ಜಿ.ಶಂಕರ
ಕುರುಪ್ ಪುಣ್ಯ ಸ್ಮರಣೆ
feb 2th 2015
ಜ್ಞಾನಪೀಠ ಪ್ರಶಸ್ತಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ. ಭಾರತೀಯ
ನಾಗರೀಕರಾಗಿದ್ದು, ಯಾವುದೇ ಆಡಳಿತ ಭಾಷೆಯಲ್ಲಿ ಅತ್ಯುನ್ನತ ಸಾಹಿತ್ಯ ಸೇವೆ ಸಲ್ಲಿಸಿದ್ದರೇ
ಅಂಥವರನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿ. ಈ ಪ್ರಶಸ್ತಿಯನ್ನು ಇಪ್ಪತ್ತೇರಡು ಮೇ ೧೯೬೧ರಲ್ಲಿ
ಸ್ಥಾಪಿಸಲಾಯಿತು. ಈ ಪ್ರಶಸ್ತಿ ಪುರಸ್ಕಾರಕ್ಕೆ ಮೊಟ್ಟ ಮೊದಲು ಭಾಜನರಾದವರು ಮಲಯಾಳಂ ಭಾಷೆಯ
ಮಹಾಕವಿ ಬಿರುದಿನಿಂದ ಖ್ಯಾತರಾಗಿರುವ ಜಿ.ಶಂಕರ ಕುರುಪ್. ಇವರಿಗೆ ೧೯೬೫ರಲ್ಲಿ ಅವರ ಓಡಕುಜ್ಹಲ್ ಕವನಸಂಕಲನಕ್ಕೆ
ಜ್ಞಾನಪೀಠ ಪ್ರಶಸ್ತಿ ಬಂದಿತು.
೧೯೨೧ರಿಂದ ಪ್ರೌಢಶಾಲಾ ಶಿಕ್ಷಕರಾಗಿದ್ದ ಇವರು, ನಂತರ ಏರ್ನಾಕುಲಂನ ಮಹಾರಾಜ ಕಾಲೇಜಿನ ಮಲಯಾಳಂ ಪ್ರಾಧ್ಯಾಪಕರಾಗಿ ನಿವೃತ್ತರಾದರು. ಇವರ ಪ್ರಥಮ ಕವನ ಸಂಕಲನ ಪ್ರಕೃತಿ ನಮನ. ವಿದ್ಯಾರ್ಥಿಯಾಗಿದ್ದಾಗಲೇ ಪ್ರಕಟವಾಗಿತ್ತು. ಒಟ್ಟು ಇಪ್ಪತೈದು ಕವನ ಸಂಕಲನಗಳ ಜೊತೆ ಗೀತನಾಟಕ ಮತ್ತು ಪ್ರಬಂಧಗಳ ಸಂಕಲನಗಳನ್ನು ಸಹ ಬರೆದಿದ್ದಾರೆ. ಇವರು ಮಲಯಾಳಂ ಭಾಷೆಗೆ ಭಾಷಾಂತರಿಸಿದ ಮುಖ್ಯ ಕೃತಿಗಳೆಂದರೇ ಓಮರ್ ಖಯ್ಯಾಮ್‌ನ ರೂಬೈಯಾತ್ , ಕಾಳಿದಾಸನ ಮೇಘದೂತ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಕೃತಿ ಗೀತಾಂಜಲಿ. ಅಲ್ಲದೇ ಮಾನವ ಜೀವನದ ಮೇಲೆ ವಿಜ್ಞಾನದ ಪ್ರಭಾವವನ್ನು ಕುರಿತು ಅಧ್ಯಯನ ನಡೆಸಿ ವೈಜ್ಞಾನಿಕ ಕವಿ ಎಂದೂ ಹೆಸರಾಗಿದ್ದವರು. ಇವರು ಎರಡು ಫೆಬ್ರವರಿ ೧೯೭೮ರಲ್ಲಿ ನಿಧನ ಹೊಂದಿದರು. ಇವರು ಮಲಯಾಳಂ ಭಾಷೆಯ ಸಾಹಿತ್ಯರಂಗಕ್ಕೆ ಅಗಾಧವಾದ ಸೇವೆ ಸಲ್ಲಿಸಿ ತಮ್ಮ ಕೃತಿಗಳಿಂದ ಹೆಸರುವಾಸಿಯಾದವರು.

ಸಂಗ್ರಹ : ಬಲ್ಲ ಮೂಲಗಳಿಂದ
No comments:
Post a Comment