Saturday, 11 July 2015



ಜುಲೈ 11, ವಿಶ್ವ ಜನಸಂಖ್ಯಾ ದಿನ

ಭಾರತೀಯರ ಸಂಖ್ಯೆ 1,274,234,538: ವಿಶ್ವದ ಮನುಷ್ಯರ ಶೇ.17.23, ವಿಶ್ವದ ಜನಸಂಖ್ಯೆ 700 ಕೋಟಿಗೆ ಮುಟ್ಟಲು 60 ಲಕ್ಷ ಬಾಕಿ.
ನವದೆಹಲಿ: ಇಂದು ವಿಶ್ವ ಜನಸಂಖ್ಯಾ ದಿನ. ಸ್ವತಂತ್ರ ಸಾಮಾಜಿಕ-ಆರ್ಥಿಕ ಅಂಕಿ ಅಂಶಗಳ ಸಂಸ್ಥೆಯೊಂದರ ಪ್ರಕಾರ ಶನಿವಾರ ಮಧ್ಯಾಹ್ನ ೨:೩೦ರ ಸಮಯಕ್ಕೆ ಭಾರತೀಯರ ಸಂಖ್ಯೆ 1,274,234,538. ಇದು ವಿಶ್ವದಲ್ಲಿರುವ ಮನುಷ್ಯರ ಸಂಖ್ಯೆಯಲ್ಲಿ ಶೇಕಡಾ 17.23
ಜಾಗತಿಕವಾಗಿ ಜನಸಂಖ್ಯೆ ಬೆಳೆಯುತ್ತಿರುವುದರ ಬಗ್ಗೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಜನಸಂಖ್ಯೆಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಅರಿವು ಮೂಡಿಸುತ್ತದೆ ವಿಶ್ವ ಜನಸಂಖ್ಯಾ ದಿನ.
೨೦೨೮ರ ವೇಳೆಗೆ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿ ಭಾರತ ಚೈನಾವನ್ನು ಹಿಂದಕ್ಕಲಿದೆ ಎನ್ನುತ್ತವೆ ಅಂಕಿಅಂಶ. ಆದರೆ ೧೯೯೧-೨೦೦೦ ಗೆ ಇದ್ದ ೨.೫೪% ಜನಸಂಖ್ಯಾ ಹೆಚ್ಚಳದಿಂದ ೨೦೦೧-೧೧ ರ ಸಮಯದಲ್ಲಿ ಈ ಹೆಚ್ಚಳ ೧೭.೬೪% ಇಳಿದಿದೆ ಎಂದು ಕೂಡ ತಿಳಿದುಬಂದಿದೆ. 1952 ರಲ್ಲಿ ಪ್ರಾರಂಭವಾದ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳು ಇಂದು ಫಲ ನೀಡಿವೆ ಎನ್ನಲಾಗಿದೆ.

No comments: