Thursday, 15 October 2015


ಸೈಬರ್ ಸುರಕ್ಷಾ ಪ್ರತಿಜ್ಞೆ
            ನಾನು ಭಾರತೀಯ ಸೈಬರ್ ಸುರಕ್ಷಾ ನಿಯಮಗಳಿಗೆ ವಿಧೇಯನಾಗಿ ಮಾತ್ರವೇ ಇಂಟರ್ನೆಟ್ ಅನುಬಂಧಿತ ವಸ್ತುಗಳನ್ನು ಉಪಯೋಗಿಸುತ್ತೇನೆ. ಸಾಮಾಜಿಕ ಒಳಿತಿಗಾಗಿ ಅನುಯೋಜ್ಯ ರೀತಿಯಲ್ಲಿ ಜ್ಞಾನವನ್ನು ವಿನಿಮಯ ಮಾಡಲೂ ಹೆಚ್ಚಿಸಿಕೊಳ್ಳಲೂ ಇಂಟರ್ನೆಟ್ ತಂತ್ರಜ್ಞಾನ ವಿದ್ಯೆಯನ್ನು ಪ್ರಯೋಜನ ಪಡಿಸಿಕೊಳ್ಳುತ್ತೇನೆ. ಮಾತಾಪಿತರ ಅರಿವಿನೊಂದಿಗೆ ಅನುಮತಿ ಪಡೆದು ಮಾತ್ರವೇ ಇಂಟರ್ನೆಟ್ ಉಪಯೋಗಿಸುತ್ತೇನೆ. ದೇಶದ ಹಿತಾಸಕ್ತಿಗೆದುರಾಗಿ ಜಾತಿ,ಮತ,ವರ್ಗ ಭೇದ ಬೆಳೆಸುವ ಸಂದೇಶಗಳನ್ನು ರವಾನಿಸುವುದಿಲ್ಲ . ಅನುಮತಿಯಿಲ್ಲದ ವಿವರಗಳನ್ನು ಡೌನ್ ಲೋಡ್ ಮಾಡುವುದೋ ತಪ್ಪಾದ,ಇತರರಿಗೆ ಅಪಕೀರ್ತಿ ಉಂಟುಮಾಡುವ, ನೋವು ತರಿಸುವ ಸಂದೇಶಗಳನ್ನು ಇಂಟರ್ನೆಟ್ ಮೂಲಕ ರವಾನಿಸುವುದಿಲ್ಲ. ಇಂಟರ್ನೆಟ್ ಉಪಯೋಗಿಸುವಾಗ ಅನುಸರಿಸಬೇಕಾದ ನಿಯಮಗಳನ್ನೂ ಗೌರವವನ್ನೂ ಪರಿಪಾಲಿಸುವ ಉತ್ತಮ ಪೌರನಾಗಿ ನಾನು ವರ್ತಿಸುತ್ತೇನೆಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ


Cyber Suraksha Pledge to be taken on 15-10-2015 and  Circular


No comments: