ಪೂರ್ವ ವಿದ್ಯಾರ್ಥಿ ಸಮಾಗಮ “ಮರಳಿ ಶಾಲೆಗೆ-2017”
ಕೇರಳ ಸರಕಾರದ ಮಹತ್ವಾಕಾಂಶಿ ಯೋಜನೆಯಾದ “ಸಾರ್ವಜನಿಕ
ಶಿಕ್ಷಣ ಸಂರಕ್ಷಣ ಯಜ್ಞ” ವನ್ನು ಸಾಕಾರಗೊಳಿಸಿ ವಿದ್ಯಾಲಯದ ಉಳಿವು ಮತ್ತು
ಪ್ರಗತಿಗೋಸ್ಕರ ಶಾಲಾ ಮಟ್ಟದಲ್ಲಿ ಆಯೋಜಿಸಿದ “ಮರಳಿ ಶಾಲೆಗೆ-2017” ಪೂರ್ವ ವಿದ್ಯಾರ್ಥಿ ಸಮಾಗಮ ಕಾರ್ಯಕ್ರಮವು ದಿನಾಂಕ 12.03.2017 ಭಾನುವಾರ ಮಧ್ಯಾಹ್ನ 3.00 ಗಂಟೆಗೆ ಶಾಲಾ ಸಭಾಂಗಣದಲ್ಲಿ
ಯಶಸ್ವಿಯಾಗಿ ಜರಗಿತು. ಶಾಲಾ ಮುಖ್ಯ ಶಿಕ್ಷಕಿ ಗೀತ ಟೀಚರ್ ಸ್ವಾಗತಿಸಿದರು. ಮಂಗಲ್ಪಾಡಿ ಪಂಚಾಯತ್
ಸದಸ್ಯೆ ರೇವತಿ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಂಜೇಶ್ವರ ಕ್ಷೇತ್ರ ನಿರೂಪಣಾಧಿಕಾರಿ
ವಿಜಯ್ ಕುಮಾರ್ ಸರ್ ಕಾರ್ಯಕ್ರಮದ ಬಗ್ಗೆ ಗಹನವಾದ ವಿಚಾರಗಳನ್ನು ಮಂಡಿಸಿದರು. ಹಿರಿಯ ಶಿಕ್ಷಕ
ಕೃಷ್ಣ ಕುಮಾರ್ ಪಳ್ಳಿಯತ್ ವಿಷನ್-2020 ಮತ್ತು ವಿದ್ಯಾಲಯ
ಅಭಿವೃದ್ದಿ ಸೆಮಿನಾರ್ ಮಂಡಿಸಿದರು. ಶಿಕ್ಷಕ ಪ್ರವೀಣ್ ಕುಮಾರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೂರ್ವ ವಿದ್ಯಾರ್ಥಿಗಳು, ಎಸ್.ಎಮ್.ಸಿ ಅಧ್ಯಕ್ಷ ಸಿದ್ದಿಕ್, ಮಾತೃ ಸಂಘದ ಅಧ್ಯಕ್ಷೆ ವನಜ, Rtd ಮುಖ್ಯೋಪಾಧ್ಯಾಯರಾದ ಅಬ್ಬಾಸ್ ಕೆ, ಶಾಲಾ ಶಿಕ್ಷಕಿಯರಾದ ದೀಕ್ಷಿತ ಹಾಗೂ ರೌಶೀನ
ಪಾಲ್ಗೊಂಡಿದ್ದರು.
No comments:
Post a Comment