Saturday, 1 November 2014

1 ನವೆಂಬರ್ 2014

ಕೇರಳ 59 ನೇ ರಾಜ್ಯೋತ್ಸವದ ಹೊಸ್ತಿಲಲ್ಲಿ...


          ಭಾಷಾ ಸಾಂಸೃತಿಕ ಪ್ರದೇಶವೆಂದು ಕರೆಯಲ್ಪಡುವ ದಕ್ಷಿಣ ಭಾರತದ ಒಂದು ಪುಟ್ಟ ರಾಜ್ಯ ಕೇರಳ. ಮಲಯಾಳಂ ಇಲ್ಲಿನ ಪ್ರಧಾನ ಆಡುಭಾಷೆ. ವಿಸ್ತೀರ್ಣದಲ್ಲಿ ೨೧ನೇ ಸ್ಥಾನವನ್ನು ಪಡೆದಿರುವ ಕೇರಳವು ಜನಸಂಖ್ಯೆಯಲ್ಲಿ ೧೨ನೇ ಸ್ಥಾನವನ್ನು ಪಡೆದಿದೆ. ಮಲಯಾಳಂ ಭಾಷೆ ಮಾತನಾಡುವ ಜನರು ವಾಸಿಸುವ ತಿರುವಿದಾಕೂಂರು, ಕೊಚ್ಚಿ, ಮಲಬಾರ್, ದಕ್ಷಿಣ ಕನ್ನಡ ಜಿಲ್ಲೆಯಾದ ಕಾಸರಗೋಡು ತಾಲೂಕು ಎಂಬೀ ಪ್ರದೇಶಗಳನ್ನು ಸೇರಿಸಿ 1956 ರಲ್ಲಿ ಭಾಷಾವಾರು ಪ್ರಾಂತ್ಯವಾಗಿ ಕೇರಳ ರಾಜ್ಯ ರಚನೆಯಾಯಿತು.

          ಇಂದಿನ ಕೇರಳ ಸಂಸ್ಥಾನವು ರೂಪುಗೊಂಡದ್ದು 1956 ರಲ್ಲಿ. ಇದಕ್ಕೂ ಮುಂಚೆ ಕೇರಳವು ನೆಲೆನಿಂತದ್ದು ಮಲಬಾರ್, ಕೊಚ್ಚಿ, ತಿರುವಿದಾಂಕೂರ್ ಎಂಬ ಈ ಮೂರು ಪ್ರತ್ಯೇಕವಾದ ರಾಜಕೀಯ ಘಟಕಗಳಾಗಿ. ಮಲಯಾಳ ಭಾಷೆಯ ಆಧಾರದಲ್ಲಿ ಮಲಬಾರಿನಲ್ಲೂ ಕೊಚ್ಚಿಯಲ್ಲೂ, ತಿರುವಿದಾಂಕೂರಿನಲ್ಲೂ ಜನಗಳ ಮಧ್ಯೆ ರಾಜಕೀಯ ಘಟಕಗಳಿಗೆ ವ್ಯತಿರಿಕ್ತವಾದ ಹೇಗೆಂದು ನಿರೂಪಿಸಲಸಾಧ್ಯವಾದ ಒಂದು ಐಕ್ಯವಿತ್ತು. ಕೇರಳದಲ್ಲಿ ವಸಹಾತುಶಾಹಿಯ ಕಾಲದಲ್ಲಿ ಈ ಐಕ್ಯ ಭಾವನೆಯು ಇನ್ನೂ ಹೆಚ್ಚಾಗಿ ಬೆಳೆದು ನಿಂತಿತು. ಈ ಆಧಾರದಿಂದ ಆಧುನಿಕ ಕೇರಳದ ಚರಿತ್ರೆಯು, ಮತ್ತು ಚರಿತ್ರ ರಚನಾ ಶಾಸ್ತ್ರವೂ ವಾಸ್ತವವಾಗಿ ಆರಂಭವಾದದ್ದು  ಕೇರಳ ಸಂಸ್ಥಾನ ರೂಪುಗೊಂಡಾಗಿನಿಂದ ಎಂದು ಹೇಳಬಹುದು. ಎಂದರೆ ಮಲಯಾಳ ಮಾತನಾಡುವ ಜನರ ಚರಿತ್ರೆಯು ಅದಕ್ಕಿಂತ ನೂರಾರು ಶತಮಾದಷ್ಟು ಮುಂಚೆಯೇ ಆರಂಭಗೊಂಡಿತ್ತು. ಆದ್ದರಿಂದ ಕೇರಳ ಚರಿತ್ರೆಯ ಮತ್ತು ಚರಿತ್ರರಚನಾ ಶಾಸ್ತ್ರದ ಬೇರುಗಳು ಭೂತಕಾಲಕ್ಕೆ ಹರಡಿಕೊಂಡಿವೆ.


ಸಮಸ್ತ ಓದುಗರಿಗೂ ಕೇರಳ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...



No comments: