Friday, 29 July 2016
Thursday, 21 July 2016
ಜುಲೈ 21 | ಚಾಂದ್ರ ದಿನ
ಪ್ಲೋರಿಡಾದ
ಕೆನಡಿ ಸ್ಪೇಸ್ ಸೆಂಟರ್ನಿಂದ
1969 ಜುಲೈ 16ರಂದು ನಡೆದ ಮಾನವನ ಮೊದಲ ಚಂದ್ರಯಾನ ವಿಜಯ ದಿವಸದ ನೆನಪಿಗಾಗಿ ಶಾಲೆಯಲ್ಲಿ ಜುಲೈ
21ರಂದು ವಿವಿಧ ಚಟುವಟಿಕೆಗಳೊಂದಿಗೆ ಚಾಂದ್ರ ದಿನ ಆಚರಿಸಲಾಯಿತು. ಚಾಂದ್ರ ಮಾನವನ ಜೊತೆ ಸಂದರ್ಶನ,
ಅಪ್ಪೋಲೋ 11 ಆಕಾಶ ನೌಕೆ ಪ್ರಾತ್ಯಕ್ಷಿಕೆ, ಸ್ಲೈಡು, ವೀಡಿಯೊ ಪ್ರದರ್ಶನ ನಡೆಯಿತು. ಅಧ್ಯಾಪಕರಾದ
ಪ್ರವೀಣ್ ಕುಮಾರ್, ಕೃಷ್ಣ ಕುಮಾರ್ ಮೊತ್ತ ಮೊದಲ ಚಾಂದ್ರ ಯಾನದ ರಸವತ್ತಾದ ಕತೆಯನ್ನು ವಿವರಿಸಿ
ಹೇಳಿದರು. ಮನುಷ್ಯನ ಈ ಪುಟ್ಟ ಹೆಜ್ಜೆ ಜಗತ್ತಿಗೇ ಮಾದರಿಯಾಗಲಿ ಎಂಬ ಆಶಯದೊಂದಿಗೆ ಪುಟಾಣಿ
ಮಕ್ಕಳೂ ಕೂಡ ಸಾಧಕರಾಗಬೇಕೆಂದು ಮಕ್ಕಳಲ್ಲಿ ಸ್ಪೂರ್ತಿ ತುಂಬಲಾಯಿತು.
Thursday, 14 July 2016
ಎಸ್.ಎಂ.ಸಿ ಮಹಾಸಭೆ ಮತ್ತು ಉಚಿತ ಸಮವಸ್ತ್ರ ವಿತರಣೆ
ಈ ಶೈಕ್ಷಣಿಕ ಸಾಲಿನ ಯಸ್.ಎಂ.ಸಿ ಮಹಾಸಭೆಯು ಜುಲೈ 14 ರಂದು ನಮ್ಮ
ಶಾಲೆಯಲ್ಲಿ ಜರಗಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗೀತ .ಕೆ ಸ್ವಾಗತಿಸಿ ವಾರ್ಷಿಕ ವರದಿ, ಲೆಕ್ಕಪತ್ರ
ಮಂಡಿಸಿದರು. ನೂತನ ಕಾರ್ಯಕಾರೀ ಸಮಿತಿಯನ್ನು ರಚಿಸಲಾಯಿತು. ಶ್ರೀ ಅಬೂಬಕರ್ ಸಿದ್ದಿಕ್
ಯಸ್.ಎಂ.ಸಿ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾದರು. ಶ್ರೀಮತಿ ವನಜ ಶೆಟ್ಟಿ ಮಾತೃ ಸಂಘದ ಅಧ್ಯಕ್ಷೆಯಾದರು. ಬಳಿಕ ಮಕ್ಕಳಿಗೆ ಉಚಿತ
ಸಮವಸ್ತ್ರ ವಿತರಣೆ ಕಾರ್ಯಕ್ರಮವು ಜರಗಿತು. ಅಧ್ಯಾಪಕರಾದ ಕೃಷ್ಣ ಕುಮಾರ್, ಪ್ರವೀಣ್
ಕುಮಾರ್, ದೀಕ್ಷಿತ ಮತ್ತಿತರರು ಉಪಸ್ಥಿತರಿದ್ದರು.
Wednesday, 6 July 2016
Subscribe to:
Posts (Atom)