Thursday, 21 July 2016

ಜುಲೈ 21 | ಚಾಂದ್ರ ದಿನ
          ಪ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್ನಿಂದ 1969 ಜುಲೈ 16ರಂದು ನಡೆದ ಮಾನವನ ಮೊದಲ ಚಂದ್ರಯಾನ ವಿಜಯ ದಿವಸದ ನೆನಪಿಗಾಗಿ ಶಾಲೆಯಲ್ಲಿ ಜುಲೈ 21ರಂದು ವಿವಿಧ ಚಟುವಟಿಕೆಗಳೊಂದಿಗೆ ಚಾಂದ್ರ ದಿನ ಆಚರಿಸಲಾಯಿತು. ಚಾಂದ್ರ ಮಾನವನ ಜೊತೆ ಸಂದರ್ಶನ, ಅಪ್ಪೋಲೋ 11 ಆಕಾಶ ನೌಕೆ ಪ್ರಾತ್ಯಕ್ಷಿಕೆ, ಸ್ಲೈಡು, ವೀಡಿಯೊ ಪ್ರದರ್ಶನ ನಡೆಯಿತು. ಅಧ್ಯಾಪಕರಾದ ಪ್ರವೀಣ್ ಕುಮಾರ್, ಕೃಷ್ಣ ಕುಮಾರ್ ಮೊತ್ತ ಮೊದಲ ಚಾಂದ್ರ ಯಾನದ ರಸವತ್ತಾದ ಕತೆಯನ್ನು ವಿವರಿಸಿ ಹೇಳಿದರು. ಮನುಷ್ಯನ ಈ ಪುಟ್ಟ ಹೆಜ್ಜೆ ಜಗತ್ತಿಗೇ ಮಾದರಿಯಾಗಲಿ ಎಂಬ ಆಶಯದೊಂದಿಗೆ ಪುಟಾಣಿ ಮಕ್ಕಳೂ ಕೂಡ ಸಾಧಕರಾಗಬೇಕೆಂದು ಮಕ್ಕಳಲ್ಲಿ ಸ್ಪೂರ್ತಿ ತುಂಬಲಾಯಿತು.








No comments: