Monday, 18 August 2014

ಶಾಂತಿ ಮತ್ತು ಐಕ್ಯ ಮಂತ್ರ ಸಾರುತ್ತಾ 68ನೇ ಸ್ವಾತಂತ್ರ್ಯೋತ್ಸವ...

      68ನೇ ಸ್ವಾತಂತ್ರ್ಯೋತ್ಸವವನ್ನು ನಮ್ಮ ವಿದ್ಯಾಲಯದಲ್ಲಿ ಸಡಗರದಿಂದ ಆಚರಿಸಲಾಯಿತು. PTA ಅಧ್ಯಕ್ಷೆ ಶೋಭಾ.T ಧ್ವಜಾರೋಹಣಗೈದರು. ಬಳಿಕ ನಡೆದ ಸಭಾ ಸಮಾರಂಭದಲ್ಲಿ  ಶಾಲಾ ಮುಖ್ಯ ಶಿಕ್ಷಕ  ಅಬ್ಬಾಸ್.ಕೆ ನೆರೆದ  ಸಭಾ ಜನರನ್ನು ಸ್ವಾಗತಿಸಿದರು. ಪಂಚಾಯತ್ ಸದಸ್ಯ ಪುಷ್ಪರಾಜ್ .ಐಲ್ ಉದ್ಘಾಟಿಸುತ್ತಾ ಅಖಂಡವಾದ  ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಜಾತಿ ವೈಷಮ್ಯ ಮರೆತು ಒಂದೇ ತಾಯಿಯ ಮಕ್ಕಳಂತೆ ಸ್ನೇಹದಿಂದ ಬಾಳ ಬೇಕಿದೆ ಎಂದು ಕರೆ ಕೊಟ್ಟರು . ಹಿರಿಯ ಶಿಕ್ಷಕ ಕೃಷ್ಣ ಕುಮಾರ್ ಪಳ್ಳಿಯತ್ ಕವಿತೆಗಳ ಮೂಲಕ ದೇಶಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದ ಮಹಾತ್ಮರ ಕಲ್ಪನೆಗಳು ನಮ್ಮಲ್ಲಿ ಮೂಡಬೇಕು, ಅವರ ದಿಗ್ ದರ್ಶನಗಳು ನಮಗೆ ಮಾರ್ಗದರ್ಶನವಾಗಬೇಕು ಎನ್ನುತ್ತಾ ಶುಭ ಹಾರೈಸಿದರು. ಸಮೀಪದ ಕ್ಲಬ್ ಸದಸ್ಯರುಗಳು ಸಿಹಿ ವಿತರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. SMC, MPTA ಸದಸ್ಯರು , ಹಳೆ ವಿಧ್ಯಾರ್ಥಿಗಳು ಊರ ಮಹನೀಯರು ಉಪಸ್ಥಿತರಿದ್ದರು. ಶಿಕ್ಷಕ ಪ್ರವೀಣ್ ಕುಮಾರ್, ಜಾಫರ್ ಹಾಗೂ ವಿವಿಧ ಕ್ಲಬ್ ಸದಸ್ಯರುಗಳು ಮಾತನಾಡಿದರು. ವಿವಿಧ ಸ್ಪರ್ಧಾ ವಿಜೇತರುಗಳಿಗೆ ಬಹುಮಾನಗಳನ್ನು ಹಂಚಲಾಯಿತು. 



ಧ್ವಜಾರೋಹಣ: PTA ಅಧ್ಯಕ್ಷೆ ಶೋಭಾ .T





ಪಂಚಾಯತ್ ಸದಸ್ಯ ಪುಷ್ಪರಾಜ್ .ಐಲ್
Club member
Club member
Vote of Thanks: Jafar Manimala






K.K Palliath




Painting work going on....


When finished...






3 comments:

aeomjr said...

NICE BLOG. KEEP UPDATING .ADD ARTICLES OF STUDENTS.
ALL THE BEST
-AEO MJR

GBLPS HEROOR said...

Thank you sir...

ജാഫര്‍ മണിമല said...

Heroorinte hridaya thalam....