ಶ್ರಾವಣ
ಮಾಸ ಪ್ರಾರಂಭವಾದರೆ ಸಾಕು ಹಬ್ಬಗಳು ಶುರುವಾಗುತ್ತದೆ.
ಈ ಶ್ರಾವಣ ಮಾಸದ
ಮೊದಲಿನಲ್ಲಿ ಬರುವ ದೊಡ್ಡ ಹಬ್ಬ
ನಾಗರ ಪಂಚಮಿ. ಈ ಹಬ್ಬವನ್ನು
ಗರುಡ ಪಂಚಮಿ ಅಂತ ಕೂಡ
ಕರೆಯುತ್ತಾರೆ. ಅಣ್ಣ-ತಂಗಿಯ ಪ್ರೀತಿಯನ್ನು
ಸಾರಿ ಹೇಳುವ ದಿನ. ರಕ್ಷಾಬಂಧನ
ಉದ್ದೇಶ ಕೂಡ ಇದೇ. ಆದರೆ
ಅದು ಉತ್ತರ ಬಾರತದ ಉಡುಗೊರೆ.
ಪಂಚಮಿ ಮಾತ್ರ ಅಚ್ಚ ಕನ್ನಡ
ಕನ್ನಡತಿಯರ ಹಬ್ಬ. ನಾಗರ ಪಂಚಮಿಯ
ಹೆಸರೇ ಹೇಳುವಂತೆ ನಾಗನನ್ನು ಪೂಜಿಸುವ ದಿನ. ಪಂಚಮಿಯ
ದಿನ ಅಂದರೆ ಶ್ರಾವಣ ಮಾಸದ
ಐದನೇ ದಿನ ನಾಗರಕಲ್ಲಿಗೆ, ಹಾವಿನ
ಹುತ್ತಕ್ಕೆ ಅಕ್ಕಿ ಹಿಟ್ಟಿನಿಂದ ಮಾಡಿದ
ನಾಗರ ಹಾವಿನ ಚಿತ್ರಕ್ಕೆ ಶ್ರದ್ಧಾಭಕ್ತಿಗಳಿಂದ
ಹಾಲೆರೆಯಲಾಗುವುದು. ಈ ಸಮಯದಲ್ಲಿ ಶುದ್ಧ
ಸಸ್ಯಾಹಾರ ಅದರಲ್ಲೂ ಸಾತ್ವಿಕ ಆಹಾರಗಳನ್ನು
ಮಾಡಿ ತಯಾರಿಸಲಾಗುವುದು. ಈ ಸಮಯದಲ್ಲಿ ಉದ್ದಿನ
ಕಡುಬು, ಸಿಹಿ ಕಡುಬು, ತಂಬಿಟ್ಟು
ಮುಂತಾದ ಸಾತ್ವಿಕ ಆಹಾರಗಳನ್ನು ತಯಾರಿಸಲಾಗುವುದು.
ಸಾತ್ವಿಕ ಅಹಾರವನ್ನು ತಿಂದರೆ ದೇಹದ ಆರೋಗ್ಯ
ಹೆಚ್ಚಾಗುವುದು. ನಾಗರ ಪಂಚಚಮಿಯನ್ನು ಸೋದರರ
ಹಬ್ಬ ಎಂದೂ ಕರೆಯಲಾಗುವುದು. ಈ
ಸಮಯದಲ್ಲಿ ಸೋದರಿಯು ಸೋದರನಿಗೆ ಹುತ್ತಕ್ಕೆ
ಎರೆದ ಹಾಲನ್ನು ತಂದು ಸೋದರನ
ಬೆನ್ನಿಗೆ ವೀಳ್ಯದೆಲೆಯಿಂದ 3 ಸಲ ಹಾಲು ಮತ್ತು
3 ಸಲ ನೀರು ಎರಚಿ ತವರು
ತಂಪಾಗಿರಲಿ ಎಂದು ಹಾರೈಸಿದರೆ, ಸಹೋದರರು
ಪ್ರೀತಿಯ ಅಕ್ಕ ತಂಗಿಯರಿಗೆ ಉಡುಗೊರೆ
ಕೊಟ್ಟು ಸಂಭ್ರಮಿಸುತ್ತಾರೆ. ಅಣ್ಣ-ತಂಗಿಯರ ಬಾಂಧವ್ಯ
ಮತ್ತಷ್ಟು ಗಟ್ಟಿಯಾಗಲಿ ಎಂಬುದು ಈ ಹಬ್ಬದ
ಆಶಯವಾಗಿದೆ. ದಕ್ಷಿಣ ಕನ್ನಡದಲ್ಲಿ ಈ
ಹಬ್ಬವನ್ನು ನಾಗರ ಪಂಚಮಿ ಎಂದು
ಕರೆದರೆ ಉತ್ತರ ಕರ್ನಾಟಕದ ಕಡೆಗೆ
ಜೋಕಾಲಿ ಹಬ್ಬವೆಂದೇ ಜನಜನಿತವಾಗಿದೆ. ಈ ಸಂಭ್ರಮದಲ್ಲಿ ಮನೆಯಲ್ಲಿ
ಜೋಕಾಲಿ ಕಟ್ಟಿ ಆಡುವುದು ಈ
ಕಡೆಯ ವಿಶೇಷ ವಿಶಿಷ್ಟ. ಇಂದು
ಪ್ರತಿ ಮನೆಯಲ್ಲಿ ಜೋಕಾಲಿಯನ್ನು ಕಾಣಬಹುದು. ಈ ಹಬ್ಬಕ್ಕೆ ವಿಶೇಷವಾಗಿ
ವಿವಿಧ ರೀತಿಯ ಉಂಡೆಗಳನ್ನು ಮಾಡಲಾಗುವುದು.
ಮಕ್ಕಳಿಗೆ ಹೊಸ ಬಟ್ಟೆ ತೊಡಿಸಲಾಗುವುದು.
ಶೇಂಗಾ ಉಂಡೆ, ಎಳ್ಳುಂಡೆ, ಕಡಲೆ
ಉಂಡೆ, ತಂಬಿಟ್ಟು, ಬೇಳೆ ಕಡುಬು, ಬೂಂದಿ
ಉಂಡೆ ಹೀಗೆ ಬಗೆಬಗೆಯ ರುಚಿಕರ
ತಿಂಡಿ ತಿನಿಸುಗಳು ತಯಾರಿಸಿ ಸವಿದು ಸಂಭ್ರಮಿಸಲಾಗುವುದು.
ಸಮಸ್ತ ಓದುಗರಿಗೆ
ನಾಗರ ಪಂಚಮಿ ಹಬ್ಬದ ಹಾರ್ದಿಕ
ಶುಭಾಶಯಗಳು...
ಕೃಪೆ: ಬಲ್ಲ ಮೂಲಗಳಿಂದ
ಫೋಟೋ: ಪ್ರವೀಣ್ ಫೋಟೋಗ್ರಫಿ
No comments:
Post a Comment