“ಮರಳಿ ಶಾಲೆಗೆ
-2017”
ಆತ್ಮೀಯರೇ...
8 ದಶಕಗಳಿಂದ ವಿದ್ಯಾದಾನಗೈಯುತ್ತಿದ್ದು
ಭವ್ಯ ಹಿನ್ನಲೆಯಿರುವ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಹೆಗ್ಗಳಿಕೆ
ಹೊಂದಿದ ಶಾಲೆಯಾಗಿದೆ ನಮ್ಮ ಹೇರೂರು ಸರಕಾರಿ ಬುನಾದಿ ಎಲ್.ಪಿ. ಶಾಲೆ. ಪ್ರಸಕ್ತ ವರ್ಷ ಕೇರಳ ಸರಕಾರದ ಮಹತ್ವಾಕಾಂಶಿ
ಯೋಜನೆಯಾದ “ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞ” ವನ್ನು ಸಾಕಾರಗೊಳಿಸಿ ವಿದ್ಯಾಲಯದ ಉಳಿವು ಮತ್ತು
ಪ್ರಗತಿಗೋಸ್ಕರ ಸಮಸ್ತ ಪೂರ್ವ ವಿದ್ಯಾರ್ಥಿಗಳನ್ನೂ, ಊರ ವಿದ್ಯಾಭಿಮಾನಿಗಳನ್ನೂ ದಿನಾಂಕ.
12.03.2017, ಭಾನುವಾರ ಮಧ್ಯಾಹ್ನ 3.00 ಟೆಗೆ ಶಾಲಾ ಸಭಾಂಗಣದಲ್ಲಿ ನಡೆಯುವ
ಪೂರ್ವ ವಿದ್ಯಾರ್ಥಿ ಸಮಾಗಮ – “ಮರಳಿ ಶಾಲೆಗೆ 2017” ಕಾರ್ಯಕ್ರಮಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತಿದ್ದೇವೆ.
ನಿಮ್ಮ ಅತ್ಯಮೂಲ್ಯ ಸಲಹೆ ಸೂಚನೆಗಳನ್ನಿತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
SMC ಅಧ್ಯಕ್ಷರು ಶಾಲಾ ಮುಖ್ಯೋಪಾಧ್ಯಾಯರು
ಶಿಕ್ಷಕ-ರಕ್ಷಕ ಸಂಘ GBLP ಶಾಲೆ ಹೇರೂರು
ಶಿಕ್ಷಕ-ರಕ್ಷಕ ಸಂಘ GBLP ಶಾಲೆ ಹೇರೂರು
No comments:
Post a Comment