'ಸಾಕ್ಷರ'ದೊಂದಿಗೆ
ಪುಟ್ಟ ಹೆಜ್ಜೆಗಳನ್ನಿಡುತ್ತಾ ನಮ್ಮ ಮಕ್ಕಳು...
ಡಯಟ್ ನೇತೃತ್ವದ ಸಾಕ್ಷರ 2014 ಕಾರ್ಯಕ್ರಮದಡಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಕನ್ನಡ ಮತ್ತು ಮಲಯಾಳಂ ವಿದ್ಯಾರ್ಥಿಗಳಿಗೆ ಮೊದಲ ಹಂತದ ಮೌಲ್ಯ ಮಾಪನ ದಿನಾಂಕ 21-8-2014 ರಂದು ನಡೆಯಿತು. ಮಕ್ಕಳ ಮಟ್ಟ ಸುಧಾರಣೆಯಾಗಿರುವುದು ಖುಷಿ ಕೊಟ್ಟ ವಿಷಯ. ಹೆತ್ತವರು ಸಹ ತಮ್ಮ ಮಕ್ಕಳ ಕಲಿಕೆಯ ಮೇಲೆ ಹೆಚ್ಚಿನ ಕಾಳಜಿಯನ್ನು ತೋರುತ್ತಿದ್ದಾರೆ. ಅಡಿಪಾಯ ಗಟ್ಟಿಯಾಗಿದ್ದರೆ ಮೇಲೆ ಎಷ್ಟೇ ಅಂತಸ್ತಿನ ಕಟ್ಟಡವನ್ನೂ ಕಟ್ಟಬಹುದು, ಹಾಗೆಯೇ ಅಕ್ಷರಾಭ್ಯಾಸ ಅರಿತಿದ್ದ ಮಗು ಸ್ವಯಂ ಕಲಿಕೆಯ ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯ. ನಾವಿಲ್ಲಿ ಮಕ್ಕಳ ಜೊತೆಗೆ ಇದ್ದುಕೊಂಡು ಅವರಲ್ಲಿ ಆತ್ಮವಿಶ್ವಾಸ ತುಂಬಿಕೊಂಡು ಅವರನ್ನು ಮೇಲೆ ತರುವ ಕೆಲಸ ಮಾಡಬೇಕಾಗಿದೆ. ಅವರೊಂದಿಗೆ ಆತ್ಮೀಯವಾಗಿ ನಡೆದುಕೊಂಡು ಸಣ್ಣ ಸಣ್ಣ ಕಾರ್ಯಗಳಿಗೆ ಅವರ ಬೆನ್ನುತಟ್ಟಬೇಕಾಗಿದೆ, ಮಕ್ಕಳಲ್ಲಿರುವ ವೈಯಕ್ತಿಕ ಭಿನ್ನತೆಗಳನ್ನು ನಾವೆಲ್ಲ ಒಪ್ಪಿಕೊಂಡು ಗೌರವಿಸಬೇಕು. ಹೆಚ್ಚಾಗಿ ನಾವು ನಮಗರಿವಿಲ್ಲದೆ ಸುಲಭವಾಗಿ ಮಕ್ಕಳನ್ನು ದಡ್ಡ, ಮೂರ್ಖ, ಸೋಮಾರಿ, ಕೊಳಕಿ ಮುಂತಾಗಿ ವರ್ಗೀಕರಿಸಿ ಹಣೆಪಟ್ಟಿ ಹಚ್ಚಿಬಿಡುತ್ತೇವೆ. ಇದು ಮಕ್ಕಳ ಮನಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳ ಆತ್ಮಗೌರವಕ್ಕೆ ಧಕ್ಕೆಯಾಗುವುದರ ಜೊತೆ ಅವರ ಆತ್ಮವಿಶ್ವಾಸ ಪಾತಾಳ ಸೇರುತ್ತದೆ. ಇದು ನಂತರದ ದಿನಗಳಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಂತೆ ಮಾಡುತ್ತದೆ. ಖಿನ್ನತೆಗೂ ಜಾರಿ ಹೋಗುತ್ತಾರೆ. ಮಕ್ಕಳ ಯೋಚನಾಶಕ್ತಿ ಯನ್ನು ಹೆಚ್ಚಿಸಲು ಕಲಿತದ್ದರ ಬಗ್ಗೆ ತನ್ನ ಭಾಷೆಯಲ್ಲಿ ಸೃಜನಶೀಲವಾಗಿ ಯೋಚಿಸಿ ಹೊಸ ವಿಷಯಗಳ ಬಗ್ಗೆ ಸ್ವಂತವಾಗಿ ಚಿಂತಿಸಲು ಸಾಧ್ಯವಾಗುವಂತೆ ಮಾಡಬೇಕಾಗಿದೆ. ಮಕ್ಕಳು ಭಿನ್ನವಾಗಿರುವುದು ಸಹಜತೆಯಾಗಿದೆ. ಮಕ್ಕಳ ಮಿತಿಗಳಿಗೆ ಹಣೆಪಟ್ಟಿ ಹಚ್ಚುವ ಬದಲು ಅದರ ಕುರಿತಾದ ಕಾರಣಗಳನ್ನು ನೈಜ ನೆಲೆಗಟ್ಟಿನಲ್ಲಿ ಅರ್ಥೈಸಿಕೊಂಡು, ಅವರನ್ನು ಹುರಿದುಂಬಿಸಿ, ಪ್ರೋತ್ಸಾಹಿಸುವ ಮೂಲಕ ಅವರ ವ್ಯಕ್ತಿತ್ವ ರೂಪಿಸುವ ಕಾರ್ಯದೆಡೆಗೆ ನಾವು ಶಿಕ್ಷಕರು ಹೆತ್ತವರು ಕಾರ್ಯೋನ್ಮುಖರಾಗೋಣ.ಸಾಕ್ಷರ ಪದ್ಧತಿ ಪೂರ್ತಿಯಾಗುವುದರೊಂದಿಗೆ ಮಕ್ಕಳು ಭಾಷಾ ಕಲಿಕೆಯಲ್ಲಿ ಸ್ವಯಂ ಪರ್ಯಾಪ್ತರಾಗಲೆಂದೇ ನಮ್ಮೆಲ್ಲರ ಹಾರೈಕೆ...
6 comments:
welldone keep it
Thank you sir...
supeeeeeeeeeeeeeer
Dhanyavada sir....
nice... happy ONAM to all the beloved PUPILS,STAFF and PARENTS.Convey my regards......
AEO MJR
ಧನ್ಯವಾದಗಳು ಸರ್... ನಿಮಗೂ ತಿರುವೋಣಂ ಶುಭಾಶಯಗಳು
Post a Comment