ಮಧುರ
ಮಿಲನ
ಕಾದಿಹಳು
ಭೂದೇವಿ
ಇನಿಯನ
ಆಗಮನಕ್ಕಾಗಿ
ಬರುವನೇ
ಅವನು..
ವಿರಹದ
ವೇದನೆ ನೀಗಲು
ಮಧುರ
ಮಿಲನವಾಗಲು
ಕಾಯುವಿಕೆ
ವ್ಯರ್ಥವಾಗದಂತೆ
ಬಂದೇ
ಬಿಟ್ಟನವನು..
ಗುಡುಗು
ಮಿಂಚುಗಳ
ಗಟ್ಟಿಮೇಳದೊಂದಿಗೆ
ತಂಬೆಲರಿನ
ಚಾಮರ ಬೀಸುತ್ತಾ
ತನ್ನ
ನಲ್ಲೆಯ ಆಲಿಂಗಿಸಲು..
ಧನ್ಯಳಾದಳು
ಇಳೆ
ನಲ್ಲನ
ಸ್ಪರ್ಶದಿಂದ
ಪುಳಕಿತವಾಯಿತು
ಮನ
ಮಳೆರಾಯನ
ಆಗಮನದಿಂದ...
ಪೂರ್ಣಿಮಾ.
LPSA, ಜಿ.ಬಿ.ಯಲ್.ಪಿ.ಯಸ್ ಹೇರೂರು
No comments:
Post a Comment