್ಟಮಿ ಬಹಳ ವೈಭವೋಪೇತವಾಗಿ ನಡೆಯುತ್ತದೆ.ಉತ್ತರಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ಮಥುರಾದಲ್ಲಿ ಜುಲನೋತ್ಸವ ಪ್ರಸಿದ್ಧಿ.ದೇವಸ್ಥಾನಗಲ್ಲಿ ,ಮನೆಮನೆಗಳಲ್ಲಿ ಉಯ್ಯಾಲೆ ತೊಟ್ಟಿಲು ಕಟ್ಟುತ್ತಾರೆ.ಅಷ್ಟಮಿಗೆ ತಿಂಗಳ ಮುಂಚೆಯೇ ಈ ತಯಾರಿ ,ಸಂಭ್ರಮ ನಡೆಯುತ್ತದೆ.
          ಜನ್ಮಾಷ್ಟಮಿಯಂದು ಅನೇಕ ಆಧ್ಯಾತ್ಮಿಕ ಆಚರಣೆ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಉದಾಹರಣೆಗೆ: ಉಪವಾಸಮಾಡುವುದು ಈ ಹಿಂದೂ ಹಬ್ಬದಲ್ಲಿ ಸಾಮಾನ್ಯ ಆಚರಣೆಯಾಗಿದೆ. ಇದನ್ನು ಜನ್ಮಾಷ್ಟಮಿ ವ್ರತವೆಂದು ಕರೆದು, ಕೃಷ್ಣನ ಭಕ್ತರು 24 ಗಂಟೆಗಳ ಕಾಲ ಉಪವಾಸವನ್ನು ಮಾಡುತ್ತಾರೆ. ಜನ್ಮಾಷ್ಟಮಿ ಉಪವಾಸಮಾಡುವಾಗ ಕೆಲವರು ಹಣ್ಣನ್ನು ತಿಂದರೆ ಇನ್ನುಳಿದವರು ಏನನ್ನೂ ತಿನ್ನದೆ ಕೇವಲ ನೀರನ್ನು ಮಾತ್ರ ಕುಡಿದು ಮಧ್ಯರಾತ್ರಿಯವರೆಗೆ ಪ್ರಾರ್ಥನೆ ಮಾಡುತ್ತಿರುತ್ತಾರೆ. ಶ್ರೀ ಕೃಷ್ಣನು ಮಧ್ಯರಾತ್ರಿ 12 ಗಂಟೆಗೆ ಜನ್ಮತಾಳಿದನೆಂದು ಜನಗಳ ನಂಬಿಕೆ. ಈ ಸಮಯದಲ್ಲಿಯೇ ಭಕ್ತರು ತುಂಟ ‘ಮಾಖನ್ ಚೋರ್' (ಬೆಣ್ಣೆ ಕಳ್ಳ) ಕೃಷ್ಣನನ್ನು ಕುರಿತು ಪ್ರಾರ್ಥನೆ ಮಾಡಿದ ನಂತರ ಉಪವಾಸವನ್ನು ಕೊನೆಗೊಳಿಸುತ್ತಾರೆ. ಹೀಗೆ ಜನ್ಮಾಷ್ಟಮಿಯಂದು ಉಪವಾಸವನ್ನು ಶ್ರದ್ಧೆಯಿಂದ ಆಚರಿಸುವುದರಿಂದ ಸಾಧಾರಣವಾಗಿ ಏಕಾದಶಿಯಂದು ಉಪವಾಸ ಆಚರಿಸುವುದಕ್ಕಿಂತಾ ಒಂದು ಸಾವಿರ ಪಟ್ಟು ಹೆಚ್ಚು ಪರಿಣಾಮಕಾರಿಯೆಂದು ಭಕ್ತರ ನಂಬಿಕೆ. ಈ ಸಂದರ್ಭದಲ್ಲಿ ತಯಾರಿಸುವ ತಿಂಡಿಗಳು ಹೆಚ್ಚಾಗಿ ಹಾಲಿನಿಂದಲೇ ಮಾಡಲಾಗುತ್ತದೆ.ಕೃಷ್ಟ್ಣನಿಗೆ ಹಾಲಿನಿಂದಲೇ ಮಾಡಿದ ತಿಂಡಿಗಳು ತುಂಬಾ ಇಷ್ಟ.ಹಾಲಿನ ಖೀರ್,ಹಾಲಿನ ಪೇಡ,ಗುಲಾಬ್ ಜಾಮೂನ್ ಮುಂತಾದ ಸಿಹಿತಿಂಡಿಗಳನ್ನೆ ಮಾಡುತ್ತಾರೆ. ಇನ್ನು ಶ್ರೀಕಂಡ ಪೂರಿ ತಯಾರಿಸುತ್ತಾರೆ.ತಮಿಳುನಾಡಿನಲ್ಲಿ ಮುರುಕ್ಕ ಮತ್ತು ಸೀದೈ ಅಂದಿನ ಮುಖ್ಯ ತಿಂಡಿಗಳಲ್ಲಿ ಒಂದು.ಕರ್ನಾಟಕದ ಕೆಲವು ಕಡೆಗಳಲ್ಲಿ ಚಕ್ಕುಲಿ,ಅವಲಕ್ಕಿ,ಮತ್ತು ಬೆಲ್ಲದ ಪಾನಕ ಮಾಡುತ್ತಾರೆ.ಭಕ್ತ ಕುಚೇಲನ ನೆನಪಿಗಾಗಿ ಮನೆಯಲ್ಲಿ ತಯಾರಿಸಿದ ಅವಲಕ್ಕಿಯನ್ನೆ ಬಳಸುತ್ತಾರೆ.
          ಇನ್ನು ನಾಡಿನ ಎಲ್ಲಾ ಕಡೆ ಮುದ್ದು ಕೃಷ್ಣನ  ವೇಷ ಎಲ್ಲರ ಮನಸೂರೆಗೊಳ್ಳುವಂತದ್ದು. ಶಾಲಾ ಮಕ್ಕಳಲ್ಲೆ ಹೆಚ್ಚಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಜಾತಿ ಮತ ಭೇಧವಿಲ್ಲದೆ ಮಕ್ಕಳು ಭಾಗವಹಿಸುತ್ತಾರೆ.ಮಕ್ಕಳ ಮುದ್ದಾದ ಮುಖಕ್ಕೆ ನೀಲಮೇಘ ಬಣ್ಣ ಹಚ್ಚಿ, ತಲೆಗೊಂದು ಪುಟ್ಟ ಕಿರೀಟ ಇಟ್ಟಾಗ ಅದು ಸಾಕ್ಷಾತ್ ಕೃಷ್ಣನೇ ಎದುರು ಬಂದಂತೆ.! ಈಕೃಷ್ಣ್ನ ವೇಷಕ್ಕೆ ಪ್ರತಿ ಮಗುವೂ ಆಸಕ್ತಿ  ತೋರುವುದು ಅದೊಂದು ಪವಾಡವೆ ಸೈ!

ಸಮಸ್ತ ನಾಡ ಸಜ್ಜನರಿಗೆ ಶ್ರೀ ಕೃಷ್ಣಾಷ್ಟಮಿ ಶುಭಾಶಯಗಳು..


ಶ್ರೀ ಕೃಷ್ಣಾಷ್ಟಮಿ ಸಂಭ್ರಮದ ಫೋಟೋ ಕ್ಲಿಕ್ಕುಗಳು 







ಕೃಪೆ: ಗೂಗಲ್ , 
ಅದ್ಭುತ ಫೋಟೋಗ್ರಾಫಿಗೆ ಶಾಲಾ ತಂಡದ ನಮನಗಳು.

ಶಿಕ್ಷಕರ ದಿನಾಚರಣೆಯ ಶುಭಾಶಯಗಳು


|| ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ||


           ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾದದ್ದು, ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ದಿನವೇ ಸೆ.5, ಶಿಕ್ಷಕರ ದಿನಾಚರಣೆ.  ಜ್ಞಾನ ಹಾಗೂ ನೈತಿಕ ಮೌಲ್ಯಗಳನ್ನು ಹಂಚುತ್ತಾ, ಯುವ ಮನಸ್ಸುಗಳನ್ನು ಹೊಸ ಸವಾಲುಗಳಿಗೆ ಸನ್ನದ್ಧಗೊಳಿಸುವಲ್ಲಿ ಕಾಣಿಕೆ ನೀಡುವ ಶಿಕ್ಷಕರ ನೆನಪಿನಲ್ಲಿ ಪ್ರತಿವರ್ಷ ಶಿಕ್ಷಕರ ದಿನಾಚರಣೆಯ ಆಚರಣೆ ನಡೆಯುತ್ತದೆ.
          ಭಾರತದಲ್ಲಿ ಸೆಪ್ಟೆಂಬರ್‌ 5ರಂದು ಶಿಕ್ಷಕರ ದಿನವನ್ನು ಆಚರಿಸುತ್ತೇವೆ. ಭಾರತದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್‌ ಹುಟ್ಟಿದ ದಿನ ಅದು. ರಾಧಾಕೃಷ್ಣನ್‌ ಹುಟ್ಟಿದ್ದು 1888ರಲ್ಲಿ, ತಮಿಳುನಾಡಿನ ತಿರುತ್ತಾನಿಯಲ್ಲಿ. ಮದ್ರಾಸ್‌ನ ಕಾಲೇಜೊಂದರಲ್ಲಿ ತತ್ವಶಾಸ್ತ್ರ ಹಾಗೂ ತರ್ಕಶಾಸ್ತ್ರದಲ್ಲಿ ಪದವಿ ಪಡೆದ ಅವರು ಅದೇ ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬೋಧಕರಾದರು. ಗಂಟೆಗಟ್ಟಲೆ ವಿದ್ಯಾರ್ಥಿಗಳು ತನ್ಮಯರಾಗಿ ಪಾಠ ಕೇಳುವಂತೆ ಮಾಡುವ ವಾಕ್ಚಾತುರ್ಯ ಅವರಿಗೆ ಇತ್ತು.
          ಭಾರತೀಯ ಹಾಗೂ ಪಾಶ್ಚಿಮಾತ್ಯ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಇಂಗ್ಲಿಷ್‌ ಸಾಹಿತ್ಯವನ್ನೂ ಚೆನ್ನಾಗಿ ಓದಿಕೊಂಡರು. 1923ರಲ್ಲಿ ಅವರ ‘ಇಂಡಿಯನ್‌ ಫಿಲಾಸಫಿ’ ಕೃತಿ ಪ್ರಕಟವಾಯಿತು. ಮಹತ್ವದ ಸಾಹಿತ್ಯ ಕೃತಿ ಎಂದು ಅದನ್ನು ಪರಿಗಣಿಸಲಾಯಿತು. ಆಮೇಲೆ ಅವರನ್ನು ಆಕ್ಸ್‌ಫರ್ಡ್‌, ಯಾಲೆ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯಗಳಲ್ಲಿ ಹಿಂದೂ ಫಿಲಾಸಫಿ ಕುರಿತು ಪಾಠ ಹೇಳಲು ಆಹ್ವಾನ ಬಂದಿತು. ಆಂಧ್ರ ಹಾಗೂ ಬನಾರಸ್‌ ವಿಶ್ವವಿದ್ಯಾಲಯಗಳ ಕುಲಪತಿಯಾಗಿ ನೇಮಕಗೊಂಡರು. 1949ರಲ್ಲಿ ರಷ್ಯಾಗೆ ಭಾರತದ ದೂತರನ್ನಾಗಿ ಕಳುಹಿಸಲಾಯಿತು. ಆಮೇಲೆ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರು. 1954ರಲ್ಲಿ ಅವರಿಗೆ ಭಾರತರತ್ನ ಗೌರವ ಸಂದಿತು. 1975ರಲ್ಲಿ ನಿಧನರಾದರೂ ಅವರ ಸೇವೆಯನ್ನು ಈಗಲೂ ಪ್ರತಿವರ್ಷ ಸ್ಮರಿಸಲಾಗುತ್ತದೆ.
          ವಿದ್ಯಾದಾನ  ಮಾಡುವ ಸರ್ವಶ್ರೇಷ್ಠವಾದ ವೃತ್ತಿ ಶಿಕ್ಷಕವೃತ್ತಿ . ನಾ ಮೇಲೊ ನೀ ಮೇಲೊ ಎಂದು ಬದುಕುವ ಇಂದಿನ ಪೀಳಿಗೆ ಗುರು ಇಲ್ಲದೆ ಬೇಕಾದುದನ್ನು ಸಾದಿಸಬಹುದ ಎಂದು ನಂಬಿದವರಿದ್ದಾರೆ. ಹಠ, ಛಲ, ಆಸೆಯಿಂದ ಸಾಧನೆ ಸಾಧ್ಯ. ಆದರೆ ಮೌಲ್ಯಯುತವಾದ, ಮಾನವೀಯತೆಯ, ತೃಪ್ತಿಕರವಾದ, ವ್ಯಕ್ತಿತ್ವ ರೂಪಗೊಳ್ಳಲು ಗುರುವಿನ ಸಾಕ್ಷಾತ್ಕಾರ ಅಗತ್ಯ. ಸಮಾಜ ನೀರಿನಂತೆ , ಗುರು ನೀರನ್ನು ನೋಡುವ ವ್ಯಕ್ತಿಯಾದರೆ ಅದರ ಪ್ರತಿಬಿಂಬವೇ ಶಿಷ್ಯ. ಗುರುವೃಂದಕ್ಕೆ ನಮನ.

Friday, 4 September 2015

Hon'ble Prime Minister's interaction 
with School Children 4th September 2015 in connection with 
Teacher's Day.
Our kids watching Live Web conference




Interact with Prime Minister of India watch on Youtube


Thursday, 3 September 2015

What makes a halo around the sun or moon ?
The ring around sun seen on 3-9-2015 about 11.30 am
22 Degree Halo
a ring of light 22 degrees from the sun or moon 

          A halo is a ring of light surrounding the sun or moon. Most halos appear as bright white rings but in some instances, the dispersion of light as it passes through ice crystals found in upper level cirrus clouds can cause a halo to have color.



          Halos form when light from the sun or moon is refracted by ice crystals associated with thin, high-level clouds. A 22 degree halo is a ring of light 22 degrees from the sun (or moon) and is the most common type of halo observed and is formed by hexagonal ice crystals with diameters less than 20.5 micrometers.
Light undergoes two refractions as it passes through an ice crystal and the amount of bending that occurs depends upon the ice crystal's diameter.



           A 22 degree halo develops when light enters one side of a columnar ice crystal and exits through another side. The light is refracted when it enters the ice crystal and once again 
when it leaves the ice crystal.



             The two refractions bend the light by 22 degrees from its original direction, producing a ring of light observed at 22 degrees from the sun or moon.




Courtsey: ww2010.atmos.uiuc.edu