Tuesday, 28 July 2015

SUB DT LEVEL SCIENCE SEMINAR FOR HIGH SCHOOL STUDENTS

TOPIC 
 
Harnessing light -  Possibilities and Challenges
 Venue : BRC Manjeshwara at Mulinja Date :  11-08-2015     10am
·                     School level - before 5th August
·                     School level winner is eligible to participate in Sub dt level
·                     Presentation time : 6 miniuts     Interview : 2mts
·                     Max 6 charts 
·                     Power point presentation is also admissible ( inform in advance )
·                     For details contact Sunitha teacher (Sc Club Sec) mob : 9448566277

Monday, 27 July 2015

ನಮ್ಮನ್ನಗಲಿದ ಅದಮ್ಯ ಚೇತನ ಎ ಪಿ ಜೆ ಅಬ್ದುಲ್ ಕಲಾಂ ನಿಮಗೊಂದು 
ನಮ್ಮ ಮನದಾಳದ ಪ್ರೀತಿಯ ಸಲಾಂ.
(1931-2015)

ಏನು ಹೇಳಲಿ ಈ ಮಹಾತ್ಮನಿಗೆ
ತೆರೆದಿಟ್ಟ ಶುಭ್ರ ಜೀವನವೇ
ನಮ್ಮ ಮುಂದಿದೆ ಸಂದೇಶವಾಗಿ

ವಿಜ್ಞಾನದ ರೆಕ್ಕೆ ಏರಿ ಹಾರಿಸಿದರು
ಪ್ರೋಖ್ರಾನ ಪತಾಕೆ ಮುಗಿಲೆತ್ತರಕೆ

ರಾಷ್ಟ್ರಪತಿಯಾಗಿ ಮೆರೆದರು ಸರಳತೆಯ ಸಾಕಾರವಾಗಿ

ಮಕ್ಕಳಿಗೆ ಒಲುಮೆಯ ಬೋಧಕನಾಗಿ
ಯುವ ವಿಜ್ಞಾನಿಗಳಿಗೆ ಬೆನ್ನುತಟ್ಟುವ
ಗೆಳೆಯನಾಗಿ
ದೇಶಕೊರೆವ ಹುಳುಗಳಿಗೆ
ನೆಗ್ಗಲಮುಳ್ಳಾಗಿ
ದೇಶಭಕ್ತರಿಗೆ ದಾರಿ ದೀಪವಾಗಿ
ಸಜ್ಜನರಿಗೆ ಸಾಕಾರ ಪ್ರಜ್ಞೆಯಾಗಿ
ಇರುವನೀ ಮಹಾತ್ಮ ಚಿರಕಾಲ ನಮ್ಮ ಮನದಲ್ಲಿ

ಒಮ್ಮೆ ನೋಡಿ ಮಾತನಾಡಿದ ಸವಿ ನೆನಪಿಗಿಂದು ವಿಷಾದದ ಛಾಯೆ

ಹೇಳಬೇಕಿದೆ ಇನ್ನಷ್ಟು ಮತ್ತಷ್ಟು
ಗಂಟಲುಬ್ಬಿ ಬರುತಿದೆ ಇಂದು
ಸಾಟಿಯಿಲ್ಲದ ಮಹಾತ್ಮನಿಗೆ
ಇದೋ ನನ್ನ ಸಲಾಮ್

======================================================
 

        ಮಾನವೀಯತೆಯ ಪ್ರತಿರೂಪದಂತಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ, ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ   (84) ಅವರು july 27 ರಾತ್ರಿ ಶಿಲ್ಲಾಂಗ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಇಲ್ಲಿನ ಇಂಡಿಯನ್‌ ಇನ್ಟ್ಸಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ (ಐಐಎಂ) ಸೋಮವಾರ ಸಂಜೆ 6:30ರ ಸುಮಾರಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಉಪನ್ಯಾಸ ನೀಡುತ್ತಿದ್ದಾಗಲೇ ದಿಢೀರನೆ ಕುಸಿದುಬಿದ್ದು, ಅಸ್ವಸ್ಥಗೊಂಡರು. ಕೂಡಲೇ ಅವರನ್ನು ನಾನ್‌ಗ್ರಿಮ್ ಹಿಲ್ಸ್‌ನಲ್ಲಿರುವ ಬೆಥನಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು. ತೀವ್ರ ಹೃದಯಾಘಾತ ಅವರ ಸಾವಿಗೆ ಕಾರಣ ಎಂದೂ ತಿಳಿಸಲಾಯಿತು. ಕಲಾಂ ಮೇಷ್ಟ್ರು ಎಂದೇ ಹೆಸರಾಗಿದ್ದ ಅವರು, ಪಾಠ ಮಾಡುತ್ತಲೇ ವಿಧಿವಶರಾದರುಕಲಾಂ ಅವರು 2002ರ ಜುಲೈ 25ರಿಂದ 2007ರ ಜುಲೈ 25ರ ತನಕ ಭಾರತದ (ಹನ್ನೊಂದನೆಯ) ರಾಷ್ಟ್ರಪತಿಗಳಾಗಿದ್ದರು. 1997ರಲ್ಲಿ ಭಾರತ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ  ನೀಡಿ ಗೌರವಿಸಿತ್ತು. ರಾಷ್ಟ್ರಪತಿ ಆಗುವುದಕ್ಕೂ ಮುನ್ನ ಕಲಾಂ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಎ) ಮತ್ತು ಇಸ್ರೊದಲ್ಲಿ ವೈಮಾನಿಕ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಿದ್ದರು. ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್‌ ತಂತ್ರಜ್ಞಾನವನ್ನು ಪರಿಚಯಿಸಿದ ಅವರನ್ನು ಕ್ಷಿಪಣಿಗಳ ಜನಕ, (ಮಿಸೈಲ್‌ ಮ್ಯಾನ್‌ ಆಫ್‌ ಇಂಡಿಯಾ) ಎಂದೇ ಕರೆಯಲಾಗುತ್ತದೆ.

Courtesy: Google

Thursday, 23 July 2015

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ 
ಮಂಜೇಶ್ವರ ಉಪಜಿಲ್ಲಾ ಮಹಾಸಭೆಗೆ ಎಲ್ಲಾ ಕನ್ನಡ ಅಧ್ಯಾಪಕರಿಗೂ ಪ್ರೀತಿಪೂರ್ವಕವಾದ ಸ್ವಾಗತ.
ದಿನಾಂಕ: 1.08.2015 ಶನಿವಾರ, ಬೆಳಿಗ್ಗೆ : 10.00
ಸ್ಥಳ : ಜಿ.ಹೆಚ್.ಎಸ್. ಉದ್ಯಾವರ.

ತಪ್ಪದೇ ಬನ್ನಿ...


ಈ ಕ್ರಾಂತಿ ವೀರರನ್ನು ಮರೆಯಲು ಸಾಧ್ಯವೇ?


ಜನನ: ಜುಲೈ 23


            ಇಂದು ಇಬ್ಬರು ಕಾಂತ್ರಿಪುರುಷರ ಜನ್ಮದಿನ. ಒಬ್ಬರು ಲೋಕಮಾನ್ಯ ಬಾಲಗಂಗಾಧರನಾಥ್ ತಿಲಕ್. ಮತ್ತೊಬ್ಬರು ಪುರುಷಸಿಂಹ ಪಂಡಿತ್ ಚಂದ್ರಶೇಖರ್ ಅಜಾದ್. ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದು ಸಾರಿ ಭಿಕ್ಷಾಟನೆಯ ವೇದಿಕೆಯಂತಿದ್ದ ಕಾಂಗ್ರೆಸ್ ಎಂಬ ಬ್ರಿಟಿಷರೆ ಸ್ಥಾಪಿಸಿದ್ದ ಸಂಸ್ಥೆಯನ್ನು ಸ್ವಾತಂತ್ರ್ಯ ಆಂದೋಲನದ ಸಂಸ್ಥೆಯಾಗಿ ಪರಿವರ್ತಿಸಿ ಬ್ರಿಟಿಷರ ತಂತ್ರಕ್ಕೆ ಪ್ರತಿತಂತ್ರ ಹೆಣೆದು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿ ಆಂಗ್ಲರನ್ನು ಕಾಡಿದವರು ಲೋಕಮಾನ್ಯ ಬಾಲಗಂಗಾಧರನಾಥ ತಿಲಕ್.
            ಬಾಲ್ಯದಲ್ಲೇ ಬ್ರಿಟಿಷರಿಗೆ ಸೆಡ್ಡುಹೊಡೆದು ಮೇ ಅಜಾದ್ ಹೂಂ ಅಜಾದೀ ರಹೇಂಗಾ ಎಂದು ಗರ್ಜಿಸಿ ಪೋಲಿಸರಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಾ ಆಂಗ್ಲರ ಎದೆಯಲ್ಲಿ ನಡುಕಹುಟ್ಟಿಸಿ, ಸ್ನೇಹಿತನ ಕುತಂತ್ರಕ್ಕೆ ಬಲಿಯಾಗಿ ತನ್ನ ಪಿಸ್ತೂಲಿನಿಂದಲೇ ಗುಂಡುಹಾರಿಸಿಕೊಂಡು ವೀರ ಮರಣಹೊಂದಿದವರು ಅಜೇಯ ಕ್ರಾಂತಿಕಾರಿ ಚಂದ್ರಶೇಖರ್ ಅಜಾದ್.
            ಅಜಾದ್ ಮತ್ತು ತಿಲಕ್ ಇಬ್ಬರೂ ಶ್ರೇಷ್ಠ ಕಾಂತ್ರಿಕಾರಿಗಳು ತಮ್ಮ ನಾಯಕತ್ವದಿಂದ ಅಸಂಖ್ಯ ಕ್ರಾಂತಿಕಾರಿಗಳನ್ನು ಹುಟ್ಟುಹಾಕಿದವರು. ಭಾರತೀಯರನ್ನು ಹದ್ದುಬಸ್ತಿನಲ್ಲಿಡಬೇಕೆಂದು ಯತ್ನಿಸಿ ಬ್ರಿಟಿಷ್ ಸರ್ಕಾರ ಕಾಂಗ್ರೆಸ್ ಎಂಬ ಸಂಸ್ಥೆ ಸ್ಥಾಪಿಸಿ ಭಾರತೀಯರು ತಮ್ಮ ಬೇಡಿಕೆಗಳನ್ನು ಕಾಂಗ್ರೆಸ್ ಸಂಸ್ಥೆಯ ಮೂಲಕ ಸಲ್ಲಿಸಬೇಕೆಂದು ಆದೇಶಿಸಿದರು. ಈ ಸಂಸ್ಥೆ ಮೊದಮೊದಲು ಭಿಕ್ಷಾಟನೆಯ ವೇದಿಕೆಯಂತಿತ್ತು.ಆದರೆ ಈ ವೇದಿಕೆಯನ್ನು ಸ್ವಾತಂತ್ರ್ಯ ಆಂದೋಲನದ ವೇದಿಕೆಯಾಗಿ ಪರಿವರ್ತಿಸಿದವರು ಲೋಕಮಾನ್ಯ ತಿಲಕ್.
"ಸ್ವರಾಜ್ಯವೇ ನನ್ನ ಜನ್ಮಸಿದ್ದ ಹಕ್ಕು" ಎಂದು ಘೋಷಿಸಿ ಸಾರ್ವಜನಿಕ ಗಣೇಶೋತ್ಸವ, ಶಿವಾಜಿ ಜಯಂತಿಯನ್ನು ಆಚರಿಸಿ ಭಾರತೀಯರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿ ಬ್ರಿಟಿಷರ ವಿರುದ್ದ ಜನಾಂದೋಲನ ಸೃಷ್ಟಿಸಿದ ಕೀರ್ತಿ ಲೋಕಮಾನ್ಯ ತಿಲಕರಿಗೆ ಸಲ್ಲುತ್ತದೆ.
            ತಮ್ಮ ಪ್ರಬಲ ನಾಯಕತ್ವದಿಂದ ತಿಲಕರು ಹಲವಾರು ಮಹಾನ್ ಪುರುಷರ ಏಳಿಗೆಗೆ ಕಾರಣೀಭೂತರಾಗಿದ್ದಾರೆ. ಸ್ವಾತಂತ್ರ್ಯ ವೀರ ಸಾವರ್ಕರ್ ಇಂಗ್ಲೆಂಡ್ಗೆ ಹೋಗಲು ಶಿಫಾರಸ್ಸು ಪತ್ರವನ್ನು ಬರೆದು ಕೊಟ್ಟು ಅವರಲ್ಲಿ ಸ್ಪೂರ್ತಿ ತುಂಬಿ ಸಾವರ್ಕರ್ ಅಪ್ರತಿಮ ಕ್ರಾಂತಿಕಾರಿಯಾಗಲು ಮುನ್ನುಡಿ ಬರೆದವರು ತಿಲಕರು. 
ಚಾಪೇಕರ್ ಸಹೋದರರು, ಲಾಲಲಜಪತರಾಯ್, ಗೋಪಾಲಕೃಷ್ಣ ಗೋಖಲೆ ಮುಂತಾದವರು ತಿಲಕರಿಂದ ಪ್ರೇರಿತರಾಗಿದ್ದರು. ಬಾಲ್ಯದಲ್ಲಿ ಪೋಲಿಸರಿಂದ ಛಡಿ ಏಟು ತಿಂದು ತಾನೆಂದು ಪೋಲಿಸರಿಗೆ ಶರಣಾಗುವುದಿಲ್ಲ. ಮೇ ಅಜಾದ್ ಹೂಂ ಅಜಾದೀ ರಹೇಂಗಾ ಎಂದು ಶಪಥ ಮಾಡಿ ಯುವಜನರಲ್ಲಿ ಸ್ವಾತಂತ್ರ್ಯದ ಜ್ವಾಲೆಯನ್ಮು ಹಬ್ಬಿಸಿದವರು ಅಜಾದ್.
            ತನ್ನ ಗುರು ರಾಮಪ್ರಸಾದ್ ಬಿಸ್ಮಿಲ್ ರ ಜೊತೆಗೂಡಿ ಕಾಕೋರಿ ದರೋಡೆಯನ್ನು ಯಶ್ವಸಿಯಾಗಿ ಮುಗಿಸಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ಹಣ ದೊರಕಿಸಿಕೊಟ್ಟರು. ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅರ್ಮಿಯ ಮುಂದಾಳತ್ವ ವಹಿಸಿ ದೇಶದಲ್ಲಿ ಕ್ರಾಂತಿಯ ಕಹಳೆ ಊದಿದ ಅಜಾದ್, ಭಗತ್ ಸಿಂಗ್, ರಾಜಗುರು, ಸುಖದೇವ್, ಬುಟುಕೇಶ್ವರ ದತ್ತ, ಅಶ್ಪಾಕ್ ಉಲ್ಲಾ ಖಾನ್ ಮುಂತಾದ ಶ್ರೇಷ್ಠ ಕ್ರಾಂತಿಕಾರಿಗಳ ಬೆಳವಣಿಗೆಯ ರೂವಾರಿ ಅಜಾದ್ ಎಂದರೆ ತಪ್ಪಿಲ್ಲ. ಕಾಕೋರಿ ದರೋಡೆ, ಸ್ಯಾಂಡರ್ಸ್ ಹತ್ಯೆ, ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟ ಮುಂತಾದ ಕ್ರಾಂತಿ ಚಟುವಟಿಕೆಗಳಿಗೆ ಯೋಜನೆಯನ್ನು ರೂಪಿಸಿದ್ದು ಅಜಾದ್ ರ ಬುದ್ದಿವಂತಿಕೆ, ಧೈರ್ಯ, ಚಾಕಚಕ್ಯತೆಗಳಿಗೆ ಸಾಕ್ಷಿ.
            ಅಜೇಯ ಕ್ರಾಂತಿಕಾರಿ ಅಜಾದ್ ಮತ್ತು ಲೋಕಮಾನ್ಯ ತಿಲಕ್ ಇಬ್ಬರು ಒಂದೇ ದಿನ ಜನಿಸಿದ್ದು ಕಾಕತಾಳೀಯವೋ ಅಥವಾ ಭಾರತೀಯರ ಭಾಗ್ಯವೋ ಗೊತ್ತಿಲ್ಲ. ಈ ಇಬ್ಬರ ಹೋರಾಟ ಮತ್ತು ತ್ಯಾಗ ಬಲಿದಾನಗಳು ನಮಗೆ ಆದರ್ಶ.

ಈ ವೀರಪುತ್ರರನ್ನು ಇಂದು ನೆನೆಯೋಣ.

ವಂದೇಮಾತರಂ

ಕೃಪೆ: ಗೂಗಲ್ 

Tuesday, 21 July 2015

21 July 1969: Man takes first steps on the Moon





          American Neil Armstrong has become the first man to walk on the Moon.
The astronaut stepped onto the Moon's surface, in the Sea of Tranquility, at 0256 GMT, nearly 20 minutes after first opening the hatch on the Eagle landing craft.
Armstrong had earlier reported the lunar module's safe landing at 2017 GMT with the words: "Houston, Tranquility Base here. The Eagle has landed." As he put his left foot down first Armstrong declared: "That's one small step for man, one giant leap for mankind." He described the surface as being like powdered charcoal and the landing craft left a crater about a foot deep.

'We came in peace'

The historic moments were captured on television cameras installed on the Eagle and turned on by Armstrong. Armstrong spent his first few minutes on the Moon taking photographs and soil samples in case the mission had to be aborted suddenly. He was joined by colleague Edwin "Buzz" Aldrin at 0315 GMT and the two collected data and performed various exercises - including jumping across the landscape - before planting the Stars and Stripes flag at 0341 GMT. They also unveiled a plaque bearing President Nixon's signature and an inscription reading: "Here men from the planet Earth first set foot upon the Moon July 1969 AD. We came in peace for all mankind." After filming their experience with a portable television camera the astronauts received a message from the US President. President Nixon, in the White House, spoke of the pride of the American people and said: "This certainly has to be the most historic telephone call ever made." Many other nations - including the UK - sent messages of congratulation. Moscow Radio announced the news solemnly in its 1030 GMT broadcast. As Aldrin and Armstrong collected samples, Michael Collins told mission control in Houston he had successfully orbited the Moon in the mother ship Columbia, and take-off was on schedule for 1750 GMT this evening.

Source: Google

Friday, 17 July 2015

ಸಮಸ್ತ ಮುಸಲ್ಮಾನ್ ಭಾಂದವರಿಗೂ ಈದ್ ಹಬ್ಬದ ಶುಭಾಶಯಗಳು...
"Eid- Mubarak" to all... 


Health is wealth

The Story of Cholera: Kannada
A short animated film produced by the Global Health Media Project

The Story of Ebola: English
A short animated film produced by the Global Health Media Project

Thursday, 16 July 2015

ಜುಲೈ 17 ರಂದು ಸರಕಾರಿ ರಜೆ

          ಈದ್-ಉಲ್-ಫಿತರ್ ಹಬ್ಬದ ಅಂಗವಾಗಿ 2015 ಜುಲೈ 17 ರಂದು ರಾಜ್ಯದ ಪ್ರೊಫೆಶನಲ್ ಕಾಲೇಜು ಸೇರಿದಂತೆ ಎಲ್ಲಾ ವಿದ್ಯಾಭ್ಯಾಸ ಸ್ಥಾಪನೆಗಳಿಗೂ ರಜೆ ಘೋಷಿಸಿ ಸರಕಾರ ಆಜ್ಞೆ ಹೊರಡಿಸಿದೆ. 

Wednesday, 15 July 2015

Tuesday, 14 July 2015

പ്രീമെട്രിക്ക് 2014-15 ലെ അക്കൗണ്ട് വിവരങ്ങള്‍

2014-15 വര്‍ഷത്തെ പ്രീ മെട്രിക്ക് സ്കോളര്‍ഷിപ്പിന് അര്‍ഹരായ വിദ്യാര്‍ഥികളില്‍ ചിലരുടെ ആനുകൂല്യങ്ങള്‍ ബാങ്ക് വിശദാംശങ്ങള്‍ തെറ്റായതിനാല്‍ നല്‍കാന്‍ കഴിഞ്ഞിട്ടില്ലെന്നും ആയത് എഡിറ്റ് ചെയ്ത് ജൂലൈ 17നകം പ്രീ മെട്രിക്ക് സ്കോളര്‍ഷിപ്പ് സൈറ്റില്‍ അപ്‌ഡേറ്റ് ചെയ്യണമെന്നും നിര്‍ദ്ദേശിച്ചിരുന്നു. എന്നാല്‍ ഇതിലെ പല വിദ്യാര്‍ഥികളുടെയും ബാങ്ക് വിശദാംശങ്ങള്‍ ഒറിജിനല്‍ രേഖകളുമായി ഒത്തു നോക്കിയതില്‍ തെറ്റുകള്‍ കാണുന്നില്ല. ഇതുമായി ബന്ധപ്പെട്ട് ഫോറത്തിന് വേണ്ടി DPI ഓഫീസിലെ ബന്ധപ്പെട്ട സെക്ഷനുമായി ബന്ധപ്പെട്ടപ്പോള്‍ അക്കൗണ്ടുമായി ബന്ധപ്പെട്ട കാരണങ്ങളാല്‍ തന്നെയാണെന്നും ജോയിന്റ് അക്കൗണ്ടിലെ ആദ്യ പേര് കുട്ടിയുടേതല്ലാത്തതോ IFSC കോഡില്‍ 0-ന് പകരം ഇംഗ്ലീഷ് അക്ഷരമാലയിലെ O വന്നതോ അക്കൗണ്ട് നമ്പരിലെ ആദ്യത്തെ അക്കങ്ങളായ പൂജ്യം(ഉണ്ടെങ്കില്‍ അവ) ഉള്‍പ്പെടാത്തതോ ആവാം കാരണമെന്ന മറുപടി ആണ് ലഭിച്ചത്. ഇതുമായി ബന്ധപ്പെട്ട സംശയങ്ങള്‍ക്ക് ബന്ധപ്പെടേണ്ട നമ്പര്‍ 0471 - 2328438. അക്കൗണ്ട് വിവരങ്ങള്‍ തിരുത്തുന്നതിന് ഇവിടെ നിന്നും ലഭിക്കുന്ന ലിങ്കിലൂടെ ലോഗിന്‍ ചെയ്യുമ്പോള്‍ ലഭിക്കുന്ന സ്കൂളിന്റെ പേജിലെ Reports എന്ന പേജിലെ താഴെക്കാണുന്ന ലിങ്കുകളില്‍ ക്ലിക്ക് ചെയ്യുക 

Monday, 13 July 2015

KRISHNA KUMAR PALLIATH a Man With
Magical Voice

An Article published by Matrubhumi Malayalam Daily- 13-07-2015


Saturday, 11 July 2015



ಜುಲೈ 11, ವಿಶ್ವ ಜನಸಂಖ್ಯಾ ದಿನ

ಭಾರತೀಯರ ಸಂಖ್ಯೆ 1,274,234,538: ವಿಶ್ವದ ಮನುಷ್ಯರ ಶೇ.17.23, ವಿಶ್ವದ ಜನಸಂಖ್ಯೆ 700 ಕೋಟಿಗೆ ಮುಟ್ಟಲು 60 ಲಕ್ಷ ಬಾಕಿ.
ನವದೆಹಲಿ: ಇಂದು ವಿಶ್ವ ಜನಸಂಖ್ಯಾ ದಿನ. ಸ್ವತಂತ್ರ ಸಾಮಾಜಿಕ-ಆರ್ಥಿಕ ಅಂಕಿ ಅಂಶಗಳ ಸಂಸ್ಥೆಯೊಂದರ ಪ್ರಕಾರ ಶನಿವಾರ ಮಧ್ಯಾಹ್ನ ೨:೩೦ರ ಸಮಯಕ್ಕೆ ಭಾರತೀಯರ ಸಂಖ್ಯೆ 1,274,234,538. ಇದು ವಿಶ್ವದಲ್ಲಿರುವ ಮನುಷ್ಯರ ಸಂಖ್ಯೆಯಲ್ಲಿ ಶೇಕಡಾ 17.23
ಜಾಗತಿಕವಾಗಿ ಜನಸಂಖ್ಯೆ ಬೆಳೆಯುತ್ತಿರುವುದರ ಬಗ್ಗೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಜನಸಂಖ್ಯೆಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಅರಿವು ಮೂಡಿಸುತ್ತದೆ ವಿಶ್ವ ಜನಸಂಖ್ಯಾ ದಿನ.
೨೦೨೮ರ ವೇಳೆಗೆ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿ ಭಾರತ ಚೈನಾವನ್ನು ಹಿಂದಕ್ಕಲಿದೆ ಎನ್ನುತ್ತವೆ ಅಂಕಿಅಂಶ. ಆದರೆ ೧೯೯೧-೨೦೦೦ ಗೆ ಇದ್ದ ೨.೫೪% ಜನಸಂಖ್ಯಾ ಹೆಚ್ಚಳದಿಂದ ೨೦೦೧-೧೧ ರ ಸಮಯದಲ್ಲಿ ಈ ಹೆಚ್ಚಳ ೧೭.೬೪% ಇಳಿದಿದೆ ಎಂದು ಕೂಡ ತಿಳಿದುಬಂದಿದೆ. 1952 ರಲ್ಲಿ ಪ್ರಾರಂಭವಾದ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳು ಇಂದು ಫಲ ನೀಡಿವೆ ಎನ್ನಲಾಗಿದೆ.

Friday, 10 July 2015

ತರಗತಿ ಪ್ರಯೋಗಾಲಯದಲ್ಲಿ ಮೊಳಕೆಯೊಡೆದ ಅಲಸಂಡೆ ಬೀಜಗಳ ವೀಕ್ಷಿಸಿ ಸಂಭ್ರಮ ಪಡುತ್ತಿರುವ ಮಕ್ಕಳು. 

Monday, 6 July 2015

ಉಚಿತ ಆಯುರ್ವೇದಿಕ್ ಮತ್ತು ಹೋಮಿಯೋಪತಿ ವೈದ್ಯಕೀಯ ಶಿಬಿರ
ದಿನಾಂಕ 06-07-2015 ರಂದು ಶಾಲಾ ಸಭಾಂಗಣದಲ್ಲಿ ತಜ್ಞ ವೈದ್ಯರಿಂದ ಸಾರ್ವಜನಿಕರಿಗಾಗಿ ಅರೋಗ್ಯ ತಪಾಸಣೆ ಮತ್ತು ಪ್ರತಿರೋಧ ಔಷಧ ವಿತರಣಾ ಕಾರ್ಯಕ್ರಮವು ಜರಗಿತು. ಮಂಗಲ್ಪಾಡಿ ಪಂಚಾಯತ್ ಸದಸ್ಯರಾದ ಶ್ರೀ ಪುಷ್ಪರಾಜ್ ಐಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. 









 ಕಂಪ್ಯೂಟರ್ ಬಗ್ಗೆ ಇಲ್ಲಿದೆ ಕೆಲವು ಸೂಕ್ಷ್ಮ ವಿಚಾರಗಳು...!

 Win Computers  | Computer Related Slides 














Thanks to Sri: Shivaram H , Win Computers Bangalore