Thursday, 14 July 2016

ಎಸ್.ಎಂ.ಸಿ ಮಹಾಸಭೆ ಮತ್ತು ಉಚಿತ ಸಮವಸ್ತ್ರ ವಿತರಣೆ

ಈ ಶೈಕ್ಷಣಿಕ ಸಾಲಿನ ಯಸ್.ಎಂ.ಸಿ ಮಹಾಸಭೆಯು ಜುಲೈ 14 ರಂದು ನಮ್ಮ ಶಾಲೆಯಲ್ಲಿ ಜರಗಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗೀತ .ಕೆ ಸ್ವಾಗತಿಸಿ  ವಾರ್ಷಿಕ ವರದಿಲೆಕ್ಕಪತ್ರ ಮಂಡಿಸಿದರು. ನೂತನ ಕಾರ್ಯಕಾರೀ ಸಮಿತಿಯನ್ನು ರಚಿಸಲಾಯಿತು. ಶ್ರೀ ಅಬೂಬಕರ್ ಸಿದ್ದಿಕ್ ಯಸ್.ಎಂ.ಸಿ ಅಧ್ಯಕ್ಷರಾಗಿ ಮತ್ತೊಮ್ಮೆ ಆಯ್ಕೆಯಾದರು. ಶ್ರೀಮತಿ ವನಜ ಶೆಟ್ಟಿ ಮಾತೃ ಸಂಘದ  ಅಧ್ಯಕ್ಷೆಯಾದರು. ಬಳಿಕ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಜರಗಿತು. ಅಧ್ಯಾಪಕರಾದ ಕೃಷ್ಣ ಕುಮಾರ್ಪ್ರವೀಣ್ ಕುಮಾರ್ದೀಕ್ಷಿತ  ಮತ್ತಿತರರು ಉಪಸ್ಥಿತರಿದ್ದರು.









No comments: