Thursday, 20 November 2014

ಹಳ್ಳಿಯ ಲೆಕ್ಕಗಳು


ತೂಕ ಹಾಗೂ ಅಳತೆಗೆ ಸಂಬಂಧಿಸಿದಂತೆ

              ಹಿಂದೆ ತೂಕವನ್ನು "ರೂಪಾಯಿ"ಗಳಿಂದಲೇ ಕಂಡುಕೊಂಡಿದ್ದು ನಮಗೆ ಕಂಡುಬರುತ್ತದೆ. ೨೪ ಬೆಳ್ಳಿ "ರೂಪಾಯಿ"ಗಳ ತೂಕವನ್ನು ಒಂದು "ಸೇರು" ಎಂದು ಮಾಡಿಕೊಂಡಿದ್ದರಿಂದ, ಅದರ ಅಳತೆಗೆ ತಕ್ಕಂತೆ " ಸೇರಿ"ನ ಸೃಷ್ಟಿಯಾಗಿರುವುದನ್ನು ನಾವು ಗಮನಿಸುತ್ತೇವೆ. ಹೀಗೆ "ಪಾವು", "ಚಟಾಕು", "ಗಜ", "ಅಂಗುಲ", "ಮೈಲಿ", "ಹರಿದಾರಿ" "ಎಕರೆ" ಮುಂತಾದ ಅಳತೆಮಾನಗಳು ಹಾಗೂ "ತೊಲ", "ಪಲ್ಲ", "ಖಂಡುಗ" ಮುಂತಾದ ತೂಕಮಾನಗಳು ಬಂದು ಸೇರಿಕೊಂಡಿವೆ. 
ತೂಕ ಹಾಗು ಅಳತೆಗಳನ್ನು ನಾವು ಈ ರೀತಿ ವಿಂಗಡಿಸಬಹುದಾಗಿದೆ.

೧ ಬೆಳ್ಳಿ ರೂಪಯಿ ತೂಕ =  ೧ ತೊಲ
೧ ಪಾವು =                      ೪ ಚಟಾಕು
೧ ಸೇರು =                      ೪ ಪಾವು ಅಥವ ೨೪ ಬೆಳ್ಳಿ ರೂಪಯಿಗಳ ತೂಕ
೧ ಇಬ್ಬಳಿಗೆ =                   ಐದೂವರೆ ಸೇರು (ದೊಡ್ದ ಇಬ್ಬಳಿಗೆಯಾದರೆ ೬ ಸೇರು)
೧ ಪಲ್ಲ =                         ೧೦೦ ಸೇರು
೧ ಕೊಳಗ =                    ೨ ಇಬ್ಬಳಿಗೆ ಅಥವ ೧೧ ಸೇರು
೧ ಖಂಡುಗ =                   ೪೦ ಇಬ್ಬಳಿಗೆ ಅಥವ ೨೦ ಕೊಳಗ
೧ ಅಡಿ =                         ೧೨ ಅಂಗುಲ ಅಥವ ಇಂಚು
೧ ಗಜ =                         ೩ ಅಡಿ ಅಥವ ೩೬ ಅಂಗುಲ
೧ ಗುಂಟೆ =                      ೨೨೦ ಚದರ ಗಜ
೧ ಎಕರೆ =                      ೪೦ ಗುಂಟೆ
೧ ಮೈಲಿ =                      ೮ ಫರ್ಲಾಂಗು
೧ ಹರಿದಾರಿ =                  ೪ ಮೈಲಿ
೧ ಗಾವುದ =                    ೧೨ ಹರಿದಾರಿ. ಉದಾಹರಣೆಗೆ,
ಚಟಾಕು=                       ಪಾವು.

೨ ಪಾವು=                       ೧ ಪಡಿ
೨ ಪಡಿ=                          ೧ ಸೇರು
೪ ಸೇರು=                       ೧ ಬಳ್ಳ
2 ಚಟಾಕು =                     ಪಾವು. 
2 ಪಾವು=                        ಅರ್ಧ ಸೇರು. 
2 ಅರ್ಧ ಸೇರು =               ೧ ಸೇರು. 
4 ಪಾವು =                       ೧ ಸೇರು

            ಈ ಮೊದಲೇ ಹೇಳಿದಂತೆ ಹಿಂದೆ "ಕಾಸು"ಗಳು ಬಹುಪಾಲು ಎಲ್ಲಾ ಅಳತೆಗಳಲ್ಲೂ ಪ್ರಧಾನ ಪಾತ್ರ ವಹಿಸುತ್ತಿದ್ದದ್ದು ನಮಗೆ ಕಾಣುತ್ತದೆ. ಮೂರು ಕಾಸಿನ ಒಂದು ಬಿಲ್ಲೆ, ಇಂಥ ನಾಲ್ಕು ಬಿಲ್ಲೆಗಳು ಸೇರಿದರೆ ಹನ್ನೆರಡು "ಕಾಸು" ಅಥವಾ ಒಂದು "ಆಣೆ"ಯಾಗುತ್ತದೆ. ಇಂದಿನ "ನಾಲ್ಕಾಣೆ", "ಎಂಟಾಣೆ", "ಹನ್ನೆರಡಾಣೆ", "ಹದಿನಾರಾಣೆ"ಗಳು ಈ ಹಿನ್ನಲೆಯಿಂದಲೇ ಬಂದಿರುವುದು ನಮಗೆ ತಿಳಿದ ಸಂಗತಿಯಾಗಿದೆ. ಈಗಲೂ ನಾವು ಈ "ಆಣೆ"ಗಳನ್ನು ಉಪಯೋಗಿಸುತ್ತೇವೆ.
ಚಲಾವಣೆಯಲ್ಲಿದ್ದ ನಾಣ್ಯಗಳು ಮತ್ತು ಉಪಯೋಗಿಸುತ್ತಿದ್ದ ಲೋಹಗಳು:
೧ ಕಾಸು (ತಾಮ್ರ)
೩ ಕಾಸು (ತಾಮ್ರ)
೬ ಕಾಸು (ನಿಕ್ಕಲ್)
೧ ಆಣೆ =  ೧೨ ಕಾಸು (ನಿಕ್ಕಲ್)
೨ ಆಣೆ =  ೨೪ ಕಾಸು (ನಿಕ್ಕಲ್)
೪ ಆಣೆ (ಬೆಳ್ಳಿ)
೮ ಆಣೆ (ಬೆಳ್ಳಿ)
೧ ರೂಪಾಯಿ = ೧೯೨ ಕಾಸು (ಬೆಳ್ಳಿ):
೧ ದುಡ್ಡು = ೪ ಕಾಸು
೧ ಪಾವಲಿ =  ೪ ಆಣೆ
೧ ಹಣ ಅಥವ ವರಹ= ೪ ಆಣೆ ಪಾವಲಿ
೧ ದುಗ್ಗಾಣಿ = ೮ ಕಾಸು ಅಥವಾ ೨ ದುಡ್ಡು ಎಂದು ಹೇಳಲಾಗುತ್ತಿತ್ತು.

            ಈಗಿನ ಖೋಟಾ ನೋಟುಗಳು ಇರುವಂತೆ, ಹಿಂದೆಯೂ ನಾಣ್ಯಗಳ ನಕಲು ಮಾಡಲಾಗುತ್ತಿತ್ತು. ಬೆಳ್ಳಿಕಾಸಿನ ನಕಲನ್ನು "ಸೀಸ"ದಲ್ಲಿ ಮಾಡುತ್ತಿದ್ದರು. ಆದುದರಿಂದ, ನಾಣ್ಯವನ್ನು ಚಿಮ್ಮಿಸಿ ಅದರ ಶಬ್ಧದ ಆಧಾರದ ಮೇಲೆ ಅದು "ಬೆಳ್ಳಿ" ಅಥವ "ಸೀಸ"ದಿಂದ ಮಾಡಲ್ಪಟ್ಟಿದೆ ಎಂಬುದನ್ನು ಗುರುತಿಸುತ್ತಿದ್ದರು. "ಹಣ", "ವರಹ" ಎಂಬ ಪದಗಳನ್ನು ಸಾಮಾನ್ಯವಾಗಿ ಮದುವೆ ಮುಂತಾದ ಸಮಾರಂಭಗಲ್ಲಿ ಹೆಚ್ಚು ಉಪಯೋಗಿಸುತ್ತಿದ್ದರು. ಮದುವೆಗಳಲ್ಲಿ ನೀಡುವ ಉಡುಗೊರೆಯ ಹಣದ (ಮುಯ್ಯಿ) ಪಟ್ಟಿ ಬರೆಯುವಾಗ "ವಧುವಿಗೆ ಸೋದರಮಾವನಿಂದ ನಾಲ್ಕು ವರಹ" ಅಥವಾ "ವರನಿಗೆ ಚಿಕ್ಕಪ್ಪನಿಂದ ಹತ್ತು ಹಣ" ಎಂದು ಹೇಳುತ್ತಿದ್ದರು. ಕೆಲವು ಭಾಗಗಳಲ್ಲಿ "ಆಗ", "ಅಡ್ಡ" ಮುಂತಾದ ಪದಗಳನ್ನು ಈ ಕೆಳಗಿನ ಅರ್ಥದಲ್ಲಿ ಉಪಯೋಗಿಸುತ್ತಿದ್ದರು.


ಆಗ = ಒಂದು
ಅಡ್ಡ = ಎರಡು
ದುಡ್ಡು = ನಾಲ್ಕು
ದುಗ್ಗಾಣಿ = ಎಂಟು
೧ ಬೆಳ್ಳಿ ರೂಪಯಿ ತೂಕ =  ೧ ತೊಲ

೧ ಪಾವು =   ೪ ಚಟಾಕು
೧ ಸೇರು =   ೪ ಪಾವು ಅಥವ ೨೪ ಬೆಳ್ಳಿ ರೂಪಯಿಗಳ ತೂಕ
೧ ಇಬ್ಬಳಿಗೆ =   ಐದೂವರೆ ಸೇರು (ದೊಡ್ದ ಇಬ್ಬಳಿಗೆಯಾದರೆ ೬ ಸೇರು)
೧ ಪಲ್ಲ =   ೧೦೦ ಸೇರು
೧ ಕೊಳಗ =   ೨ ಇಬ್ಬಳಿಗೆ ಅಥವ ೧೧ ಸೇರು
೧ ಖಂಡುಗ = ೪೦ ಇಬ್ಬಳಿಗೆ ಅಥವ ೨೦ ಕೊಳಗ
ಜೊತೆಗೆ ನಾಣ್ಯವಲ್ಲದಿದ್ದರೂ "ದುಡ್ಡು", "ಪಾವಲಿ" "ಹಣ ಅಥವ ವರಹ" ಹಾಗು "ದುಗ್ಗಾಣಿ" ಎಂಬ ಪದಗಳು ವ್ಯವಹಾರಿಕವಾಗಿ ಉಪಯೋಗಿಸಲ್ಪಡುತ್ತಿದ್ದವು. ಇವುಗಳನ್ನು "ಕಾಸು" ಮತ್ತು "ಆಣೆ"ಗಳಲ್ಲಿ ಹೇಳಬಹುದಾದರೆ:
೧ ದುಡ್ಡು = ೪ ಕಾಸು
೧ ಪಾವಲಿ = ೪ ಆಣೆ
೧ ಹಣ ಅಥವ ವರಹ= ೪ ಆಣೆ ಪಾವಲಿ
೧ ದುಗ್ಗಾಣಿ = ೮ ಕಾಸು ಅಥವಾ ೨ ದುಡ್ಡು ಎಂದು ಹೇಳಲಾಗುತ್ತಿತ್ತು.


ಕೃಪೆ : ಬಲ್ಲ ಮೂಲಗಳಿಂದ 
ಫೋಟೋ : ಗೂಗಲ್ 

Tuesday, 18 November 2014

SASTHROLSAVAM 2014-15 CLIKZ


           ನವೆಂಬರ್ 17,18 ರಂದು TIHSS ನಾಯ್ಮಾರ್ ಮೂಲೆ ಶಾಲೆಯಲ್ಲಿ ಕಾಸರಗೋಡು ರೆವೆನ್ಯೂ ಜಿಲ್ಲಾ ವಿಜ್ಞಾನ, ಸಮಾಜ ವಿಜ್ಞಾನ ಮೇಳ, ವೃತ್ತಿ ಪರಿಚಯ ಮೇಳ, IT  ಮೇಳ ಜರಗಿತು. ಚೆರುವತ್ತೂರು ಉಪಜಿಲ್ಲೆ ೨೦೦ ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಓವರ್ ಆಲ್ ಚಾಂಪಿಯನ್ ಶಿಪ್ ಗಳಿಸಿತು. ದಿನಾಂಕ 18 ರಂದು ಕ್ಲಿಕ್ಕಿಸಿದ ಆಯ್ದ ಫೋಟೋಗಳು....

KASARAGOD DISTRICT SASTHROLSAVAM 2014-15 RESULTS
CLICK HERE TO GET KASARAGOD DISTRICT SASTHROLSAVAM RESULTS ONLINE
ಕಾಸರಗೋಡು ರೆವೆನ್ಯೂ ಜಿಲ್ಲಾ  ಶಾಸ್ತ್ರೋತ್ಸವ ದಲ್ಲಿ ಸಮಾಜ ವಿಜ್ಞಾನ ಸ್ಪರ್ಧೆಗಳಲ್ಲಿ ಚಾರ್ಟ್ ವಿಭಾಗದಲ್ಲಿ A ಗ್ರೇಡ್ ಪಡೆದ ಮಕ್ಕಳಾದ ಉಮ್ಮರ್ ಮತ್ತು ಸುಮನ  ಜೊತೆ ಶಾಲಾ ಅಧ್ಯಾಪಕರಾದ ಪ್ರವೀಣ್ ಕುಮಾರ್, ಕೃಷ್ಣ ಕುಮಾರ್ ಪಳ್ಳಿಯತ್... 


Friday, 14 November 2014

ರಕ್ಷಕರ ಸಮ್ಮೇಳನ 2014-15

       ಕೇರಳ ಸರ್ವ ಶಿಕ್ಷಾ ಅಭಿಯಾನದ ನಿರ್ದೇಶದಂತೆ ಮಕ್ಕಳ ದಿನಾಚರಣೆಯಂಗವಾಗಿ "ಸ್ವಚ್ಛ ವಿದ್ಯಾಲಯ-ಸ್ಮಾರ್ಟ್ ವಿದ್ಯಾಲಯ" ಎಂಬ ಧ್ಯೇಯವನ್ನಿಟ್ಟುಕೊಂಡು ದಿನಾಂಕ 14-11-2014 ರಂದು ಮದ್ಯಾಹ್ನ 2 ಗಂಟೆಗೆ ನಮ್ಮ ವಿದ್ಯಾಲಯದಲ್ಲಿ ರಕ್ಷಕರ ಸಂಗಮ ಕಾರ್ಯಕ್ರಮ ನಡೆಸಲಾಯಿತು. PTA  ಅಧ್ಯಕ್ಷೆ ಶೋಭಾ .T  ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ಅಬ್ಬಾಸ್ .ಕೆ ಸ್ವಾಗತಿಸಿದರು. BRC  ಸಂಪನ್ಮೂಲ ವ್ಯಕ್ತಿಯಾದ  ಶ್ರೀ ಜಯರಾಂ ರವರು ಮುಖ್ಯ ಅತಿಥಿಗಳಾಗಿದ್ದುಕೊಂಡು ಉಚಿತ ಮಾರ್ಗದರ್ಶನವನ್ನು ಹೆತ್ತವರಿಗೆ ನೀಡಿದರು. ಶಿಕ್ಷಕ ಪ್ರವೀಣ್ ಕುಮಾರ್ ಹಾಗೂ ಜಯರಾಂ ಮಾಸ್ಟರ್ ಉತ್ತಮ ಜವಾಬ್ದಾರಿಯುತ ರಕ್ಷಕರ ಕರ್ತವ್ಯಗಳನ್ನು ಮನವರಿಕೆ ಮಾಡಿ ಕೊಡುತ್ತಾ ತರಗತಿ ನಡೆಸಿಕೊಟ್ಟರು. 

ಮುಖ್ಯ ಶಿಕ್ಷಕರಿಂದ ಸ್ವಾಗತ

 ಶೋಭಾ T {PTA}

 ಜಯರಾಂ ಮಾಸ್ಟರ್ {ಬ್ಲಾಕ್ ಸಂಪನ್ಮೂಲ ವ್ಯಕ್ತಿ } 

 ಉಪಜಿಲ್ಲಾ ಕ್ರೀಡಾ ಕೂಟದಲ್ಲಿ ಮಿಂಚಿದ ಪ್ರತಿಭೆಗೆ ಪುರಸ್ಕಾರ 






MID-TERM EXAMINATION TIME TABLE 2014-15


Thursday, 13 November 2014

                   Clean School                                  Smart School

PARENTS  SANGAMAM

ರಕ್ಷಕರ ಸಮ್ಮೇಳನ
To dear Parents...
            Sarva Shiksha Abhiyan Kerala decided to conduct a Parents Sangamam-the Awareness Programme on RTE on 14-11-2014 at All LP,UP,HS  Schools in kerala. We have scheduled the programme on the same day at 2 pm at school hall. As a responsible parent attend the programme without fail and make it grand success.


                                                                                                                        HEADMASTER

Wednesday, 12 November 2014




          ಮುಖವಾಡಗಳನ್ನು ಧರಿಸಿ ಅಭಿನಯಿಸುವುದು ಯಾರಿಗೆ ಇಷ್ಟವಿಲ್ಲ ಹೇಳಿ... ನನ್ನ ತರಗತಿಯ ಮಕ್ಕಳ ಅಭಿನಯ ನೈಪುಣ್ಯ , ಮಿಮಿಕ್ರಿಯ ಮೂಲಕ ಇತರರನ್ನು ರಂಜಿಸುವ ಸಾಮರ್ಥ್ಯವನ್ನು ಗುರುತಿಸುವ ಒಂದು ಸಣ್ಣ ಪ್ರಯತ್ನ ಮಾಡಿದೆಯಷ್ಟೇ... ಎಲ್ಲ ಮಕ್ಕಳೂ ಅದೆಷ್ಟು ಸೊಗಸಾಗಿ ಅಭಿನಯಿಸಿದರು ಗೊತ್ತೇ... ಇದನ್ನ ವೀಕ್ಷಿಸಿದ ಒಂದು ಮಗುವಂತೂ ಹೆದರಿ ಓಡಿ ಹೋಗಿ ಸಮೀಪದ ತರಗತಿಯಲ್ಲಿನ ಟೀಚರ ಸೆರಗ ಹಿಂದೆ ಅವಿತು ಕುಳಿತು ಜೋರಾಗಿ ಅತ್ತೇ ಬಿಟ್ಟ. ಬಳಿಕ ಈ ಮಕ್ಕಳೇ ಅವನನ್ನ ಸಂತೈಸಿದುದು ಅವರ ನಿಷ್ಕಲ್ಮಶ ಮನಸ್ಸನ್ನ ಎತ್ತಿ ತೋರಿಸುವಂತಿತ್ತು.  ಈ ಪುಟಾಣಿಗಳ ನಿಜವಾದ ಆಸಕ್ತಿಯನ್ನ ಗುರುತಿಸಿ ಅದನ್ನ ಅವರಿಗೆ ನೀಡುವಲ್ಲಿ ಹಲವಾರು ಬಾರಿ ನಾವು ಎಡವಿದ್ದೇವೆಯೋ ಎಂದೆನಿಸುತ್ತಿದೆ. ಇಷ್ಟವಿಲ್ಲದಿದ್ದರೂ ಒಂದಷ್ಟು ಹೋಂ ವರ್ಕುಗಳು, ಹೆಗಲಿಗೆ ಭಾರವಾಗುವ ಪುಸ್ತಕಗಳ ಗಂಟು, ಕಬ್ಬಿಣದ ಕಡಲೆಕಾಯಿಯಂತಿರುವ ಗಣಿತ ಪಾಠಗಳು ಎಲ್ಲ ಮಕ್ಕಳ ಸಹಜ ಅಭಿರುಚಿಗಳನ್ನ ಮರೆ ಮಾಚಿ ಬಿಟ್ಟಿವೆ. ಬೆತ್ತ ಹಿಡಿದು ಸದಾ ಹೊಡೆಯುವ ಹಳೆಯ ಶಿಕ್ಷಣ ವಿಧಾನಕ್ಕೆ ವಿಭಿನ್ನವಾಗಿ ಆಟದೊಂದಿಗೆ ಪಾಠ ಮಾಡಿದ ನೆಚ್ಚಿನ ಗುರುಗಳ ಬಗ್ಗೆ ಹೃದಯದಾಳದ ಪ್ರೀತಿ ಮಕ್ಕಳಿಗೆ ಬೆಳೆಯುತ್ತದೆ. ಅಸಕ್ತಿ ಕೆರಳಿಸುವ ಆಟಗಳನ್ನು ಆಡುವುದರಿಂದ ವಿದ್ಯಾರ್ಥಿಗಳಲ್ಲಿ ಗ್ರಹಿಕೆ ಹಾಗೂ ಮನನ ಶಕ್ತಿ ಹೆಚ್ಚುವುದನ್ನು ಶಿಕ್ಷಕರಾದ ನಾವು ತರಗತಿಯಲ್ಲಿ ಗುರುತಿಸುತ್ತಿದ್ದೇವೆ ತಾನೇ...  ಕಲಿಕೆಯ ಒತ್ತಡದಿಂದಾಗಿ ಮಕ್ಕಳ ಮನದಲ್ಲಿ ಉಂಟಾಗುವ ಆತಂಕಕಾರಿ ಭಾವನೆ ದೂರ ಮಾಡಿ ಮಕ್ಕಳೊಂದಿಗೆ ಮುಕ್ತ ವಾಗಿ ಬೆರೆತು ಇಂತಹ ಆಟಗಳ ಮೂಲಕ ಪಾಠಗಳ ಕಡೆಗೆ ವ್ಯಾಮೋಹ ಹೆಚ್ಚುವಂತೆ ಮಾಡುವಲ್ಲಿ ನಾವು ಶಿಕ್ಷಕರು ಇನ್ನೂ ಒಂದು ಹೆಜ್ಜೆ ಮುಂದೆ ಇಡೋಣ...
                                                                                                 # ಪ್ರವೀಣ್ ಕುಮಾರ್

12th November 1896: Salim Ali, Indian Ornithologist and Naturalist was born
Ornithologist and naturalist Salim Moizuddin Abdul Ali, known as the “birdman of India’, was born on November 12, 1896, to a Sulaimani Bohra Muslim family in Bombay. Ali’s parents died before he turned four. He and his brothers and sisters were then brought up by an uncle and aunt.
            Remembering Ali after his death, environmental activist and writer Bittu Sahgal wrote: His life was spent exploring the wonder and utter usefulness of nature without once becoming emotionally attached to the ‘sanctity of life’ concept that so many people still confuse with conservation.” In a tribute to Salim Ali, ecologist Madhav Gadgil wrote in November 1996 in Current Science: Ali will be remembered as the man who taught Indians to appreciate, to study at first hand, to treasure, to work towards conserving the rich living heritage of the country.”


Thanks to Google
Thanks to Martrubhumi

Saturday, 8 November 2014

ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡಾಕೂಟದ ಓಟ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ತ್ರಿತೀಯ ಬಹುಮಾನ ಗಳಿಸಿದ ನಮ್ಮ ಶಾಲಾ II ನೇ ತರಗತಿ ವಿದ್ಯಾರ್ಥಿನಿ ಮನಿಷಾ ಶೆಟ್ಟಿ.


Thursday, 6 November 2014

THE BEST BLOG AWARD 2014

Its a great honour for us to receive a BEST BLOG AWARD in LP section from Hon Kasaragod MLA Sri N.A Nellikunnu in BLEND Declaration and IT Seminar Ceremony held at Muncipal Town hall Kasaragod.



ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಯಲ್.ಪಿ ಶಾಲಾ ವಿಭಾಗದ ಅತ್ತ್ಯುತ್ತಮ ಬ್ಲಾಗ್ ಪ್ರಶಸ್ತಿಯನ್ನು ಶಾಸಕರಾದ ಶ್ರೀ ಎನ್. ಎ ನೆಲ್ಲಿಕುನ್ನು ಇವರಿಂದ ಜಿ.ಬಿ.ಯಲ್.ಪಿ ಶಾಲೆ ಹೇರೂರಿನ ಅಧ್ಯಾಪಕ ಪ್ರವೀಣ್ ಕುಮಾರ್ ಅಭಿಮಾನ ಪೂರ್ವಕವಾಗಿ ಸ್ವೀಕರಿಸಿದರು.


6 NOVEMBER 2014
KASARAGOD DISTRICT LEVEL BEST BLOG AWARD -2014 CEREMONY AND IT-SEMINARS Held at Muncipal Conference Hall KASARAGOD

Inauguration & Blend Declaration  By Hon MP Sri. P. Karunakaran ,Kasaragod



Winner of Best Blog award in LP sec. Head Master, Praveen Kumar With Momento and Shobha T, PTA President of GBLPS Heroor

 P.V KRISHNA KUMAR,  Principal DIET Kasaragod  









Congratulations Baby MANISHA


Manjeshwara Sub District School Sports Winner: Baby Manisha Class IInd of our school scoring FIRST place in 100 mtr dash and THIRD place in 50 mtr dash.. 
 Baby Manisha of II Std receiving  Medal and Certificate From Sri Nandikeshan sir AEO Mjr for winning 1st place in 100 mtr race


 Manisha receiving 3rd prize from Sri Shivashankara Bhat Miyapadavu

Wednesday, 5 November 2014

5 November 2014
MANJESHWARA SUB DIST SCHOOL SPORTS 2014 at SVVHS & VAUPS Miyapadavu- INAUGURAL CEREMONY PHOTOS..

Inaugural speech by Smt: Mumtaz Sameera (Prsdnt Mjr Block Panchayat)
Student Police



ಕ್ರೀಡಾ ಜ್ಯೋತಿ 






MANJESHWARA SUB DIST SPORTS RESULTS

Click here for  EVENT RESULTS
Click here for  Overeal Championship RESULTS

Invitation of Kasaragod Dist Level BLEND Declaration and IT Seminar: