Tuesday, 5 August 2014
Friday, 1 August 2014
ನಾಗರ ಪಂಚಮಿ ಶುಭಾಶಯಗಳು....
ಶ್ರಾವಣ
ಮಾಸ ಪ್ರಾರಂಭವಾದರೆ ಸಾಕು ಹಬ್ಬಗಳು ಶುರುವಾಗುತ್ತದೆ.
ಈ ಶ್ರಾವಣ ಮಾಸದ
ಮೊದಲಿನಲ್ಲಿ ಬರುವ ದೊಡ್ಡ ಹಬ್ಬ
ನಾಗರ ಪಂಚಮಿ. ಈ ಹಬ್ಬವನ್ನು
ಗರುಡ ಪಂಚಮಿ ಅಂತ ಕೂಡ
ಕರೆಯುತ್ತಾರೆ. ಅಣ್ಣ-ತಂಗಿಯ ಪ್ರೀತಿಯನ್ನು
ಸಾರಿ ಹೇಳುವ ದಿನ. ರಕ್ಷಾಬಂಧನ
ಉದ್ದೇಶ ಕೂಡ ಇದೇ. ಆದರೆ
ಅದು ಉತ್ತರ ಬಾರತದ ಉಡುಗೊರೆ.
ಪಂಚಮಿ ಮಾತ್ರ ಅಚ್ಚ ಕನ್ನಡ
ಕನ್ನಡತಿಯರ ಹಬ್ಬ. ನಾಗರ ಪಂಚಮಿಯ
ಹೆಸರೇ ಹೇಳುವಂತೆ ನಾಗನನ್ನು ಪೂಜಿಸುವ ದಿನ. ಪಂಚಮಿಯ
ದಿನ ಅಂದರೆ ಶ್ರಾವಣ ಮಾಸದ
ಐದನೇ ದಿನ ನಾಗರಕಲ್ಲಿಗೆ, ಹಾವಿನ
ಹುತ್ತಕ್ಕೆ ಅಕ್ಕಿ ಹಿಟ್ಟಿನಿಂದ ಮಾಡಿದ
ನಾಗರ ಹಾವಿನ ಚಿತ್ರಕ್ಕೆ ಶ್ರದ್ಧಾಭಕ್ತಿಗಳಿಂದ
ಹಾಲೆರೆಯಲಾಗುವುದು. ಈ ಸಮಯದಲ್ಲಿ ಶುದ್ಧ
ಸಸ್ಯಾಹಾರ ಅದರಲ್ಲೂ ಸಾತ್ವಿಕ ಆಹಾರಗಳನ್ನು
ಮಾಡಿ ತಯಾರಿಸಲಾಗುವುದು. ಈ ಸಮಯದಲ್ಲಿ ಉದ್ದಿನ
ಕಡುಬು, ಸಿಹಿ ಕಡುಬು, ತಂಬಿಟ್ಟು
ಮುಂತಾದ ಸಾತ್ವಿಕ ಆಹಾರಗಳನ್ನು ತಯಾರಿಸಲಾಗುವುದು.
ಸಾತ್ವಿಕ ಅಹಾರವನ್ನು ತಿಂದರೆ ದೇಹದ ಆರೋಗ್ಯ
ಹೆಚ್ಚಾಗುವುದು. ನಾಗರ ಪಂಚಚಮಿಯನ್ನು ಸೋದರರ
ಹಬ್ಬ ಎಂದೂ ಕರೆಯಲಾಗುವುದು. ಈ
ಸಮಯದಲ್ಲಿ ಸೋದರಿಯು ಸೋದರನಿಗೆ ಹುತ್ತಕ್ಕೆ
ಎರೆದ ಹಾಲನ್ನು ತಂದು ಸೋದರನ
ಬೆನ್ನಿಗೆ ವೀಳ್ಯದೆಲೆಯಿಂದ 3 ಸಲ ಹಾಲು ಮತ್ತು
3 ಸಲ ನೀರು ಎರಚಿ ತವರು
ತಂಪಾಗಿರಲಿ ಎಂದು ಹಾರೈಸಿದರೆ, ಸಹೋದರರು
ಪ್ರೀತಿಯ ಅಕ್ಕ ತಂಗಿಯರಿಗೆ ಉಡುಗೊರೆ
ಕೊಟ್ಟು ಸಂಭ್ರಮಿಸುತ್ತಾರೆ. ಅಣ್ಣ-ತಂಗಿಯರ ಬಾಂಧವ್ಯ
ಮತ್ತಷ್ಟು ಗಟ್ಟಿಯಾಗಲಿ ಎಂಬುದು ಈ ಹಬ್ಬದ
ಆಶಯವಾಗಿದೆ. ದಕ್ಷಿಣ ಕನ್ನಡದಲ್ಲಿ ಈ
ಹಬ್ಬವನ್ನು ನಾಗರ ಪಂಚಮಿ ಎಂದು
ಕರೆದರೆ ಉತ್ತರ ಕರ್ನಾಟಕದ ಕಡೆಗೆ
ಜೋಕಾಲಿ ಹಬ್ಬವೆಂದೇ ಜನಜನಿತವಾಗಿದೆ. ಈ ಸಂಭ್ರಮದಲ್ಲಿ ಮನೆಯಲ್ಲಿ
ಜೋಕಾಲಿ ಕಟ್ಟಿ ಆಡುವುದು ಈ
ಕಡೆಯ ವಿಶೇಷ ವಿಶಿಷ್ಟ. ಇಂದು
ಪ್ರತಿ ಮನೆಯಲ್ಲಿ ಜೋಕಾಲಿಯನ್ನು ಕಾಣಬಹುದು. ಈ ಹಬ್ಬಕ್ಕೆ ವಿಶೇಷವಾಗಿ
ವಿವಿಧ ರೀತಿಯ ಉಂಡೆಗಳನ್ನು ಮಾಡಲಾಗುವುದು.
ಮಕ್ಕಳಿಗೆ ಹೊಸ ಬಟ್ಟೆ ತೊಡಿಸಲಾಗುವುದು.
ಶೇಂಗಾ ಉಂಡೆ, ಎಳ್ಳುಂಡೆ, ಕಡಲೆ
ಉಂಡೆ, ತಂಬಿಟ್ಟು, ಬೇಳೆ ಕಡುಬು, ಬೂಂದಿ
ಉಂಡೆ ಹೀಗೆ ಬಗೆಬಗೆಯ ರುಚಿಕರ
ತಿಂಡಿ ತಿನಿಸುಗಳು ತಯಾರಿಸಿ ಸವಿದು ಸಂಭ್ರಮಿಸಲಾಗುವುದು.
ಸಮಸ್ತ ಓದುಗರಿಗೆ
ನಾಗರ ಪಂಚಮಿ ಹಬ್ಬದ ಹಾರ್ದಿಕ
ಶುಭಾಶಯಗಳು...
ಕೃಪೆ: ಬಲ್ಲ ಮೂಲಗಳಿಂದ
ಫೋಟೋ: ಪ್ರವೀಣ್ ಫೋಟೋಗ್ರಫಿ Monday, 28 July 2014
ಮೂವತ್ತು ದಿನಗಳ ಉಪವಾಸದ ಬಳಿಕ ರಂಜಾನ್ ತಿಂಗಳಿಗೆ ‘ಅಲ್ವಿದಾ' ಅಥವಾ ಹೇಳಿ ಶವ್ವಾಲ್ ತಿಂಗಳ ಮೊದಲ ಚಂದ್ರದರ್ಶನ, ರಂಜಾನ್ ಹಬ್ಬದ ಸಂಭ್ರಮವನ್ನು ತರುತ್ತದೆ. ಈ ದಿನ ಉಪವಾಸಮಾಡುವುದು ನಿಷಿದ್ಧ. ಈ ಹಬ್ಬವು ತಿಂದುಂಡು ಖುಶಿಪಡಲು ದೇವರು ಅನುಗ್ರಹಿಸಿದ ದಿನವೆಂದು ಪರಿಗಣಿಸಲಾಗುತ್ತದೆ. ಉಳ್ಳವರು ಖುಶಿಪಟ್ಟು ಆಚರಿಸುವುದರಿಂದ ಮಾತ್ರ ಹಬ್ಬ ಪರಿಪೂರ್ಣವಾಗುವುದಿಲ್ಲ, ಬಡವರಿಗೂ ಕೂಡ ಈ ಅವಕಾಶವನ್ನು ಕಲ್ಪಿಸಿಕೊಡುವುದು ಉಳ್ಳವರ ಕರ್ತವ್ಯ. ಆದುದರಿಂದ ನಿಯಮ ಪ್ರಕಾರ ತಾವು ತಿನ್ನುವ ಉತ್ತಮದರ್ಜೆಯ ಧಾನ್ಯ ಮತ್ತು ಅನುಕೂಲವಿರುವವನು, ಹಣವಿರುವವನು ನಿಗದಿಪಡಿಸಲಾದ ಮೊತ್ತವನ್ನು ಬಡವರಿಗೆ ಹಬ್ಬದ ಬೆಳಗ್ಗಿನ ವಿಶೇಷವಾದ ಈದ್ ಪ್ರಾರ್ಥನೆಯ ಮೊದಲು ‘ಸದಕಾ' 'ಝಕಾತ್' ಅಥವಾ ದಾನ ಮಾಡಲೇಬೇಕು. ಹಬ್ಬದ ದಿನ ಬೆಳಗ್ಗೆ ತನ್ನ ಬಳಿ ಇದ್ದುದರಲ್ಲಿ ಶುಭ್ರವಾದ ಉತ್ತಮ ಬಟ್ಟೆಯನ್ನು ಅಥವಾ ಹೊಸ ಬಟ್ಟೆಯನ್ನು ತೊಟ್ಟು ಈದ್ ವಿಶೇಷ ನಮಾಜಿಗಾಗಿ ಎಲ್ಲರೂ ಮಸೀದಿಗೆ ಹೋಗಬೇಕಾದದ್ದು ಕೂಡ ಮುಖ್ಯ ಆಚರಣೆಗಳಲ್ಲಿ ಒಂದು. ಇಲ್ಲಿ ಈದ್ ನಮಾಜು ಮುಗಿದ ಕೂಡಲೇ ಇಮಾಮ್ ಅಥವಾ ಖತೀಬ್ ಕುತ್ಬಾ ಪ್ರವಚನ ಮಾಡುವುದನ್ನು ಕೂತು ಕೇಳುವುದು ಕೂಡ ಒಂದು ಮುಖ್ಯ ಭಾಗ. ಮನೆಯಲ್ಲಿ ಕ್ಷೀರ್ (ಸಿಹಿ ಸೇವಿಗೆ) ಅನ್ನ ಬಿರಿಯಾನಿ ಅಡಿಗೆ ತಯಾರಿಸಿ ಬಂಧುಮಿತ್ರರಿಗೆ ಆಮಂತ್ರಣ ನೀಡುತ್ತಾರೆ. ಹಬ್ಬದ ದಿನ ಎಲ್ಲರೂ ಮುಂಜಾನೆ ಸ್ನಾನಮಾಡಿ ಹೊಸ ಬಟ್ಟೆ ಇಲ್ಲವೆ ಶುಭ್ರಬಟ್ಟೆ ಧರಿಸಿ ಕಣ್ಣಿಗೆ ಸುರಮಾ ಲೇಪಿಸಿಕೊಂಡು ಸುಗಂಧ ದ್ರವ್ಯಗಳನ್ನು ಪೂಸಿಕೊಂಡು ಸಡಗರಸಂಭ್ರಮ ಸಂತೋಷದಿಂದ ಜಮಾಅತ್ನೊಂದಿಗೆ ಕೂಡಿಕೊಂಡು ತಕಬೀರ ಹೇಳುತ್ತಾ ‘ಈದಗಾ’ಮೈದಾನದಲ್ಲಿ ನೆರೆಯುತ್ತಾರೆ. ಅಲ್ಲಿ ಸುಮಾರು ಹತ್ತು ಗಂಟೆಯ ಹೊತ್ತಿಗೆ ಮುಸ್ಲಿಂ ಮುಖಂಡರು, ಧಾರ್ಮಿಕ ಶ್ರದ್ಧೆಯುಳ್ಳವರು ರಮ್ಜಾನ್ ತಿಂಗಳ ಮಹತ್ವ ಹಾಗೂ ನಮಾಜು ವೃತಾಚರಣೆ ಆವಶ್ಯಕತೆ; ಫಿತರಾ-ಸದಖಾ-ಜಕಾತ್ಗಳ ವೈಶಿಷ್ಟ್ಯ ಕುರಿತು ಬಯಾನ್ ಮಾಡುತ್ತಾರೆ. ‘ಈದುಲ್ ಫಿತರ್’ ನಮಾಜು ಸಲ್ಲಿಸುವ ರೀತಿ ಕ್ರಮದ ಬಗೆಗೆ ವಿವರಣೆ ನೀಡಲಾಗುತ್ತದೆ. ಅನಂತರ ಮುಸ್ಲಿಂ ಸಹೋದರರು ಭುಜಕ್ಕೆ ಭುಜ ಹಚ್ಚಿ ಭಕ್ತಿಗೌರವದಿಂದ ಸಾಲಾಗಿ ನಿಂತು ನಮಾಜ್ ಸಲ್ಲಿಸಲು ಸಿದ್ಧರಾಗುತ್ತಾರೆ.ಇದಾದ ನಂತರ ಪರಸ್ಪರ ಆಲಂಗಿಸಿಕೊಂಡು ‘ಈದ್ ಮುಬಾರಕ್' ಶುಭಾಶಯಗಳನ್ನು ಕೋರಲಾಗುತ್ತದೆ. ತಮ್ಮ ಹಿತೈಷಿಗಳು, ಸ್ನೇಹಿತರು, ಬಂಧು ಬಳಗದವರ ಮನೆಗಳಿಗೆ ಪರಸ್ಪರ ಭೇಟಿಮಾಡುವುದು, ಸಿಹಿತಿಂಡಿ, ಒಣ ಖರ್ಜೂರ, ಒಣ ದ್ರಾಕ್ಷಿ, ಗೋಡಂಬಿ ಮುಂತಾದುವನ್ನು ಪರಸ್ಪರ ಹಂಚಿಕೊಳ್ಳುವ ಕ್ರಮವೂ ಇದೆ ಜೊತೆಗೆ ಮಕ್ಕಳಿಗೆ ಹಿರಿಯರು ‘ಈದಿ' ಅಥವಾ ಹಣದ ಕೊಡುಗೆಯನ್ನು ನೀಡುವ ಕ್ರಮವಿದೆ. ರಮ್ಜಾನ್ ತಿಂಗಳಿನಲ್ಲಿ ನಮಾಜ, ರೋಜ, ಕುರಾನ್ ಪಠಣ, ದರೂದೆ ಷರೀಫ್ ಓದುವುದರಿಂದ ‘ಹೂರ್ ಪರಿ’ಎಂಬ ಸ್ವರ್ಗದ ಪಕ್ಷಿ ಅವರನ್ನು ಸ್ವರ್ಗಕ್ಕೆ ತಲುಪಿಸಲು ದಾರಿ ಕಾಯುತ್ತಿರುತ್ತದೆಯಂತೆ. ರಮ್ಜಾನ್ ತಿಂಗಳಿನಲ್ಲಿ ತನ್ನನ್ನು ಪ್ರಾರ್ಥಿಸುವವರಿಗೆ ಅಲ್ಲಾಹನು ಸುಪ್ರೀತಿಯಿಂದ ಸಾಕಷ್ಟು ಸುಖಶಾಂತಿ ಸಮೃದ್ಧಿ ನೀಡುತ್ತಾನೆಂದು ಮುಸ್ಲಿಂ ಬಾಂಧವರ ಅಭಿಪ್ರಾಯ. ಅಲ್ಲದೆ ಈ ತಿಂಗಳಲ್ಲಿ ಮಾಡಿದ ಒಂದು ಪುಣ್ಯದ ಕೆಲಸಕ್ಕೆ ಪ್ರತಿಯಾಗಿ ಎಪ್ಪತ್ತರಷ್ಟು ಪುಣ್ಯ ಸ್ವರ್ಗದಲ್ಲಿ ದೊರೆಯುತ್ತದೆಯೆಂಬ ನಂಬಿಗೆಯಿದೆ. ಹಾಗೂ ತಪ್ಪುಗಳಿಂದ ದೂರ ಇರುವ, ನರಕದ ದಳ್ಳುರಿಯಿಂದ ರಕ್ಷಿಸುವ, ಏಕೈಕ ಉಪಾಯ ವೃತಾಚರಣೆ ಆಗಿದೆಯೆಂದು ನಿಷ್ಠಾವಂತ ಮುಸ್ಲೀಮರ ತಿಳುವಳಿಕೆ.
ಎಲ್ಲ
ಮುಸ್ಲಿಂ ಬಾಂಧವರಿಗೂ ಹೇರೂರು ಶಾಲಾ ಸಿಬ್ಬಂದಿ ವರ್ಗದಿಂದ ಸ್ನೇಹಾದರಗಳು ತುಂಬಿದ "ಈದ್ ಮುಬಾರಕ್'. ದೇವನೊಬ್ಬ ನಾಮ ಹಲವು ಎಂಬ ಸತ್ಯವನ್ನು ನಾವು ತಿಳಿದು ಬಾಳೋಣ. ಈದ್ ಹಬ್ಬ , ಗೌರಿ ಗಣೇಶ ಹಬ್ಬ ಗಳು ಸೌಹಾರ್ದಮಯವಾಗಿ ಆಚರಿಸಲ್ಪಡಲಿ... ಶುಭಾಶಯಗಳು...
ಕೃಪೆ: ಬಲ್ಲ ಮೂಲಗಳಿಂದ
ಫೋಟೋ: ಪ್ರವೀಣ್ ಫೋಟೋಗ್ರಫಿ
ಕೃಪೆ: ಬಲ್ಲ ಮೂಲಗಳಿಂದ
ಫೋಟೋ: ಪ್ರವೀಣ್ ಫೋಟೋಗ್ರಫಿ
Friday, 25 July 2014
ചാന്ദ്രമനുഷ്യനുമായി കുട്ടികള് സംവദിച്ചു
ജി ബി എ എൽ പി സ്കൂൾ
ഹേരൂരിൽ ചാന്ദ്രദിനത്തിൽ ചാന്ദ്രമനുഷ്യനുമായി കുട്ടികള് സംവദിച്ചു. ചാന്ദ്രയാൻ വീഡിയോ
ദൃശ്യം പ്രദര്ശിപ്പിക്കുകയും അതുമായ് ബന്ധപ്പെട്ട സംശയങ്ങൾക്ക് ചാന്ദ്രമനുഷ്യനായ് വേഷം
കെട്ടിയ അധ്യാപകരായ കൃഷ്ണ കുമാർ പള്ളിയത്തും ഭാഷാ പരിഭാഷകനായി എത്തിയ പ്രവീണ് കുമാറും
കുട്ടികളെ ഏറെ ചിന്തിപ്പിക്കുകയും രസിപ്പിക്കുകയും ചെയ്തു . അന്വേഷണാത്മക ചിന്ത വളർത്താനും
അറിവിൻ വാതായനങ്ങൾ കുട്ടികൾക്കുമുന്നിൽ തുറന്നിടാനും
ചാന്ദ്രദിനം ഉപകരിച്ചു.
Sunday, 20 July 2014
World Population Day - 11 July
Whether we can live together equitably on a healthy planet
will depend on the choices and decisions we make now. In a world of 7 billion
people, and counting, we need to count each other...
Photo courtesy: google
Subscribe to:
Posts (Atom)


aaablob.jpg)






