ಹೇರೂರು ಎಲ್.ಪಿ ಶಾಲೆಯಲ್ಲಿ
ಪ್ರವೇಶೋತ್ಸವ
2016-17 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರವೇಶೋತ್ಸವವನ್ನು ನವಾಗತ
ಪುಟಾಣಿಗಳೊಂದಿಗೆ ಸಡಗರದಿಂದ ಆಚರಿಸಲಾಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ರೇವತಿ
ಯವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಹೆತ್ತವರ ಜೊತೆಗೂಡಿ ಅಧ್ಯಾಪಕರಾದ ಕೃಷ್ಣ ಕುಮಾರ್,
ಪ್ರವೀಣ್, ಇನ್ನಿತರರು ಮಕ್ಕಳಿಗೆ ಸಿಹಿ ತಿಂಡಿ,
ಬಲೂನ್, ಹೂಗಳನ್ನು ನೀಡುತ್ತಾ ಅಕ್ಷರ ಲೋಕಕ್ಕೆ
ಸ್ವಾಗತಿಸಿದರು. ಅಧ್ಯಾಪಕರೂ ಮಕ್ಕಳೂ ಸೇರಿ ಪ್ರವೇಶೋತ್ಸವ ಗೀತೆ ಹಾಡಿದರು. ಸಮಾರಂಭದಲ್ಲಿ
ಹೊಸತಾಗಿ ಸೇರಿದ ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಲಾಯಿತು.
No comments:
Post a Comment