Monday 28 July 2014

ಈದ್‌ ಮಿಲಾದ್‌ ಶುಭಾಶಯಗಳು...
  
   ಭಾರತ ದೇಶ ಹಲವು ಮತ-ಧರ್ಮಗಳ ನೆಲೆಬೀಡು. ಇಲ್ಲಿರುವಷ್ಟು ಧರ್ಮಗಳು ಜಗತ್ತಿನ ಮತ್ತಾವ ದೇಶದಲ್ಲಿಯೂ ಇರಲಾರದು. ಇಲ್ಲಿ ವಿವಿಧತೆಯಲ್ಲಿ ಏಕತೆ ಇರುವುದು ವೈಶಿಷ್ಟ್ಯನಾಳೆ ದಿನಾಂಕ 29-7-2014 ಮುಸಲ್ಮಾನ ಬಾಂಧವರ ಪವಿತ್ರ "ಈದ್ ಮಿಲಾದ್" ಹಬ್ಬ . ರಮ್ಜಾನ್ ತಿಂಗಳ ಆರಂಭವಾದೊಡನೆ ನರಕದ ಬಾಗಿಲುಗಳನ್ನು ಮುಚ್ಚಿ ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ, ಸ್ವರ್ಗದ ಎಂಟು ಬಾಗಿಲುಗಳಲ್ಲಿ  ‘ರಿಯಾನಾಎಂಬ ಬಾಗಿಲು  ವ್ರುತಧಾರಿಗಳ  ಸಲುವಾಗಿ ತೆಗೆದಿರುತ್ತದೆಯಂತೆಯೆಂದು ನಂಬಿಕೆ.

          ಮೂವತ್ತು ದಿನಗಳ ಉಪವಾಸದ ಬಳಿಕ ರಂಜಾನ್ ತಿಂಗಳಿಗೆಅಲ್ವಿದಾ' ಅಥವಾ ಹೇಳಿ ಶವ್ವಾಲ್ ತಿಂಗಳ ಮೊದಲ ಚಂದ್ರದರ್ಶನ, ರಂಜಾನ್ ಹಬ್ಬದ ಸಂಭ್ರಮವನ್ನು ತರುತ್ತದೆ. ದಿನ ಉಪವಾಸಮಾಡುವುದು ನಿಷಿದ್ಧ. ಹಬ್ಬವು ತಿಂದುಂಡು ಖುಶಿಪಡಲು ದೇವರು ಅನುಗ್ರಹಿಸಿದ ದಿನವೆಂದು ಪರಿಗಣಿಸಲಾಗುತ್ತದೆ. ಉಳ್ಳವರು ಖುಶಿಪಟ್ಟು ಆಚರಿಸುವುದರಿಂದ ಮಾತ್ರ ಹಬ್ಬ ಪರಿಪೂರ್ಣವಾಗುವುದಿಲ್ಲಬಡವರಿಗೂ ಕೂಡ ಅವಕಾಶವನ್ನು ಕಲ್ಪಿಸಿಕೊಡುವುದು ಉಳ್ಳವರ ಕರ್ತವ್ಯ. ಆದುದರಿಂದ ನಿಯಮ ಪ್ರಕಾರ ತಾವು ತಿನ್ನುವ ಉತ್ತಮದರ್ಜೆಯ ಧಾನ್ಯ ಮತ್ತು ಅನುಕೂಲವಿರುವವನು, ಹಣವಿರುವವನು ನಿಗದಿಪಡಿಸಲಾದ ಮೊತ್ತವನ್ನು ಬಡವರಿಗೆ ಹಬ್ಬದ ಬೆಳಗ್ಗಿನ ವಿಶೇಷವಾದ ಈದ್ ಪ್ರಾರ್ಥನೆಯ ಮೊದಲು ಸದಕಾ'  'ಝಕಾತ್' ಅಥವಾ ದಾನ ಮಾಡಲೇಬೇಕು. ಹಬ್ಬದ ದಿನ ಬೆಳಗ್ಗೆ ತನ್ನ ಬಳಿ ಇದ್ದುದರಲ್ಲಿ ಶುಭ್ರವಾದ ಉತ್ತಮ ಬಟ್ಟೆಯನ್ನು ಅಥವಾ ಹೊಸ ಬಟ್ಟೆಯನ್ನು ತೊಟ್ಟು ಈದ್ ವಿಶೇಷ ನಮಾಜಿಗಾಗಿ ಎಲ್ಲರೂ ಮಸೀದಿಗೆ ಹೋಗಬೇಕಾದದ್ದು ಕೂಡ ಮುಖ್ಯ ಆಚರಣೆಗಳಲ್ಲಿ ಒಂದು. ಇಲ್ಲಿ ಈದ್ ನಮಾಜು ಮುಗಿದ ಕೂಡಲೇ ಇಮಾಮ್ ಅಥವಾ ಖತೀಬ್ ಕುತ್ಬಾ ಪ್ರವಚನ ಮಾಡುವುದನ್ನು ಕೂತು ಕೇಳುವುದು ಕೂಡ ಒಂದು ಮುಖ್ಯ ಭಾಗ. ಮನೆಯಲ್ಲಿ ಕ್ಷೀರ್ (ಸಿಹಿ ಸೇವಿಗೆ) ಅನ್ನ ಬಿರಿಯಾನಿ ಅಡಿಗೆ ತಯಾರಿಸಿ ಬಂಧುಮಿತ್ರರಿಗೆ ಆಮಂತ್ರಣ ನೀಡುತ್ತಾರೆ. ಹಬ್ಬದ ದಿನ ಎಲ್ಲರೂ ಮುಂಜಾನೆ ಸ್ನಾನಮಾಡಿ ಹೊಸ ಬಟ್ಟೆ ಇಲ್ಲವೆ ಶುಭ್ರಬಟ್ಟೆ ಧರಿಸಿ ಕಣ್ಣಿಗೆ ಸುರಮಾ ಲೇಪಿಸಿಕೊಂಡು ಸುಗಂಧ ದ್ರವ್ಯಗಳನ್ನು ಪೂಸಿಕೊಂಡು ಸಡಗರಸಂಭ್ರಮ ಸಂತೋಷದಿಂದ ಜಮಾಅತ್ನೊಂದಿಗೆ ಕೂಡಿಕೊಂಡು ತಕಬೀರ ಹೇಳುತ್ತಾಈದಗಾಮೈದಾನದಲ್ಲಿ ನೆರೆಯುತ್ತಾರೆ. ಅಲ್ಲಿ ಸುಮಾರು ಹತ್ತು ಗಂಟೆಯ ಹೊತ್ತಿಗೆ ಮುಸ್ಲಿಂ ಮುಖಂಡರು, ಧಾರ್ಮಿಕ ಶ್ರದ್ಧೆಯುಳ್ಳವರು ರಮ್ಜಾನ್ ತಿಂಗಳ ಮಹತ್ವ ಹಾಗೂ ನಮಾಜು ವೃತಾಚರಣೆ ಆವಶ್ಯಕತೆ; ಫಿತರಾ-ಸದಖಾ-ಜಕಾತ್ಗಳ ವೈಶಿಷ್ಟ್ಯ ಕುರಿತು ಬಯಾನ್ ಮಾಡುತ್ತಾರೆ. ‘ಈದುಲ್ ಫಿತರ್ನಮಾಜು ಸಲ್ಲಿಸುವ ರೀತಿ ಕ್ರಮದ ಬಗೆಗೆ ವಿವರಣೆ ನೀಡಲಾಗುತ್ತದೆ. ಅನಂತರ ಮುಸ್ಲಿಂ ಸಹೋದರರು ಭುಜಕ್ಕೆ ಭುಜ ಹಚ್ಚಿ ಭಕ್ತಿಗೌರವದಿಂದ ಸಾಲಾಗಿ ನಿಂತು ನಮಾಜ್  ಸಲ್ಲಿಸಲು ಸಿದ್ಧರಾಗುತ್ತಾರೆ.ಇದಾದ ನಂತರ ಪರಸ್ಪರ ಆಲಂಗಿಸಿಕೊಂಡುಈದ್ ಮುಬಾರಕ್' ಶುಭಾಶಯಗಳನ್ನು ಕೋರಲಾಗುತ್ತದೆ. ತಮ್ಮ ಹಿತೈಷಿಗಳು, ಸ್ನೇಹಿತರು, ಬಂಧು ಬಳಗದವರ ಮನೆಗಳಿಗೆ ಪರಸ್ಪರ ಭೇಟಿಮಾಡುವುದು, ಸಿಹಿತಿಂಡಿ, ಒಣ ಖರ್ಜೂರ, ಒಣ ದ್ರಾಕ್ಷಿ, ಗೋಡಂಬಿ ಮುಂತಾದುವನ್ನು ಪರಸ್ಪರ ಹಂಚಿಕೊಳ್ಳುವ ಕ್ರಮವೂ ಇದೆ ಜೊತೆಗೆ ಮಕ್ಕಳಿಗೆ ಹಿರಿಯರುಈದಿ' ಅಥವಾ ಹಣದ ಕೊಡುಗೆಯನ್ನು ನೀಡುವ ಕ್ರಮವಿದೆ. ರಮ್ಜಾನ್ ತಿಂಗಳಿನಲ್ಲಿ ನಮಾಜ, ರೋಜ, ಕುರಾನ್ ಪಠಣ, ದರೂದೆ ಷರೀಫ್ ಓದುವುದರಿಂದಹೂರ್ ಪರಿಎಂಬ ಸ್ವರ್ಗದ ಪಕ್ಷಿ ಅವರನ್ನು ಸ್ವರ್ಗಕ್ಕೆ ತಲುಪಿಸಲು ದಾರಿ ಕಾಯುತ್ತಿರುತ್ತದೆಯಂತೆ. ರಮ್ಜಾನ್ ತಿಂಗಳಿನಲ್ಲಿ ತನ್ನನ್ನು ಪ್ರಾರ್ಥಿಸುವವರಿಗೆ ಅಲ್ಲಾಹನು ಸುಪ್ರೀತಿಯಿಂದ ಸಾಕಷ್ಟು ಸುಖಶಾಂತಿ ಸಮೃದ್ಧಿ ನೀಡುತ್ತಾನೆಂದು ಮುಸ್ಲಿಂ ಬಾಂಧವರ ಅಭಿಪ್ರಾಯ. ಅಲ್ಲದೆ ತಿಂಗಳಲ್ಲಿ ಮಾಡಿದ ಒಂದು ಪುಣ್ಯದ ಕೆಲಸಕ್ಕೆ ಪ್ರತಿಯಾಗಿ ಎಪ್ಪತ್ತರಷ್ಟು ಪುಣ್ಯ ಸ್ವರ್ಗದಲ್ಲಿ ದೊರೆಯುತ್ತದೆಯೆಂಬ ನಂಬಿಗೆಯಿದೆ. ಹಾಗೂ ತಪ್ಪುಗಳಿಂದ ದೂರ ಇರುವ, ನರಕದ ದಳ್ಳುರಿಯಿಂದ ರಕ್ಷಿಸುವ, ಏಕೈಕ ಉಪಾಯ ವೃತಾಚರಣೆ  ಆಗಿದೆಯೆಂದು ನಿಷ್ಠಾವಂತ ಮುಸ್ಲೀಮರ ತಿಳುವಳಿಕೆ

       ಎಲ್ಲ ಮುಸ್ಲಿಂ ಬಾಂಧವರಿಗೂ ಹೇರೂರು ಶಾಲಾ ಸಿಬ್ಬಂದಿ ವರ್ಗದಿಂದ ಸ್ನೇಹಾದರಗಳು ತುಂಬಿದ "ಈದ್ ಮುಬಾರಕ್'ದೇವನೊಬ್ಬ ನಾಮ ಹಲವು ಎಂಬ ಸತ್ಯವನ್ನು ನಾವು ತಿಳಿದು ಬಾಳೋಣ. ಈದ್ ಹಬ್ಬ , ಗೌರಿ ಗಣೇಶ ಹಬ್ಬ ಗಳು ಸೌಹಾರ್ದಮಯವಾಗಿ ಆಚರಿಸಲ್ಪಡಲಿ... ಶುಭಾಶಯಗಳು...

ಕೃಪೆ: ಬಲ್ಲ ಮೂಲಗಳಿಂದ
ಫೋಟೋ: ಪ್ರವೀಣ್ ಫೋಟೋಗ್ರಫಿ 

No comments: