Monday, 28 July 2014

ಈದ್‌ ಮಿಲಾದ್‌ ಶುಭಾಶಯಗಳು...
  
   ಭಾರತ ದೇಶ ಹಲವು ಮತ-ಧರ್ಮಗಳ ನೆಲೆಬೀಡು. ಇಲ್ಲಿರುವಷ್ಟು ಧರ್ಮಗಳು ಜಗತ್ತಿನ ಮತ್ತಾವ ದೇಶದಲ್ಲಿಯೂ ಇರಲಾರದು. ಇಲ್ಲಿ ವಿವಿಧತೆಯಲ್ಲಿ ಏಕತೆ ಇರುವುದು ವೈಶಿಷ್ಟ್ಯನಾಳೆ ದಿನಾಂಕ 29-7-2014 ಮುಸಲ್ಮಾನ ಬಾಂಧವರ ಪವಿತ್ರ "ಈದ್ ಮಿಲಾದ್" ಹಬ್ಬ . ರಮ್ಜಾನ್ ತಿಂಗಳ ಆರಂಭವಾದೊಡನೆ ನರಕದ ಬಾಗಿಲುಗಳನ್ನು ಮುಚ್ಚಿ ಸ್ವರ್ಗದ ಬಾಗಿಲುಗಳನ್ನು ತೆರೆಯಲಾಗುತ್ತದೆ, ಸ್ವರ್ಗದ ಎಂಟು ಬಾಗಿಲುಗಳಲ್ಲಿ  ‘ರಿಯಾನಾಎಂಬ ಬಾಗಿಲು  ವ್ರುತಧಾರಿಗಳ  ಸಲುವಾಗಿ ತೆಗೆದಿರುತ್ತದೆಯಂತೆಯೆಂದು ನಂಬಿಕೆ.

          ಮೂವತ್ತು ದಿನಗಳ ಉಪವಾಸದ ಬಳಿಕ ರಂಜಾನ್ ತಿಂಗಳಿಗೆಅಲ್ವಿದಾ' ಅಥವಾ ಹೇಳಿ ಶವ್ವಾಲ್ ತಿಂಗಳ ಮೊದಲ ಚಂದ್ರದರ್ಶನ, ರಂಜಾನ್ ಹಬ್ಬದ ಸಂಭ್ರಮವನ್ನು ತರುತ್ತದೆ. ದಿನ ಉಪವಾಸಮಾಡುವುದು ನಿಷಿದ್ಧ. ಹಬ್ಬವು ತಿಂದುಂಡು ಖುಶಿಪಡಲು ದೇವರು ಅನುಗ್ರಹಿಸಿದ ದಿನವೆಂದು ಪರಿಗಣಿಸಲಾಗುತ್ತದೆ. ಉಳ್ಳವರು ಖುಶಿಪಟ್ಟು ಆಚರಿಸುವುದರಿಂದ ಮಾತ್ರ ಹಬ್ಬ ಪರಿಪೂರ್ಣವಾಗುವುದಿಲ್ಲಬಡವರಿಗೂ ಕೂಡ ಅವಕಾಶವನ್ನು ಕಲ್ಪಿಸಿಕೊಡುವುದು ಉಳ್ಳವರ ಕರ್ತವ್ಯ. ಆದುದರಿಂದ ನಿಯಮ ಪ್ರಕಾರ ತಾವು ತಿನ್ನುವ ಉತ್ತಮದರ್ಜೆಯ ಧಾನ್ಯ ಮತ್ತು ಅನುಕೂಲವಿರುವವನು, ಹಣವಿರುವವನು ನಿಗದಿಪಡಿಸಲಾದ ಮೊತ್ತವನ್ನು ಬಡವರಿಗೆ ಹಬ್ಬದ ಬೆಳಗ್ಗಿನ ವಿಶೇಷವಾದ ಈದ್ ಪ್ರಾರ್ಥನೆಯ ಮೊದಲು ಸದಕಾ'  'ಝಕಾತ್' ಅಥವಾ ದಾನ ಮಾಡಲೇಬೇಕು. ಹಬ್ಬದ ದಿನ ಬೆಳಗ್ಗೆ ತನ್ನ ಬಳಿ ಇದ್ದುದರಲ್ಲಿ ಶುಭ್ರವಾದ ಉತ್ತಮ ಬಟ್ಟೆಯನ್ನು ಅಥವಾ ಹೊಸ ಬಟ್ಟೆಯನ್ನು ತೊಟ್ಟು ಈದ್ ವಿಶೇಷ ನಮಾಜಿಗಾಗಿ ಎಲ್ಲರೂ ಮಸೀದಿಗೆ ಹೋಗಬೇಕಾದದ್ದು ಕೂಡ ಮುಖ್ಯ ಆಚರಣೆಗಳಲ್ಲಿ ಒಂದು. ಇಲ್ಲಿ ಈದ್ ನಮಾಜು ಮುಗಿದ ಕೂಡಲೇ ಇಮಾಮ್ ಅಥವಾ ಖತೀಬ್ ಕುತ್ಬಾ ಪ್ರವಚನ ಮಾಡುವುದನ್ನು ಕೂತು ಕೇಳುವುದು ಕೂಡ ಒಂದು ಮುಖ್ಯ ಭಾಗ. ಮನೆಯಲ್ಲಿ ಕ್ಷೀರ್ (ಸಿಹಿ ಸೇವಿಗೆ) ಅನ್ನ ಬಿರಿಯಾನಿ ಅಡಿಗೆ ತಯಾರಿಸಿ ಬಂಧುಮಿತ್ರರಿಗೆ ಆಮಂತ್ರಣ ನೀಡುತ್ತಾರೆ. ಹಬ್ಬದ ದಿನ ಎಲ್ಲರೂ ಮುಂಜಾನೆ ಸ್ನಾನಮಾಡಿ ಹೊಸ ಬಟ್ಟೆ ಇಲ್ಲವೆ ಶುಭ್ರಬಟ್ಟೆ ಧರಿಸಿ ಕಣ್ಣಿಗೆ ಸುರಮಾ ಲೇಪಿಸಿಕೊಂಡು ಸುಗಂಧ ದ್ರವ್ಯಗಳನ್ನು ಪೂಸಿಕೊಂಡು ಸಡಗರಸಂಭ್ರಮ ಸಂತೋಷದಿಂದ ಜಮಾಅತ್ನೊಂದಿಗೆ ಕೂಡಿಕೊಂಡು ತಕಬೀರ ಹೇಳುತ್ತಾಈದಗಾಮೈದಾನದಲ್ಲಿ ನೆರೆಯುತ್ತಾರೆ. ಅಲ್ಲಿ ಸುಮಾರು ಹತ್ತು ಗಂಟೆಯ ಹೊತ್ತಿಗೆ ಮುಸ್ಲಿಂ ಮುಖಂಡರು, ಧಾರ್ಮಿಕ ಶ್ರದ್ಧೆಯುಳ್ಳವರು ರಮ್ಜಾನ್ ತಿಂಗಳ ಮಹತ್ವ ಹಾಗೂ ನಮಾಜು ವೃತಾಚರಣೆ ಆವಶ್ಯಕತೆ; ಫಿತರಾ-ಸದಖಾ-ಜಕಾತ್ಗಳ ವೈಶಿಷ್ಟ್ಯ ಕುರಿತು ಬಯಾನ್ ಮಾಡುತ್ತಾರೆ. ‘ಈದುಲ್ ಫಿತರ್ನಮಾಜು ಸಲ್ಲಿಸುವ ರೀತಿ ಕ್ರಮದ ಬಗೆಗೆ ವಿವರಣೆ ನೀಡಲಾಗುತ್ತದೆ. ಅನಂತರ ಮುಸ್ಲಿಂ ಸಹೋದರರು ಭುಜಕ್ಕೆ ಭುಜ ಹಚ್ಚಿ ಭಕ್ತಿಗೌರವದಿಂದ ಸಾಲಾಗಿ ನಿಂತು ನಮಾಜ್  ಸಲ್ಲಿಸಲು ಸಿದ್ಧರಾಗುತ್ತಾರೆ.ಇದಾದ ನಂತರ ಪರಸ್ಪರ ಆಲಂಗಿಸಿಕೊಂಡುಈದ್ ಮುಬಾರಕ್' ಶುಭಾಶಯಗಳನ್ನು ಕೋರಲಾಗುತ್ತದೆ. ತಮ್ಮ ಹಿತೈಷಿಗಳು, ಸ್ನೇಹಿತರು, ಬಂಧು ಬಳಗದವರ ಮನೆಗಳಿಗೆ ಪರಸ್ಪರ ಭೇಟಿಮಾಡುವುದು, ಸಿಹಿತಿಂಡಿ, ಒಣ ಖರ್ಜೂರ, ಒಣ ದ್ರಾಕ್ಷಿ, ಗೋಡಂಬಿ ಮುಂತಾದುವನ್ನು ಪರಸ್ಪರ ಹಂಚಿಕೊಳ್ಳುವ ಕ್ರಮವೂ ಇದೆ ಜೊತೆಗೆ ಮಕ್ಕಳಿಗೆ ಹಿರಿಯರುಈದಿ' ಅಥವಾ ಹಣದ ಕೊಡುಗೆಯನ್ನು ನೀಡುವ ಕ್ರಮವಿದೆ. ರಮ್ಜಾನ್ ತಿಂಗಳಿನಲ್ಲಿ ನಮಾಜ, ರೋಜ, ಕುರಾನ್ ಪಠಣ, ದರೂದೆ ಷರೀಫ್ ಓದುವುದರಿಂದಹೂರ್ ಪರಿಎಂಬ ಸ್ವರ್ಗದ ಪಕ್ಷಿ ಅವರನ್ನು ಸ್ವರ್ಗಕ್ಕೆ ತಲುಪಿಸಲು ದಾರಿ ಕಾಯುತ್ತಿರುತ್ತದೆಯಂತೆ. ರಮ್ಜಾನ್ ತಿಂಗಳಿನಲ್ಲಿ ತನ್ನನ್ನು ಪ್ರಾರ್ಥಿಸುವವರಿಗೆ ಅಲ್ಲಾಹನು ಸುಪ್ರೀತಿಯಿಂದ ಸಾಕಷ್ಟು ಸುಖಶಾಂತಿ ಸಮೃದ್ಧಿ ನೀಡುತ್ತಾನೆಂದು ಮುಸ್ಲಿಂ ಬಾಂಧವರ ಅಭಿಪ್ರಾಯ. ಅಲ್ಲದೆ ತಿಂಗಳಲ್ಲಿ ಮಾಡಿದ ಒಂದು ಪುಣ್ಯದ ಕೆಲಸಕ್ಕೆ ಪ್ರತಿಯಾಗಿ ಎಪ್ಪತ್ತರಷ್ಟು ಪುಣ್ಯ ಸ್ವರ್ಗದಲ್ಲಿ ದೊರೆಯುತ್ತದೆಯೆಂಬ ನಂಬಿಗೆಯಿದೆ. ಹಾಗೂ ತಪ್ಪುಗಳಿಂದ ದೂರ ಇರುವ, ನರಕದ ದಳ್ಳುರಿಯಿಂದ ರಕ್ಷಿಸುವ, ಏಕೈಕ ಉಪಾಯ ವೃತಾಚರಣೆ  ಆಗಿದೆಯೆಂದು ನಿಷ್ಠಾವಂತ ಮುಸ್ಲೀಮರ ತಿಳುವಳಿಕೆ

       ಎಲ್ಲ ಮುಸ್ಲಿಂ ಬಾಂಧವರಿಗೂ ಹೇರೂರು ಶಾಲಾ ಸಿಬ್ಬಂದಿ ವರ್ಗದಿಂದ ಸ್ನೇಹಾದರಗಳು ತುಂಬಿದ "ಈದ್ ಮುಬಾರಕ್'ದೇವನೊಬ್ಬ ನಾಮ ಹಲವು ಎಂಬ ಸತ್ಯವನ್ನು ನಾವು ತಿಳಿದು ಬಾಳೋಣ. ಈದ್ ಹಬ್ಬ , ಗೌರಿ ಗಣೇಶ ಹಬ್ಬ ಗಳು ಸೌಹಾರ್ದಮಯವಾಗಿ ಆಚರಿಸಲ್ಪಡಲಿ... ಶುಭಾಶಯಗಳು...

ಕೃಪೆ: ಬಲ್ಲ ಮೂಲಗಳಿಂದ
ಫೋಟೋ: ಪ್ರವೀಣ್ ಫೋಟೋಗ್ರಫಿ 

Friday, 25 July 2014

ചാന്ദ്രമനുഷ്യനുമായി കുട്ടികള് സംവദിച്ചു


ജി ബി എ എൽ പി സ്കൂൾ ഹേരൂരിൽ ചാന്ദ്രദിനത്തിൽ ചാന്ദ്രമനുഷ്യനുമായി കുട്ടികള് സംവദിച്ചു. ചാന്ദ്രയാൻ വീഡിയോ ദൃശ്യം പ്രദര്ശിപ്പിക്കുകയും അതുമായ് ബന്ധപ്പെട്ട സംശയങ്ങൾക്ക് ചാന്ദ്രമനുഷ്യനായ് വേഷം കെട്ടിയ അധ്യാപകരായ കൃഷ്ണ കുമാർ പള്ളിയത്തും ഭാഷാ പരിഭാഷകനായി എത്തിയ പ്രവീണ്‍ കുമാറും കുട്ടികളെ ഏറെ ചിന്തിപ്പിക്കുകയും രസിപ്പിക്കുകയും ചെയ്തു . അന്വേഷണാത്മക ചിന്ത വളർത്താനും അറിവിൻ  വാതായനങ്ങൾ കുട്ടികൾക്കുമുന്നിൽ തുറന്നിടാനും ചാന്ദ്രദിനം ഉപകരിച്ചു.







Sunday, 20 July 2014

World Population Day - 11 July

Whether we can live together equitably on a healthy planet will depend on the choices and decisions we make now. In a world of 7 billion people, and counting, we need to count each other...


Photo courtesy: google



Saturday, 19 July 2014

ವಿಶ್ವ ಮಾದಕ ವಸ್ತು ವಿರೋಧಿ ದಿನ.. 26-6-2014

ದಿನಾಂಕ 26-6-2014 ರಂದು ನಮ್ಮ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನವನ್ನು ಅಚರಿಸಲಾಯಿತು. ಸಮಾಜಕ್ಕೆ ದೊಡ್ಡ ಪಿಡುಗಾದ ಅಮಲು ಪದಾರ್ಥಗಳ ಚಟಕ್ಕೆ ದಾಸರಾಗದಂತೆ ಹಾಗೂ ಶರೀರದ ಮೇಲುಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಲಾಯಿತು ಹಾಗೂ ಮಾದಕ ವಸ್ತುಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆಯೆಂದು ಮಕ್ಕಳಲ್ಲಿ ಅರಿವು ಮೂಡಿಸಲಾಯಿತು. ಶಾಲಾ ಮುಖ್ಯೊಪಾಧ್ಯಾಯರಾದ ಅಬ್ಬಾಸ್ .ಕೆ  ಪ್ರತಿಜ್ನೆಯನ್ನು ಮಕ್ಕಳಿಗೆ ಓದಿ ಹೇಳಿದರು. ಸ್ಲೈಡ್ , ಕಾರ್ಟೂನ್ ಪ್ರದರ್ಶನ ಕಾರ್ಯಕ್ರಮ ಜರಗಿತು.

Photo courtesy: google

ವಾಚನಾ ಸಪ್ತಾಹ ಕಾರ್ಯಕ್ರಮ

               
   

          ಡಾ. ಪಿ.ಎನ್ ಪಣಿಕ್ಕರ್ ಸ್ಮರಣಾರ್ಥ ಜೂನ್ ೧೯ ರಿಂದ ಒಂದು ವಾರಗಳ ಕಾಲ ವಾಚನಾ ಸಪ್ತಾಹ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಜರಗಿತು. ವಾಚನಾ ಸಪ್ತಾಹ'ದ ಪ್ರಯುಕ್ತ ಮಕ್ಕಳ ಮೆಗಜ್ಹಿನ್ ಬಿಡುಗಡೆಗೊಳಿಸಲಾಯಿತು. ಒಗಟು, ಕವಿತಾ ರಚನೆ, ಚಿತ್ರರಚನೆ, ಲಿಬ್ರೆರಿ ಪುಸ್ತಕ ವಿಮರ್ಶೆ, ಕಥೆ ಹೇಳುವುದು, ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಶಾಲ ಮುಖ್ಯ ಶಿಕ್ಶಕ ಅಬ್ಬಸ್ ಕೆ ಉಧ್ಘಾಟಿಸಿದರು. ಶಾಲಾ ಹಿರಿಯ ಶಿಕ್ಷಕ ಕೃಷ್ಣ ಕುಮಾರ್ ಕವಿತೆಗಳ ಲೋಕಕ್ಕೆ ಮಕ್ಕಳ ಕರೆದೊಯ್ದರು. ಸಾಹಿತ್ಯ ಕ್ಷೇತ್ರಕ್ಕೆ ಡಾ. ಪಿ.ಎನ್ ಪಣಿಕ್ಕರ್ ಅವರ ಕೊಡುಗೆಗಳನ್ನ ಸ್ಮರಿಸಲಾಯಿತು. ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.


Photo courtesy: google
 ಪರಿಸರ ದಿನಾಚರಣೆ... ನಮ್ಮ ಶಾಲಾ ಪುಟಾಣಿಗಳಿಂದ


ನೈಸರ್ಗಿಕ ಸಂಪತ್ತನ್ನು ಮಿತವಾಗಿ ಬಳಸಿ ಪರಿಸರ ಸಮತೋಲನ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಗ್ಗೆ ಶಾಲಾ ಹಂತದಿಂದಲೇ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ನಮ್ಮ  ಶಾಲೆಯಲ್ಲಿ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅಬ್ಬಾಸ್. ಕೆ. ಮತ್ತು ಹಿರಿಯ ಶಿಕ್ಷಕ ಕೃಷ್ಣ ಕುಮಾರ್ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಪ್ರತಿ ಮಗು ಗಿಡಗಳನ್ನು ನೆಟ್ಟು ತಾನು ಬೆಳೆಯುವುದರ ಜೊತೆಗೆ ಮರವನ್ನು ಬೆಳೆಸುವದರ ಮೂಲಕ ಸಾಮಾಜಿಕ  ಜವಾಬ್ದಾರಿ ನಿರ್ವಹಿಸಿ ಉತ್ತಮ ನಾಗರಿಕರಾಗಬೇಕೆಂದು ಕೃಷ್ಣ ಕುಮಾರ್ ಕರೆ ನೀಡಿದರು. ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಸ್ಲೈಡ್ ಶೋ ಕಾರ್ಯಕ್ರಮ ಜರಗಿತು, ಎಲ್ಲ ಜೀವರಾಶಿಗಳಿಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಪರಿಸರವು ಸಂರಕ್ಷಣೆ ನೀಡುತ್ತದೆ ಹಾಗೆಯೇ ಪರಿಸರ ರಕ್ಷಿಸುವ ಮೂಲಕ ನಾವು ಅದರ ಋಣ ತೀರಿಸುವ ಕಾರ್ಯ ಮಾಡಬೇಕಾಗಿದೆಯೆಂದು ಶಿಕ್ಷಕ ಪ್ರವೀಣ್  ಅಭಿಪ್ರಾಯಪಟ್ಟರು. ಬಳಿಕ ನಡೆದ ಜಾಗೃತಿ ಮೆರವಣಿಗೆಯಲ್ಲಿ ಶಿಕ್ಷಕರಾದ ಜಾಫರ್ , ಪೂರ್ಣಿಮಾ ಮಾತೃ ಸಂಘದ ಸದಸ್ಯೆಯರು, ಪಾಲ್ಗೊಂಡರು. ಶಾಲೆಯ ಎಲ್ಲ ಪುಟಾಣಿಗಳು ಉತ್ಸಾಹದಿಂದ ಭಾಗವಹಿಸಿದ್ದ ಕಾರ್ಯಕ್ರಮದ ಕೊನೆಗೆ ಮಕ್ಕಳು ತಮ್ಮ ಸ್ವಂತ ಆರೈಕೆಯಲ್ಲಿ ಬೆಳೆಸಲು ಸಸಿಗಳನ್ನು ವಿತರಿಸಲಾಯಿತು.

ಪುಟ್ಟ ಕರಗಳಲ್ಲಿ ಹಸಿರು ಚಿಗುರೋಡೆಯಲೆಂದೇ ನಮ್ಮ ಹಾರೈಕೆ 


ಜಾಗೃತಿ ಮೆರವಣಿಗೆ



ಗಿಡ ವಿತರಣೆ 
















ನಮ್ಮ  ಶಾಲಾ ಪ್ರವೇಶೋತ್ಸವ ...



ಹೇರೂರು: ಸರಕಾರೀ ಬುನಾದಿ ಯಲ್. ಪಿ. ಶಾಲೆಯಲ್ಲಿ 2014-15 ನೇ ಸಾಲಿನ  ಶಾಲಾ ಪ್ರವೇಶೋತ್ಸವವು ವರ್ಣಮಯ ಹಾಗೂ ವಿನೂತನವಾಗಿ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಅಬ್ಬಾಸ್ ಕೆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಾ ಪುಷ್ಪಗುಚ್ಛ ನೀಡಿ ನೂತನ ಪುಟಾಣಿಗಳನ್ನು ಬರಮಾಡಿಕೊಂಡರು. ಪಂಚಾಯತ್ ಸದಸ್ಯರಾದ ಪುಷ್ಪರಾಜ್ ಐಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಬರಹ ಲೋಕಕ್ಕೆ ಕಾಲಿಟ್ಟ ಹೊಸ ಕಂದಮ್ಮಗಳಿಗೆ ಪಠ್ಯ ಪುಸ್ತಕ , ಕಲಿಕಾ ಕಿಟ್  ನೀಡಿ ಹಾರೈಸಿದರು. PTA  ಅಧ್ಯಕ್ಷೆ ಶೋಭಾ T ಶುಭಾಶಂಸನೆಗೆಯ್ಯುತ್ತಾ ಮಕ್ಕಳಲ್ಲಿ ಅಡಗಿರುವ ಚೈತನ್ಯವನ್ನು ಹೊರ ತಂದು ಅವರ ಬದುಕಿಗೆ ಹೊಸ ದಿಕ್ಕು ತೋರಬೇಕೆಂದು ರಕ್ಷಕರಲ್ಲಿ ತಮ್ಮ ಹೊಣೆಗಾರಿಕೆಯ ಮಹತ್ವ ತಿಳಿಸಿದರು. ಶಾಲಾ ಅಧ್ಯಾಪಕರಾದ ಕೃಷ್ಣ ಕುಮಾರ್ , ಪ್ರವೀಣ್ , ಜಾಫರ್ ಹಾಡುಗಳು ಮತ್ತು ಆಟಗಳ ಮೂಲಕ ಮಕ್ಕಳನ್ನು ರಂಜಿಸುತ್ತಾ ಸಿಹಿ ಹಂಚಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಶಿಕ್ಷಕಿ ಪೂರ್ಣಿಮಾ ವಂದಿಸಿದರು..


PTA  ಅಧ್ಯಕ್ಷೆ ಶೋಭಾ T

ಪಂಚಾಯತ್ ಸದಸ್ಯರಾದ ಪುಷ್ಪರಾಜ್ ಐಲ್