Thursday, 26 February 2015

STUDY TOUR TO PILIKULA NISARGA DHAMA, MANGALORE ON 26th FEB 2015

























Tuesday, 17 February 2015

ಮಹಾ ಶಿವರಾತ್ರಿ ಶುಭಾಶಯಗಳು


ಮಹಾ ಶಿವರಾತ್ರಿಯು ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ.ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವ ಅಂದ್ರೆ ಕಲ್ಯಾಣ ಎಂದು ಅರ್ಥ.  ಲೋಕ ಕಲ್ಯಾಣಕ್ಕಾಗಿ ಮತ್ತು ಕುಟುಂಬದ ಕಲ್ಯಾಣಕ್ಕಾಗಿ ರಾತ್ರಿ ಇಡೀ ಆ ಪರಶಿವನ ಧ್ಯಾನ ಮಾಡುವುದು. ಇದರ ಬಗ್ಗೆ ಒಂದು ಸಣ್ಣ ಕಥೆ ಇದೆ.  ಶಿವಪುರಾಣದಲ್ಲಿ ಹೇಳಿರುವಂತೆ, ಒಮ್ಮೆ ಬ್ರಹ್ಮ ಮತ್ತು ವಿಷ್ಣು ಅವರುಗಳಲ್ಲಿ ಯಾರು ಶ್ರೇಷ್ಠರು ಎಂಬ ಬಗ್ಗೆ ಜಗಳವಾಯಿತು.  ಇವರಿಬ್ಬರ ಜಗಳದಿಂದ ಬೇಸತ್ತ ಇತರ ದೇವರುಗಳು, ಮಧ್ಯಸ್ಥಿಕೆ ವಹಿಸಲು ಶಿವನನ್ನು ಕೇಳಿಕೊಂಡರು.  ಆಗ ಶಿವನು ಉದ್ದನೆಯ ಬೆಂಕಿಯ ಕಂಬದಂತೆ ಇವರಿಬ್ಬರ ಮಧ್ಯೆ ನಿಂತನು.  ಬೆಂಕಿಯ ತೀಕ್ಷಣತೆಯನ್ನು ಕಂಡು ಇವರಿಬ್ಬರೂ ಇದರ ಮೂಲವನ್ನು ಹುಡುಕಲು ಹೊರಟರು.  ಬ್ರಹ್ಮನು ಹಂಸದ ರೂಪವಾಗಿ ಆಕಾಶಕ್ಕೂ, ವಿಷ್ಣುವು ವರಾಹ ರೂಪದಲ್ಲಿ ಭೂಮಿಯೊಳಗೂ ಹೊರಟರು.  ಸಾವಿರಾರು ಮೈಲುಗಳನ್ನು ಕ್ರಮಿಸಿದರೂ ಇದರ ಮೂಲ ತಿಳಿಯದಾಯಿತು.  ಇವರಿಬ್ಬರ ಪರದಾಟವನ್ನು ಕಂಡು ಶಿವನು ಮುಗುಳ್ನಕ್ಕನು.  ಆತನ ನಗುವಿನಿಂದ ಅಲ್ಲಿಯೇ ಇದ್ದ ಕೇತಕಿ ಪುಷ್ಪವು ಕೆಳಗಿಳಿದು ಬೀಳಹತ್ತಿತು.  ಅಲ್ಲಿಯೇ ಬರುತ್ತಿದ್ದ  ಬ್ರಹ್ಮನಿಗೆ ಇದು ಗೋಚರವಾಯಿತು.  ಆತನು ಆ ಪುಷ್ಪವನ್ನು ಎಲ್ಲಿಂದ ಬಂದೆಯೆಂದು ಕೇಳಲು, ಅದು ಈ ಬೆಂಕಿಯ ಕಂಬದ ಮೇಲ್ಭಾಗದಿಂದ ಕೆಳಗಿಳಿದು ಬರುತ್ತಿದ್ದೇನೆಂದು ತಿಳಿಸಿತು.  ಅಲ್ಲಿಯವರೆವಿಗೆ ಬೆಂಕಿಯ ಮೂಲವನ್ನು ತಿಳಿಯದ ಬ್ರಹ್ಮನು ಪುಷ್ಪವನ್ನೇ ಸಾಕ್ಷಿಯನ್ನಾಗಿ ತೆಗೆದುಕೊಂಡನು.  ಆಗ ಕುಪಿತಗೊಂಡ ಶಿವನು ತನ್ನ ಮೂಲ ಸ್ವರೂಪವನ್ನು ತೋರಿದನು.  ಮತ್ತು ಬ್ರಹ್ಮನನ್ನು ಯಾರೂ ಪೂಜಿಸಬಾರದೆಂದೂ, ಕಪಟತನ ತೋರಿದ ಕೇತಕಿ ಪುಷ್ಪವನ್ನು ಯಾರೂ ಪೂಜೆಗೆ ಬಳಸಬಾರದೆಂದೂ ಶಾಪವನ್ನಿತ್ತನು.  ಅಂದು ಅಂದರೆ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ೧೪ನೆಯ ದಿನ, ಶಿವನು ಲಿಂಗರೂಪವನ್ನು ಧರಿಸಿದನು.  ಅವನನ್ನು ತೃಪ್ತಿಗೊಳಿಸಿ, ಸಂಪತ್ತು, ಸುಖ ಮತ್ತು ಸಮೃದ್ಧಿಯನ್ನು ಹೊಂದಲು ಪೂಜಿಸುವರು. 

ಮೂಲ: ಗೂಗಲ್ 

Saturday, 14 February 2015


14 ವಿವಿಧ ಭಾಷಾ ಲಿಪಿಗಳು- ಅಪರೂಪದ ಸಂಗ್ರಹ

Tuesday, 10 February 2015

ಮೆಟ್ರಿಕ್ ಮೇಳ -2015             
  ನಮ್ಮ ವಿದ್ಯಾಲಯದಲ್ಲಿ ದಿನಾಂಕ 10.2.2015 ರಂದು ಮೆಟ್ರಿಕ್ ಮೇಳ -2015 ನ್ನು ವಿವಿಧ ಕಲಿಕಾ ಚಟುವಟಿಕೆಗಳೊಂದಿಗೆ ಅಚ್ಚುಕಟ್ಟಾಗಿ ನಡೆಸಲಾಯಿತು. ಯಸ್.ಎಮ್.ಸಿ ಅಧ್ಯಕ್ಷೆ ಶೋಭಾ. ಟಿ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಕ್ಕಳು ಸ್ವತಃ ಬೇಡ್ಜ್ ನಿರ್ಮಾಣ, ಮೀಟರ್ ಸ್ಕೇಲ್ ನಿರ್ಮಾಣ, ಮೆಟ್ರಿಕ್ ಗಡಿಯಾರ ಗಳನ್ನು ನಿರ್ಮಿಸುವ ಚಟುವಟಿಕೆಗಳಲ್ಲಿ ಸಜೀವವಾದರು. ಪ್ರಾವಿಷನ್ ಸ್ಟೋರ್, ತರಕಾರಿ ಮಾರಾಟ, ಹಾಲು ಹಣ್ಣಿನ ವ್ಯಾಪಾರ ನಡೆಸಿದರು. ಮೆಟ್ರಿಕ್ ಆಟಗಳಿಂದ ಕ್ಲಿಷ್ಟಕರವಾದ ಗಣಿತದ ಆಶಯಗಳಾದ ಮೀಟರ್, ಸೆಂಟಿ ಮೀಟರ್, ಗ್ರಾಂ, ಲೀಟರ್ ಗಳನ್ನೂ ಸುಗಮವಾಗಿ ಕಲಿತುಕೊಂಡರು. ವಿವಿಧ ಮಾದರಿಯ ಗಡಿಯಾರಗಳು, ತೂಕದ ಅಳತೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಎಲ್ಲ ಶಿಕ್ಷಕರೂ ಮಕ್ಕಳೊಂದಿಗೆ ಬೆರೆತು ಮೇಳದ ಯಶಸ್ವಿಯಲ್ಲಿ ಪಾಲುದಾರರಾದರು.


















Monday, 9 February 2015


ಕನ್ನಡ ಸಾಹಿತ್ಯ ಸಮ್ಮೇಳನ ಮೀಯಪದವು , ಎಕ್ಸ್ಪೋ- Feb 7,8 2015 

Sunday, 8 February 2015


೯ ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ ೭,೮ -ಮೀಯಪದವು,ಮಂಜೇಶ್ವರ ಕೆಲವೊಂದು ಕ್ಲಿಕ್ಕುಗಳು... 

Thursday, 5 February 2015

ANNUAL EXAMINATION 2015 TIME TABLE

HS ATTACHED LP & UP

HS SECTION

LP & UP

MUSLIM SCHOOLS

Monday, 2 February 2015

ಜಿ.ಶಂಕರ ಕುರುಪ್ ಪುಣ್ಯ ಸ್ಮರಣೆ 
feb 2th 2015


ಜ್ಞಾನಪೀಠ ಪ್ರಶಸ್ತಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ. ಭಾರತೀಯ ನಾಗರೀಕರಾಗಿದ್ದು, ಯಾವುದೇ ಆಡಳಿತ ಭಾಷೆಯಲ್ಲಿ ಅತ್ಯುನ್ನತ ಸಾಹಿತ್ಯ ಸೇವೆ ಸಲ್ಲಿಸಿದ್ದರೇ ಅಂಥವರನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿ. ಈ ಪ್ರಶಸ್ತಿಯನ್ನು ಇಪ್ಪತ್ತೇರಡು ಮೇ ೧೯೬೧ರಲ್ಲಿ ಸ್ಥಾಪಿಸಲಾಯಿತು. ಈ ಪ್ರಶಸ್ತಿ ಪುರಸ್ಕಾರಕ್ಕೆ ಮೊಟ್ಟ ಮೊದಲು ಭಾಜನರಾದವರು ಮಲಯಾಳಂ ಭಾಷೆಯ ಮಹಾಕವಿ ಬಿರುದಿನಿಂದ ಖ್ಯಾತರಾಗಿರುವ ಜಿ.ಶಂಕರ ಕುರುಪ್. ಇವರಿಗೆ ೧೯೬೫ರಲ್ಲಿ ಅವರ ಓಡಕುಜ್ಹಲ್ ಕವನಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಿತು. 
೧೯೨೧ರಿಂದ ಪ್ರೌಢಶಾಲಾ ಶಿಕ್ಷಕರಾಗಿದ್ದ ಇವರು, ನಂತರ ಏರ್ನಾಕುಲಂನ ಮಹಾರಾಜ ಕಾಲೇಜಿನ ಮಲಯಾಳಂ ಪ್ರಾಧ್ಯಾಪಕರಾಗಿ ನಿವೃತ್ತರಾದರು. ಇವರ ಪ್ರಥಮ ಕವನ ಸಂಕಲನ  ಪ್ರಕೃತಿ ನಮನ. ವಿದ್ಯಾರ್ಥಿಯಾಗಿದ್ದಾಗಲೇ ಪ್ರಕಟವಾಗಿತ್ತು. ಒಟ್ಟು ಇಪ್ಪತೈದು ಕವನ ಸಂಕಲನಗಳ ಜೊತೆ ಗೀತನಾಟಕ ಮತ್ತು ಪ್ರಬಂಧಗಳ ಸಂಕಲನಗಳನ್ನು ಸಹ ಬರೆದಿದ್ದಾರೆ. ಇವರು ಮಲಯಾಳಂ ಭಾಷೆಗೆ ಭಾಷಾಂತರಿಸಿದ ಮುಖ್ಯ ಕೃತಿಗಳೆಂದರೇ  ಓಮರ್ ಖಯ್ಯಾಮ್‌ನ ರೂಬೈಯಾತ್ , ಕಾಳಿದಾಸನ ಮೇಘದೂತ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಕೃತಿ ಗೀತಾಂಜಲಿ. ಅಲ್ಲದೇ ಮಾನವ ಜೀವನದ ಮೇಲೆ ವಿಜ್ಞಾನದ ಪ್ರಭಾವವನ್ನು ಕುರಿತು ಅಧ್ಯಯನ ನಡೆಸಿ ವೈಜ್ಞಾನಿಕ ಕವಿ ಎಂದೂ ಹೆಸರಾಗಿದ್ದವರು. ಇವರು ಎರಡು ಫೆಬ್ರವರಿ ೧೯೭೮ರಲ್ಲಿ ನಿಧನ ಹೊಂದಿದರು. ಇವರು ಮಲಯಾಳಂ  ಭಾಷೆಯ ಸಾಹಿತ್ಯರಂಗಕ್ಕೆ ಅಗಾಧವಾದ ಸೇವೆ ಸಲ್ಲಿಸಿ ತಮ್ಮ ಕೃತಿಗಳಿಂದ ಹೆಸರುವಾಸಿಯಾದವರು.

ಸಂಗ್ರಹ : ಬಲ್ಲ ಮೂಲಗಳಿಂದ