Thursday, 1 June 2017


ಸಡಗರದ ಶಾಲಾ ಪ್ರವೇಶೋತ್ಸವ

          2017-18 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರವೇಶೋತ್ಸವವನ್ನು ನವಾಗತ ಪುಟಾಣಿಗಳೊಂದಿಗೆ ಸಡಗರ ಹಾಗೂ ವಿನೂತನವಾಗಿ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ  ಗೀತ. ಕೆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಾ ಪುಷ್ಪಗುಚ್ಛ ನೀಡಿ ನೂತನ ಪುಟಾಣಿಗಳನ್ನು ಬರಮಾಡಿಕೊಂಡರು. ಪಂಚಾಯತ್ ಸದಸ್ಯೆ ಶ್ರೀಮತಿ ರೇವತಿ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಬರಹ ಲೋಕಕ್ಕೆ ಕಾಲಿಟ್ಟ ಹೊಸ ಕಂದಮ್ಮಗಳಿಗೆ ಪಠ್ಯ ಪುಸ್ತಕ, ಕಲಿಕಾ ಕಿಟ್  ನೀಡಿ ಹಾರೈಸಿದರು. SMC ಅಧ್ಯಕ್ಷೆ ವನಜ ಶುಭಾಶಂಸನೆಗೈದರು. ಶಾಲಾ ಅಧ್ಯಾಪಕರಾದ ಕೃಷ್ಣ ಕುಮಾರ್, ಪ್ರವೀಣ್ ಹಾಡುಗಳು ಮತ್ತು ಆಟಗಳ ಮೂಲಕ ಮಕ್ಕಳನ್ನು ರಂಜಿಸುತ್ತಾ ಸಿಹಿ ಹಂಚಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಶಿಕ್ಷಕಿ ದೀಕ್ಷಿತಾ ವಂದಿಸಿದರು.. 














Friday, 31 March 2017

FAREWELL DAY 2016-17

Education is not a safety net. It is the rocket which will propel you towards success. All you have to do is have an aim and work on everything that takes to get a lift-off.

wish_you_all_the_best_kids...
















Sunday, 12 March 2017

ಪೂರ್ವ ವಿದ್ಯಾರ್ಥಿ ಸಮಾಗಮ ಮರಳಿ ಶಾಲೆಗೆ-2017”

ಕೇರಳ ಸರಕಾರದ ಮಹತ್ವಾಕಾಂಶಿ ಯೋಜನೆಯಾದ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞವನ್ನು ಸಾಕಾರಗೊಳಿಸಿ ವಿದ್ಯಾಲಯದ ಉಳಿವು ಮತ್ತು ಪ್ರಗತಿಗೋಸ್ಕರ ಶಾಲಾ ಮಟ್ಟದಲ್ಲಿ ಆಯೋಜಿಸಿದ ಮರಳಿ ಶಾಲೆಗೆ-2017” ಪೂರ್ವ ವಿದ್ಯಾರ್ಥಿ ಸಮಾಗಮ ಕಾರ್ಯಕ್ರಮವು ದಿನಾಂಕ 12.03.2017 ಭಾನುವಾರ ಮಧ್ಯಾಹ್ನ 3.00 ಗಂಟೆಗೆ ಶಾಲಾ ಸಭಾಂಗಣದಲ್ಲಿ ಯಶಸ್ವಿಯಾಗಿ ಜರಗಿತು. ಶಾಲಾ ಮುಖ್ಯ ಶಿಕ್ಷಕಿ ಗೀತ ಟೀಚರ್ ಸ್ವಾಗತಿಸಿದರು. ಮಂಗಲ್ಪಾಡಿ ಪಂಚಾಯತ್ ಸದಸ್ಯೆ ರೇವತಿ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಂಜೇಶ್ವರ ಕ್ಷೇತ್ರ ನಿರೂಪಣಾಧಿಕಾರಿ ವಿಜಯ್ ಕುಮಾರ್ ಸರ್ ಕಾರ್ಯಕ್ರಮದ ಬಗ್ಗೆ ಗಹನವಾದ ವಿಚಾರಗಳನ್ನು ಮಂಡಿಸಿದರು. ಹಿರಿಯ ಶಿಕ್ಷಕ ಕೃಷ್ಣ ಕುಮಾರ್ ಪಳ್ಳಿಯತ್ ವಿಷನ್-2020 ಮತ್ತು ವಿದ್ಯಾಲಯ ಅಭಿವೃದ್ದಿ ಸೆಮಿನಾರ್ ಮಂಡಿಸಿದರು. ಶಿಕ್ಷಕ ಪ್ರವೀಣ್ ಕುಮಾರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೂರ್ವ ವಿದ್ಯಾರ್ಥಿಗಳು, ಎಸ್.ಎಮ್.ಸಿ ಅಧ್ಯಕ್ಷ ಸಿದ್ದಿಕ್, ಮಾತೃ ಸಂಘದ ಅಧ್ಯಕ್ಷೆ ವನಜ, Rtd ಮುಖ್ಯೋಪಾಧ್ಯಾಯರಾದ ಅಬ್ಬಾಸ್ ಕೆ, ಶಾಲಾ ಶಿಕ್ಷಕಿಯರಾದ ದೀಕ್ಷಿತ ಹಾಗೂ ರೌಶೀನ ಪಾಲ್ಗೊಂಡಿದ್ದರು.











Monday, 6 March 2017

“ಮರಳಿ ಶಾಲೆಗೆ -2017”
ಆತ್ಮೀಯರೇ...
                8 ದಶಕಗಳಿಂದ ವಿದ್ಯಾದಾನಗೈಯುತ್ತಿದ್ದು ಭವ್ಯ ಹಿನ್ನಲೆಯಿರುವ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಹೆಗ್ಗಳಿಕೆ ಹೊಂದಿದ ಶಾಲೆಯಾಗಿದೆ ನಮ್ಮ ಹೇರೂರು ಸರಕಾರಿ ಬುನಾದಿ ಎಲ್.ಪಿ. ಶಾಲೆ. ಪ್ರಸಕ್ತ ವರ್ಷ ಕೇರಳ ಸರಕಾರದ ಮಹತ್ವಾಕಾಂಶಿ ಯೋಜನೆಯಾದ “ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞ” ವನ್ನು ಸಾಕಾರಗೊಳಿಸಿ ವಿದ್ಯಾಲಯದ ಉಳಿವು ಮತ್ತು ಪ್ರಗತಿಗೋಸ್ಕರ ಸಮಸ್ತ ಪೂರ್ವ ವಿದ್ಯಾರ್ಥಿಗಳನ್ನೂ, ಊರ ವಿದ್ಯಾಭಿಮಾನಿಗಳನ್ನೂ ದಿನಾಂಕ. 12.03.2017, ಭಾನುವಾರ ಮಧ್ಯಾಹ್ನ 3.00 ಟೆಗೆ ಶಾಲಾ ಸಭಾಂಗಣದಲ್ಲಿ ನಡೆಯುವ ಪೂರ್ವ ವಿದ್ಯಾರ್ಥಿ ಸಮಾಗಮ – “ಮರಳಿ ಶಾಲೆಗೆ 2017” ಕಾರ್ಯಕ್ರಮಕ್ಕೆ ಹಾರ್ದಿಕವಾಗಿ ಸ್ವಾಗತಿಸುತ್ತಿದ್ದೇವೆ. ನಿಮ್ಮ ಅತ್ಯಮೂಲ್ಯ ಸಲಹೆ ಸೂಚನೆಗಳನ್ನಿತ್ತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

SMC ಅಧ್ಯಕ್ಷರು                                                                                                           ಶಾಲಾ ಮುಖ್ಯೋಪಾಧ್ಯಾಯರು
ಶಿಕ್ಷಕ-ರಕ್ಷಕ ಸಂಘ                                                                                                             GBLP  ಶಾಲೆ ಹೇರೂರು



Saturday, 11 February 2017

~~MANGALORE-PILIKULA STUDY TOUR~~
ಮಂಗಳೂರು | ಪಿಲಿಕುಳ ಕಲಿಕಾ ಯಾತ್ರೆಯ ಅವಿಸ್ಮರಣೀಯ ಕ್ಷಣಗಳು...
~~~11-2-2017~~~