Monday 15 June 2015

          ಕಂಪ್ಯೂಟರ್‌ ಶಿಕ್ಷಣ


        ಇದು ಸ್ಪರ್ಧಾತ್ಮಕ ಯುಗ. ಜೊತೆಗೆ ಕಂಪ್ಯೂಟರ್‌ ಯುಗವೂ ಹೌದು. ಅದರಲ್ಲೂ ಎಡಿಟಿಂಗ್, ಏನಿಮೇಷನ್, ಡಿ.ಟಿ.ಪಿ, ಇಂಟರ್ನೆಟ್ ತಾಂತ್ರಿಕ ಕೌಶಲಗಳ ಅವಶ್ಯಕತೆಯೂ ಹೆಚ್ಚಾಗಿದೆ. ಕಂಪ್ಯೂಟರ್ ಇಂದಿನ ದಿನಗಳಲ್ಲಿ ಕೇವಲ ಒಂದು ಪರಿಕಲ್ಪನೆಯಾಗಿ ಉಳಿದಿಲ್ಲ, ಅದು ನಮ್ಮ ಜೀವನದ ದಿಶೆಯನ್ನೇ  ಬದಲಿಸಿದೆ. ನಿತ್ಯ ಬದುಕಿನ ವಿಧಾನವೇ ಆಗಿದೆ. 1950ರ ನಂತರದ ದಶಕಗಳಲ್ಲಿ ಯಾರೂ ಊಹಿಸಲಾರದಷ್ಟು ತ್ವರಿತ ಗತಿಯಲ್ಲಿ ಬೆಳವಣಿಗೆ ಕಂಡ ಕಂಪ್ಯೂಟರ್, ಇಂದು ಎ.ಟಿ.ಎಮ್. ಮೂಲಕ ಹಣ ನೀಡುವ ಹೆಮ್ಮರವಾಗಿ ಬೆಳೆದು ನಿಂತಿದೆ. ಇಂದಿನ ದಿನಗಳಲ್ಲಿ ವಿದ್ಯಾವಂತರಾಗಿ ಕಂಪ್ಯೂಟರ್ ಕಲಿಯುವುದೂ ಬದ್ದಿವಂತಿಕೆಯ ಲಕ್ಷಣವೆನಿಸಿದೆ. ಹೀಗಾಗಿ ಶಾಲಾ ಮಟ್ಟದಲ್ಲಿಯೇ ತಾಂತ್ರಿಕ ಕೌಶಲಗಳನ್ನು ಬೆಳೆಸಲು ಸಾಕಷ್ಟು ಯೋಜನೆ­ಗಳನ್ನು ರೂಪಿಸಬೇಕು. ಆದರೆ ಅದಕ್ಕೆ ಸೂಕ್ತ ತರಬೇತಿ, ಅಗತ್ಯ ಮಾಹಿತಿ ಅತ್ಯವಶ್ಯಕ. ಶಿಕ್ಷಕರು ತಮ್ಮ ಕಂಪ್ಯೂಟರ್‌ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಬಲು ಅತ್ಯಾವಶ್ಯಕ. ಈ ಎಲ್ಲ ಸಮಸ್ಯೆಗಳನ್ನು ದಾಟಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಕಲಿಸುವ ಕಾರ್ಯಕ್ರಮವು ವ್ಯವಸ್ಥಿತವಾಗಿ ನಡೆಯಬೇಕು. ಶಾಲೆಗಳಲ್ಲಿನ ಕಂಪ್ಯೂಟರ್‌ಗಳ ದುರಸ್ತಿ, ಅವುಗಳ ವ್ಯವಸ್ಥಿತ ಜೋಡಣೆ, ಅದಕ್ಕೆ ಶಿಕ್ಷಕರಿಗೆ ಬೇಕಾದ ತರಬೇತಿ, ಅಗತ್ಯ ಇರುವ ಶಾಲೆಗಳಿಗೆ ಕಂಪ್ಯೂಟರ್‌ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕಂಪ್ಯೂಟರ್‌ ಶಿಕ್ಷಣವನ್ನು ಫಲಪ್ರದವಾಗಿ ಮಾಡಬೇಕಿದೆ.
                                                                                                      
                                                                                                      ಪ್ರವೀಣ್ ಕುಮಾರ್ .ಕೆ 

No comments: