ವಾಚನಾ ಸಪ್ತಾಹ ಕಾರ್ಯಕ್ರಮ
ಡಾ. ಪಿ.ಎನ್ ಪಣಿಕ್ಕರ್ ಸ್ಮರಣಾರ್ಥ ಜೂನ್ 20 ರಂದು
ಒಂದು ವಾರಗಳ ಕಾಲ ನಡೆಯಲಿರುವ ವಾಚನಾ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನಮ್ಮ ಶಾಲೆಯಲ್ಲಿ
ಜರಗಿತು. ವಾಚನಾ ಸಪ್ತಾಹ'ದ
ಪ್ರಯುಕ್ತ ಮಕ್ಕಳ ಮೆಗಜ್ಹಿನ್ ಬಿಡುಗಡೆಗೊಳಿಸಲಾಯಿತು. "ಅಕ್ಷರ
ಮರ" ಎಂಬ ಕಲ್ಪನೆಯಲ್ಲಿ ತರಗತಿಯಲ್ಲಿ ಮರ ರಚನೆಯಾಯಿತು. ಪುಸ್ತಕ ಪ್ರದರ್ಶನ ನಡೆಯಿತು. ಒಗಟು, ಕವಿತಾ ರಚನೆ, ಚಿತ್ರರಚನೆ, ಲಿಬ್ರೆರಿ ಪುಸ್ತಕ ವಿಮರ್ಶೆ, ಕಥೆ ಹೇಳುವುದು, ಮುಂತಾದ ಸ್ಪರ್ಧೆಗಳನ್ನು ಈ ವಾರದಲ್ಲಿ
ನಡೆಸುವರೇ ತೀರ್ಮಾನಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಗೀತ. ಕೆ ಉಧ್ಘಾಟಿಸಿದರು. ಸಾಹಿತ್ಯ ಕ್ಷೇತ್ರಕ್ಕೆ ಡಾ. ಪಿ.ಎನ್ ಪಣಿಕ್ಕರ್ ಅವರ ಕೊಡುಗೆಗಳನ್ನ ಸ್ಮರಿಸಲಾಯಿತು.
No comments:
Post a Comment