ಮೆಟ್ರಿಕ್ ಮೇಳ -2015
ನಮ್ಮ ವಿದ್ಯಾಲಯದಲ್ಲಿ ದಿನಾಂಕ 10.2.2015 ರಂದು ಮೆಟ್ರಿಕ್ ಮೇಳ -2015 ನ್ನು ವಿವಿಧ ಕಲಿಕಾ ಚಟುವಟಿಕೆಗಳೊಂದಿಗೆ
ಅಚ್ಚುಕಟ್ಟಾಗಿ ನಡೆಸಲಾಯಿತು. ಯಸ್.ಎಮ್.ಸಿ
ಅಧ್ಯಕ್ಷೆ ಶೋಭಾ. ಟಿ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಕ್ಕಳು ಸ್ವತಃ ಬೇಡ್ಜ್
ನಿರ್ಮಾಣ, ಮೀಟರ್ ಸ್ಕೇಲ್ ನಿರ್ಮಾಣ, ಮೆಟ್ರಿಕ್ ಗಡಿಯಾರ ಗಳನ್ನು ನಿರ್ಮಿಸುವ ಚಟುವಟಿಕೆಗಳಲ್ಲಿ
ಸಜೀವವಾದರು. ಪ್ರಾವಿಷನ್ ಸ್ಟೋರ್, ತರಕಾರಿ ಮಾರಾಟ, ಹಾಲು ಹಣ್ಣಿನ ವ್ಯಾಪಾರ ನಡೆಸಿದರು. ಮೆಟ್ರಿಕ್
ಆಟಗಳಿಂದ ಕ್ಲಿಷ್ಟಕರವಾದ ಗಣಿತದ ಆಶಯಗಳಾದ ಮೀಟರ್, ಸೆಂಟಿ ಮೀಟರ್, ಗ್ರಾಂ, ಲೀಟರ್ ಗಳನ್ನೂ ಸುಗಮವಾಗಿ
ಕಲಿತುಕೊಂಡರು. ವಿವಿಧ ಮಾದರಿಯ ಗಡಿಯಾರಗಳು, ತೂಕದ ಅಳತೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಎಲ್ಲ
ಶಿಕ್ಷಕರೂ ಮಕ್ಕಳೊಂದಿಗೆ ಬೆರೆತು ಮೇಳದ ಯಶಸ್ವಿಯಲ್ಲಿ ಪಾಲುದಾರರಾದರು.
No comments:
Post a Comment