Wednesday, 8 October 2014

60 ನೇ ವನ್ಯಜೀವಿ ಸಪ್ತಾಹ ಆಚರಣೆ... 




       ಮನುಷ್ಯರಂತೆ ಎಲ್ಲಾ ಪ್ರಾಣಿಗಳಿಗೂ, ಸಸ್ಯಗಳಿಗೂ ಭೂಮಿಯಲ್ಲಿ ಬದುಕುವ ಹಕ್ಕಿದೆ. ಆಧುನಿಕ ಮನುಷ್ಯ ತನ್ನ ಹೊರತು ಇತರ ಪ್ರಾಣಿ ಪಕ್ಷಿಗಳ ಬಗ್ಗೆ ಚಿಂತಿಸುತ್ತಿಲ್ಲ. ವನ್ಯಜೀವಿ ಸಪ್ತಾಹವನ್ನು  ಸರಕಾರೀ ಸಂಸ್ಥೆ ಗಳಲ್ಲಿ ಹೆಸರಿಗಾದರೂ ಆಚರಿಸುತ್ತಿದ್ದಾರಲ್ಲಾ ಅಂತ ಖುಷಿ ಪಡುವ ವಿಷಯ ಒಂದಾದರೆ, ಸಕಲ ವನ್ಯಜೀವಿಗಳೂ ನಾಮಾವಶೇಷವಾಗಲು ಮನುಷ್ಯ ದಾಪುಗಾಲು ಹಾಕಿ ಮುನ್ನುಗುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿ.  ಮನುಷ್ಯನ ಅತಿಯಾದ ದುರಾಸೆಯಿಂದ ಕಾಡು ನಾಶವಾಗುತ್ತಿದೆ. ಪ್ರಕೃತಿ ನಾಶಕ್ಕೆ ಮೂಲ ಕಾರಣಕರ್ತನೇ ಮನುಷ್ಯ ಎಂಬ ಜೀವಿ. ಈಗಾಗಲೇ ನಗರ ಪ್ರದೇಶಗಳಲ್ಲಿ ಆಮ್ಲಜನಕವನ್ನು ಖರೀದಿಸಿ ಉಸಿರಾಡುವ ಪರಿಸ್ಥಿತಿ ಬಂದಿದ್ದು ಹೀಗೆಯೇ ಪರಿಸರ ನಾಶವಾದರೇ ನಮ್ಮ ಮಲೆನಾಡಿನಲ್ಲಿಯೂ ಇಂತಹ ಪರಿಸ್ಥಿತಿ ಬರಬಹುದು. ಇದರ ಬಗ್ಗೆ ಎಲ್ಲರೂ ಜಾಗೃತಿ ವಹಿಸುವ ಕಾಲ ಸನ್ನಿಹಿತವಾಗಿದೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಿಸಲು ಮುಂದಾಗಬೇಕಿದೆ. ಮುಂದಿನ ಪೀಳಿಗೆಯು ಅರಣ್ಯ ಸಂರಕ್ಷಣೆಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿರುವುದರಿಂದ ವಿದ್ಯಾರ್ಥಿಗಳಲ್ಲಿ  ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುವ ಉದ್ದೇಶದಿಂದ ನಮ್ಮ ಶಾಲೆಯಲ್ಲಿ October 1 ರಿಂದ 7 ರ ವರೆಗೆ ವನ್ಯಜೀವಿ ಸಪ್ತಾಹವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ  ಆಚರಿಸಲಾಯಿತು. 

ಪ್ರಕೃತಿ ಪ್ರೇಮಿಗಳಿಗೆಲ್ಲರಿಗೂ ವನ್ಯಜೀವಿ ಸಪ್ತಾಹದ ಶುಭಾಶಯಗಳು. ಬದುಕು ಎಂದೂ ಹಸಿರಾಗಿರಲಿ...  

No comments: