Sunday 21 September 2014

21 September 2014
ವಿಶ್ವ ಶಾಂತಿ ದಿನ

       ಇಂದು ವಿಶ್ವ ಶಾಂತಿ ದಿನ. ಶಾಂತಿಯಿಂದ ಜಗತ್ತಿನ ಏಳಿಗೆ ಸಾಧ್ಯ"ವಿಶ್ವವೇ ಶಾಂತಿಯತ್ತ ಸಾಗು"... ಎನ್ನುವ ಸಂದೇಶವನ್ನು ವಿಶ್ವ ಸಂಸ್ಥೆ ವಿಶ್ವಕ್ಕೇ ಸಾರಿದ ದಿನ. ಕ್ರೌರ್ಯದಿಂದ ಏನೂ ಸಾಧಿಸಲಾರೆವು. ಶಾಂತಿಯೇ ಬದುಕನ್ನು ಹಸನಾಗಿಸುವ ಮೂಲ ಮಂತ್ರ ಎಂದು  ವಿಶ್ವಸಂಸ್ಥೆ ಜಗತ್ತಿಗೇ ಸಾರಿದ ದಿನ. ಪ್ರಪಂಚಕ್ಕೆ ಶಾಂತಿಯ ಮೌಲ್ಯಗಳನ್ನು ಪರಿಚಯ ಮಾಡಿಕೊಡುವ ಸಲುವಾಗಿ ವಿಶ್ವ ಸಂಸ್ಥೆಸೆಪ್ಟೆಂಬರ್ 21ನ್ನು ವಿಶ್ವ ಶಾಂತಿ ದಿನವನ್ನಾಗಿ ಘೋಷಿಸಿದೆ..

        ಶಾಂತಿ ಸೌಹಾರ್ದತೆಯಿಂದ ಏಳಿಗೆ ಸಾಧ್ಯ. ಶಾಂತಿಯಿಂದ ದೇಶ ದೇಶಗಳ ನಡುವಿನ ಭಾಂಧವ್ಯ ಸುಧಾರಿಸಲು ಸಾಧ್ಯ. ಶಾಂತಿಯಿಂದ ಸಮಾಜದ ಸುವ್ಯವಸ್ಥೆ ಕಾಪಾಡಲು ಸಾಧ್ಯ. ಶಾಂತಿಯಿಂದ ಯುದ್ಧಗಲಭೆರಕ್ತಪಾತಗಳನ್ನು ತಡೆಯಲು ಸಾಧ್ಯ. ಎಂಬುದನ್ನು 'ವಿಶ್ವ ಶಾಂತಿ ದಿನಸಾರುತ್ತಿದೆ..

      ಅಮೆರಿಕಾದ ನ್ಯೂಯಾರ್ಕ್‌ ನಗರದಲ್ಲಿರುವ ವಿಶ್ವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿರುವ ಶಾಂತಿ ಗಂಟೆಯನ್ನು ಬಾರಿಸುವುದರ ಮೂಲಕ ಪ್ರತೀವರ್ಷವಿಶ್ವ ಶಾಂತಿಯ ದಿನವನ್ನು ಸ್ವಾಗತಿಸಲಾಗುತ್ತದೆ. ಇಂಗ್ಲೆಂಡ್‌ ಮತ್ತು ಕೋಸ್ಟಾರಿಕಾ ದೇಶದ ಸಲಹೆಯಂತೆ 1981ರಲ್ಲಿ ವಿಶ್ವ ಸಂಸ್ಥೆವಿಶ್ವ ಶಾಂತಿ ದಿನವನ್ನು ಘೋಷಿಸಿತ್ತು. ಸೆಪ್ಟೆಂಬರ್‌ ತಿಂಗಳ ಮೂರನೇವಾರ ಆಚರಿಸಲ್ಪಡುತ್ತಿದ್ದ ವಿಶ್ವ ಶಾಂತಿಯ ದಿನವನ್ನುಸೆಪ್ಟೆಂಬರ್‌ 21ರದಿನದಂದೇ ಆಚರಿಸಲು ವಿಶ್ವ ಸಂಸ್ಥೆಯ ಅಂತರ ಸಂದೀಯ ಒಕ್ಕೂಟ ಸೂಚಿಸಿತು. ಆ ವರ್ಷದಿಂದ ಪ್ರತೀ ವರ್ಷದ ಸೆಪ್ಟೆಂಬರ್‌ 21ರ ದಿನವನ್ನೇ ಅಂತರಾಷ್ಟ್ರೀಯ ಶಾಂತಿ ದಿನವನ್ನಾಗಿ ಆಚರಿಸಲಾಗುತ್ತಿದೆ.

      ಶಾಂತಿಯ ಕುರಿತು ಜಗತ್ತಿಗೆ ಜಾಗೃತಿ ಮೂಡಿಸುತ್ತಿರುವ ವಿಶ್ವ ಸಂಸ್ಥೆ ಪ್ರತೀ ವರ್ಷವೂ ವಿಭಿನ್ನ ಶಾಂತಿ ಸಂದೇಶಗಳನ್ನು ನೀಡುತ್ತಿದೆ. 'ಸಮರ್ಪಕ ಅಭಿವೃದ್ಧಿಯಿಂದ ಸೃಷ್ಟಿಯಾಗುವ ಶಾಂತಿಯುಸಮರ್ಥನೀಯ ಭವಿಷ್ಯವನ್ನು ಬರೆಯಬಲ್ಲದುಎಂಬುದು ಈ ವರ್ಷದ ವಿಶ್ವ ಶಾಂತಿ ದಿನದ ಸಂದೇಶವಾಗಿದೆ. ಶಾಂತಿಅಭಿವೃದ್ಧಿ ಮತ್ತು ಉಜ್ವಲ ಭವಿಶ್ಯಕ್ಕೆ ಒಂದೊಕ್ಕೊಂದು ಸಂಬಂಧವಿದೆಹಾಗೂ ಪ್ರತೀ ರಾಷ್ಟ್ರದ ಏಳಿಗೆಗೂ ಶಾಂತಿಸುವ್ಯವಸ್ಥೆ ಅತೀ ಅವಶ್ಯ ಅನ್ನೋದನ್ನು ಈ ಸಂದೇಶ ಸಾರುತ್ತದೆ.

        ಶಾಂತಿಅಹಿಂಸೆಯ ಹೋರಾಟದಿಂದ ಸ್ವಾತಂತ್ರ್ಯ ಪಡೆದು ಜಗತ್ತಿಗೇ ಮಾದರಿಯಾದ ದೇಶ ನಮ್ಮದು.ಶಾಂತಿಯ ಮಾರ್ಗಕ್ಕೆ ಎಷ್ಟು ಶಕ್ತಿ ಇದೆ ಅನ್ನೋದನ್ನು ವಿಶ್ವಕ್ಕೆ ತೋರಿಸಿಕೊಟ್ಟ ರಾಷ್ಟ್ರ ಭಾರತ. ನಮ್ಮದೇಶವೂ ಸೇರಿದಂತೆತನ್ನ ಎಲ್ಲ ಸದಸ್ಯರಾಷ್ಟ್ರಗಳಲ್ಲಿ ವಿಶ್ವ ಸಂಸ್ಥೆ ಶಾಂತಿ ಮಂತ್ರವನ್ನು ಬಿತ್ತುತ್ತಿದೆ. ಜಗತ್ತಿನ ಅಲ್ಲಲ್ಲಿ ಕಂಡುಬರುತ್ತಿರುವ ಅಶಾಂತಿಗಲಭೆ ಯುದ್ಧಗಳು ಶಮನವಾಗಿ ಶಾಂತಿ ನೆಲೆಸುವಂತಾಗಲಿಎಲ್ಲ ದೇಶಗಳೂ ಶಾಂತಿಯ ಮಂತ್ರ ಪಠಿಸಿಇಡೀ ಜಗತ್ತಿನಲ್ಲಿ ಆತಂಕ ಮುಕ್ತ ವಾತಾವರಣ ನಿರ್ಮಾಣವಾಗಲಿವಿಶ್ವದೆಲ್ಲಡೆ ಶಾಂತಿ, ನೆಮ್ಮದಿ ನೆಲೆಸಲಿ ಎಂದು ಆಶಿಸುವ...

ಕೃಪೆ : ಬಲ್ಲ ಮೂಲಗಳಿಂದ
ಫೋಟೋ : ಗೂಗಲ್ 

No comments: