ಅಕ್ಟೋಬರ್ 15; ಎ. ಪಿ. ಜೆ ಅಬ್ದುಲ್ ಕಲಾಂ ಜನ್ಮದಿನ
ನೆಚ್ಚಿನ ಅಬ್ದುಲ್ ಕಲಾಂರವರಿಗೆಗೆ ನಮ್ಮ ಬ್ಲಾಗ್ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು.
ಎ. ಪಿ. ಜೆ ಅಬ್ದುಲ್ ಕಲಾಂ ಭಾರತದ ಮಾಜಿ ರಾಷ್ಟ್ರಪತಿ ಎಂಬುದು ಎಲ್ಲರಿಗೂ ಗೊತ್ತು. ಸದಾ ಕ್ರಿಯಾಶೀಲ ವಿಜ್ಞಾನಿಯಾಗಿದ್ದ ಅಬ್ದುಲ್ ಕಲಾಂ ತಮ್ಮ ವೈಜ್ಞಾನಿಕ ಕೆಲಸ, ಚಿಂತನೆಗಳ ಮೂಲಕ ದೇಶಕ್ಕೇ ಮಾದರಿಯಾಗಿದ್ದಾರೆ. ಅಬ್ದುಲ್ ಕಲಾಂ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಲೇ ಬೇಕಾದ 5 ಸತ್ಯಗಳು ಇಲ್ಲಿವೆ ನೋಡಿ.
1. 1998 ರ ಭಾರತದ ಅಣು ಅಸ್ತ್ರ ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಅಬ್ದುಲ್ ಕಲಾಂ. ಈ ಐತಿಹಾಸಿಕ ಸಾಧನೆಯಿಂದ ಏಕಾಏಕಿ ಪ್ರಸಿದ್ಧರಾದ ಮಹಾನ್ ವಿಜ್ಞಾನಿ ಅಬ್ದುಲ್ ಕಲಾಂ.
2. ರಾಷ್ಟ್ರಪತಿ ಆಗುವುದಕ್ಕಿಂತ ಮುನ್ನ ಸರ್ಕಾರಿ ಸಂಸ್ಥೆಗಳಾದ ಡಿ.ಆರ್.ಡಿ.ಓ ಮತ್ತು ಇಸ್ರೋದಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅಬ್ದುಲ್ ಕಲಾಂ ಅಲ್ಲಿ ಅತ್ಯಾಧುನಿಕ ಕ್ಷಿಪಣಿ ಮತ್ತು ಉಡ್ಡಯನ ವಾಹನವನ್ನ ಅಭಿವೃದ್ಧಿಪಡಿಸಿದ್ದರು, ಹೀಗಾಗಿಯೇ ಅಬ್ದುಲ್ ಕಲಾಂ `ಮಿಸೈಲ್ ಮ್ಯಾನ್' ಎಂದೇ ಖ್ಯಾತರಾಗಿದ್ದಾರೆ.
3. ಶಾಲಾ ದಿನಗಳಲ್ಲಿ ಅಬ್ದುಲ್ ಕಲಾಮ್ ಅತ್ಯಂತ ಬುದ್ಧಿವಂತ ವಿದ್ಯಾರ್ಥಿ ಆಗಿರಲಿಲ್ಲ.
4. ಶಾಲೆ ಮುಗಿದ ಬಳಿಕ ನ್ಯೂಸ್ ಪೇಪರ್ ಮಾರಾಟ ಮಾಡಿ ಬಂದ ಹಣವನ್ನ ತಂದೆಗೆ ನೀಡಿ ಅವರ ಖರ್ಚಿನ ಭಾರ ತಗ್ಗಿಸುತ್ತಿದ್ದ ಅಬ್ದುಲ್ ಕಲಾಂ
5. 1998ರಲ್ಲಿ ಹೃದಯ ತಜ್ಞ ಡಾ. ಸೋಮರಾಜು ಸಹಕಾರ ಪಡೆದು ಕಡಿಮೆ ಖರ್ಚಿನ ಕರೋನರಿ ಸ್ಟೆಂಟ್ (ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಬ್ಲಾಕೇಜ್ ನಿವಾರಣೆಗೆ ಬಳಸುವ ಉಪಕರಣ) ಅನ್ನ ಅಭಿವೃದ್ಧಿಪಡಿಸಿದ ಸಾಧನೆ ಅಬ್ದುಲ್ ಕಲಾಂ ಅವರದ್ದು, ಜೊತೆಗ, ಇಬ್ಬರೂ ಸೇರಿ ಆರೋಗ್ಯ ತಪಾಸಣೆ ನಡೆಸಬಲ್ಲ ಸುಲಭ ಸಾಧನವಾದ ಟ್ಯಾಬ್ಲೆಟ್ ಪಿಸಿಯನ್ನ ಅಭಿವೃದ್ಧಿಪಡಿಸಿದ್ದರು. ಈ ಟ್ಯಾಬ್ಲೆಟ್ ಗೆ ಕಲಾಮ್-ರಾಜು ಟ್ಯಾಬ್ಲೆಟ್ ಎಂದೇ ಹೆಸರು ನೀಡಲಾಗಿದೆ.
ಇಂತಹ ಮಹಾನ್ ವ್ಯಕ್ತಿ ಅಬ್ದುಲ್ ಕಲಾಂ ಇಂದು 83 ನೇ ವಸಂತಕ್ಕೆ ಕಾಲಿರಿಸಿದ್ದಾರೆ.
No comments:
Post a Comment