ಹೇರೂರು: ಸರಕಾರೀ ಬುನಾದಿ ಯಲ್.
ಪಿ.
ಶಾಲೆಯಲ್ಲಿ 2014-15 ನೇ ಸಾಲಿನ ಶಾಲಾ ಪ್ರವೇಶೋತ್ಸವವು ವರ್ಣಮಯ ಹಾಗೂ ವಿನೂತನವಾಗಿ ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಅಬ್ಬಾಸ್ ಕೆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಾ ಪುಷ್ಪಗುಚ್ಛ ನೀಡಿ ನೂತನ ಪುಟಾಣಿಗಳನ್ನು ಬರಮಾಡಿಕೊಂಡರು. ಪಂಚಾಯತ್ ಸದಸ್ಯರಾದ ಪುಷ್ಪರಾಜ್ ಐಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಬರಹ ಲೋಕಕ್ಕೆ ಕಾಲಿಟ್ಟ ಹೊಸ ಕಂದಮ್ಮಗಳಿಗೆ ಪಠ್ಯ ಪುಸ್ತಕ , ಕಲಿಕಾ ಕಿಟ್
ನೀಡಿ ಹಾರೈಸಿದರು. PTA ಅಧ್ಯಕ್ಷೆ ಶೋಭಾ T ಶುಭಾಶಂಸನೆಗೆಯ್ಯುತ್ತಾ ಮಕ್ಕಳಲ್ಲಿ ಅಡಗಿರುವ ಚೈತನ್ಯವನ್ನು ಹೊರ ತಂದು ಅವರ ಬದುಕಿಗೆ ಹೊಸ ದಿಕ್ಕು ತೋರಬೇಕೆಂದು ರಕ್ಷಕರಲ್ಲಿ ತಮ್ಮ ಹೊಣೆಗಾರಿಕೆಯ ಮಹತ್ವ ತಿಳಿಸಿದರು. ಶಾಲಾ ಅಧ್ಯಾಪಕರಾದ ಕೃಷ್ಣ ಕುಮಾರ್ , ಪ್ರವೀಣ್ , ಜಾಫರ್ ಹಾಡುಗಳು ಮತ್ತು ಆಟಗಳ ಮೂಲಕ ಮಕ್ಕಳನ್ನು ರಂಜಿಸುತ್ತಾ ಸಿಹಿ ಹಂಚಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಶಿಕ್ಷಕಿ ಪೂರ್ಣಿಮಾ ವಂದಿಸಿದರು..
No comments:
Post a Comment