Monday, 27 July 2015

ನಮ್ಮನ್ನಗಲಿದ ಅದಮ್ಯ ಚೇತನ ಎ ಪಿ ಜೆ ಅಬ್ದುಲ್ ಕಲಾಂ ನಿಮಗೊಂದು 
ನಮ್ಮ ಮನದಾಳದ ಪ್ರೀತಿಯ ಸಲಾಂ.
(1931-2015)

ಏನು ಹೇಳಲಿ ಈ ಮಹಾತ್ಮನಿಗೆ
ತೆರೆದಿಟ್ಟ ಶುಭ್ರ ಜೀವನವೇ
ನಮ್ಮ ಮುಂದಿದೆ ಸಂದೇಶವಾಗಿ

ವಿಜ್ಞಾನದ ರೆಕ್ಕೆ ಏರಿ ಹಾರಿಸಿದರು
ಪ್ರೋಖ್ರಾನ ಪತಾಕೆ ಮುಗಿಲೆತ್ತರಕೆ

ರಾಷ್ಟ್ರಪತಿಯಾಗಿ ಮೆರೆದರು ಸರಳತೆಯ ಸಾಕಾರವಾಗಿ

ಮಕ್ಕಳಿಗೆ ಒಲುಮೆಯ ಬೋಧಕನಾಗಿ
ಯುವ ವಿಜ್ಞಾನಿಗಳಿಗೆ ಬೆನ್ನುತಟ್ಟುವ
ಗೆಳೆಯನಾಗಿ
ದೇಶಕೊರೆವ ಹುಳುಗಳಿಗೆ
ನೆಗ್ಗಲಮುಳ್ಳಾಗಿ
ದೇಶಭಕ್ತರಿಗೆ ದಾರಿ ದೀಪವಾಗಿ
ಸಜ್ಜನರಿಗೆ ಸಾಕಾರ ಪ್ರಜ್ಞೆಯಾಗಿ
ಇರುವನೀ ಮಹಾತ್ಮ ಚಿರಕಾಲ ನಮ್ಮ ಮನದಲ್ಲಿ

ಒಮ್ಮೆ ನೋಡಿ ಮಾತನಾಡಿದ ಸವಿ ನೆನಪಿಗಿಂದು ವಿಷಾದದ ಛಾಯೆ

ಹೇಳಬೇಕಿದೆ ಇನ್ನಷ್ಟು ಮತ್ತಷ್ಟು
ಗಂಟಲುಬ್ಬಿ ಬರುತಿದೆ ಇಂದು
ಸಾಟಿಯಿಲ್ಲದ ಮಹಾತ್ಮನಿಗೆ
ಇದೋ ನನ್ನ ಸಲಾಮ್

======================================================
 

        ಮಾನವೀಯತೆಯ ಪ್ರತಿರೂಪದಂತಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ, ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ   (84) ಅವರು july 27 ರಾತ್ರಿ ಶಿಲ್ಲಾಂಗ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಇಲ್ಲಿನ ಇಂಡಿಯನ್‌ ಇನ್ಟ್ಸಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ (ಐಐಎಂ) ಸೋಮವಾರ ಸಂಜೆ 6:30ರ ಸುಮಾರಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಉಪನ್ಯಾಸ ನೀಡುತ್ತಿದ್ದಾಗಲೇ ದಿಢೀರನೆ ಕುಸಿದುಬಿದ್ದು, ಅಸ್ವಸ್ಥಗೊಂಡರು. ಕೂಡಲೇ ಅವರನ್ನು ನಾನ್‌ಗ್ರಿಮ್ ಹಿಲ್ಸ್‌ನಲ್ಲಿರುವ ಬೆಥನಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾದರು. ತೀವ್ರ ಹೃದಯಾಘಾತ ಅವರ ಸಾವಿಗೆ ಕಾರಣ ಎಂದೂ ತಿಳಿಸಲಾಯಿತು. ಕಲಾಂ ಮೇಷ್ಟ್ರು ಎಂದೇ ಹೆಸರಾಗಿದ್ದ ಅವರು, ಪಾಠ ಮಾಡುತ್ತಲೇ ವಿಧಿವಶರಾದರುಕಲಾಂ ಅವರು 2002ರ ಜುಲೈ 25ರಿಂದ 2007ರ ಜುಲೈ 25ರ ತನಕ ಭಾರತದ (ಹನ್ನೊಂದನೆಯ) ರಾಷ್ಟ್ರಪತಿಗಳಾಗಿದ್ದರು. 1997ರಲ್ಲಿ ಭಾರತ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ  ನೀಡಿ ಗೌರವಿಸಿತ್ತು. ರಾಷ್ಟ್ರಪತಿ ಆಗುವುದಕ್ಕೂ ಮುನ್ನ ಕಲಾಂ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಎ) ಮತ್ತು ಇಸ್ರೊದಲ್ಲಿ ವೈಮಾನಿಕ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸಿದ್ದರು. ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್‌ ತಂತ್ರಜ್ಞಾನವನ್ನು ಪರಿಚಯಿಸಿದ ಅವರನ್ನು ಕ್ಷಿಪಣಿಗಳ ಜನಕ, (ಮಿಸೈಲ್‌ ಮ್ಯಾನ್‌ ಆಫ್‌ ಇಂಡಿಯಾ) ಎಂದೇ ಕರೆಯಲಾಗುತ್ತದೆ.

Courtesy: Google

No comments: