Sunday, 30 August 2015

ಶ್ರೀ ನಾರಾಯಣ ಗುರು ಜಯಂತಿ

                   “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿರಿಎಂದು ಸಂದೇಶ ನೀಡಿದವರು ನಾರಾಯಣ ಗುರುಗಳು.    ನಾರಾಯಣ ಗುರು ಅವರು ಸಮಾಜದಲ್ಲಿದ್ದ ಅಸ್ಪೃಶ್ಯತೆ, ದಲಿತ ನಿಂದನೆ, ಹಿಂಸಾಚಾರ, ಜಾತಿಭೇದ, ಸ್ತ್ರೀದಾಸ್ಯತ್ವ, ಅಸಮಾನತೆ, ಮೂಢನಂಬಿಕೆ ಇವುಗಳ  ನಿವಾರಣೆಗಾಗಿ ಅವಿರತವಾಗಿ ಶ್ರಮಿಸಿದರು.

ಸಮಾಜ ಸೇವಕ, ದಲಿತೋದ್ದಾರಕ, ದೀನರ ಬಂಧು, ಸಾಧುವೂ, ಸಂತರೂ, ಜ್ಞಾನಿಯೂ ಆದ ಮಹಾನ್ ಚೇತನ ಶ್ರೀ ನಾರಾಯಣಗುರುಗಳ ಜನನವು 1856ರ ವರ್ಷದಲ್ಲಿ ಕೇರಳದ ಚೆಂಬಳಂತಿ ಎಂಬಲ್ಲಿ ಸಿಂಹ ಮಾಸದ ಶತಭಿಷ ನಕ್ಷತ್ರದ ಓಣಂ ದಿನವಾದ ಆಗಸ್ಟ್ 20ರ ದಿನದಂದು ಆಯಿತು.   ಸಮಾಜದಲ್ಲಾಗುವ ಶೋಷಣೆಯನ್ನು ಕಂಡು  ಬಹಳ ಮನನೊಂದಿದ್ದ ಅವರು ಬಾಲ್ಯದಲ್ಲೇ ವಿಧೇಯತೆ, ಕರ್ತವ್ಯನಿಷ್ಠೆ, ಸೌಜನ್ಯತೆಗಳನ್ನು ಬೆಳೆಸಿಕೊಂಡಿದ್ದರು.  ಏಕಾಗ್ರತೆಯಿಂದ ಸಂಸ್ಕ್ರತ ವಿದ್ಯೆ ಕಲಿತು ಪಂಡಿತರಾದರು.

ಜನರಲ್ಲಿರುವ ಮೂಢನಂಬಿಕೆಯ ಅಜ್ಞಾನವನ್ನು ಹೋಗಲಾಡಿಸಲು ನಾರಾಯಣ ಗುರು ಅವರು ಹಲವಾರು ವಿದ್ಯಾಕೇಂದ್ರಗಳನ್ನು ಪ್ರಾರಂಭಿಸಿದರು. ಕೀಳ್ಜಾತಿಯ  ಜನರ  ಕಷ್ಟ ಪರಿಹಾರಕ್ಕಾಗಿ ಮೇಲ್ಜಾತಿಯವರ ವಿರುದ್ಧ ಶಾಂತಿಯ ಹೋರಾಟ ನಡೆಸಿದರು. ಮಾನವರೆಲ್ಲರೂ ಒಂದೇಎಂಬ ತತ್ವವನ್ನು ಜನತೆಗೆ ಸಾರಿ ಹೇಳಿದರು. ದೇವಸ್ಥಾನಗಳಿಗೆ ಕೀಳ್ಜಾತಿಯವರಿಗೆ ಪ್ರವೇಶ ನಿರಾಕರಿಸಿದ್ದನ್ನು ಖಂಡಿಸಿ ತಾವೇ ದೇವಾಲಯಗಳ ನಿರ್ಮಾಣ ಮಾಡಿ ಹಿಂದುಳಿದ ವರ್ಗದವರಿಗೆ ಪ್ರವೇಶ ಮಾಡುವಂತೆ ಹೇಳಿದರು.  ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು,ಶ್ರೀಲಂಕಾ ಮುಂತಾದ ಕಡೆ ಸಂಚಾರ ಮಾಡಿ ಜನರಲ್ಲಿ ಭಗವಂತನ ಭಕ್ತಿಯ ಜ್ಞಾನ ಮಾರ್ಗವನ್ನು ತೋರಿಸಿಕೊಟ್ಟರು. ಕೇರಳದ ವರ್ಕಳ ಶಿವಗಿರಿ ಎಂಬಲ್ಲಿ ಶಾರದಾಂಬೆ ಆರಾಧಕರಾಗಿ, ಕರ್ನಾಟಕ ಪರಶುರಾಮ ಸೃಷ್ಠಿಯ ತುಳುನಾಡ ಪುಣ್ಯಭೂಮಿ ಕುದ್ರೋಳಿ ಎಂಬಲ್ಲಿ ಶ್ರೀ ಗೋಕರ್ಣನಾಥೇಶ್ವರನ ಲಿಂಗ ಪ್ರತಿಷ್ಠಾಪಿಸಿ ಸರ್ವರಿಗೂ ದೇವರ ದರ್ಶನವಾಗುವಂತೆ ಮಾಡಿದರು.  ಹೀಗೆ ವಿವಿದೆಡೆಗಳಲ್ಲಿ ಅವರು ಸ್ಥಾಪಿಸಿದ ದೇಗುಲಗಳ ಸಂಖ್ಯೆ 60ಕ್ಕೂ ಹೆಚ್ಚಿನದು.

ನಾರಾಯಣ ಗುರುಗಳು ಸಾಮಾಜಿಕ, ಧಾರ್ಮಿಕ ಸುಧಾರಣೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿ ಎಲ್ಲರೂ ಸ್ವೀಕರಿಸುವಂತ ತತ್ವಗಳಾದ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು.” “ಜಾತಿಯ ಬಗ್ಗೆ ಕೇಳಬೇಡ,ಹೇಳಬೇಡ, ಯೋಚಿಸಬೇಡ.” “ಜಾತಿ ಯಾವುದಾದರೇನು? ಮನುಷ್ಯ ಒಳ್ಳೆಯವನಾಗಿರಬೇಕುಎಂದು ಸಾರಿದರು.

ಕೇರಳ ರಾಜ್ಯ ಸಾಕ್ಷರತೆ ಸಾಧಿಸಿರುವ ಹಿನ್ನೆಲೆಯಲ್ಲಿ  ನಾರಾಯಣ  ಗುರುಗಳು ಪ್ರಾರಂಭಿಸಿದ ವಿದ್ಯಾಕೇಂದ್ರಗಳು,ದೇವಸ್ಥಾನಗಳು ಬಹಳಷ್ಟು ಪ್ರೇರಕಗಳಾಗಿ ಕಾರ್ಯನಿರ್ವಹಿಸಿವೆ.  ದೇವಸ್ಥಾನದ ಹೊಸ್ತಿಲಲ್ಲಿ ನಿಂತು ಜಾತಿ ಪದ್ದತಿಯ ನಿರ್ಮೂಲನಕ್ಕೆ ಕರೆ ಕೊಟ್ಟ ಧೀಮಂತ ದಾರ್ಶನಿಕ ಶ್ರೀ ನಾರಾಯಣಗುರು. ಗುರುಗಳ ಪ್ರಕಾರ ದೇವಸ್ಥಾನ, ಮಠ,ಮಂದಿರಗಳು ಮಾನವೀಯ ಮೌಲ್ಯಗಳನ್ನು ಹೊಂದಿದ ಚಟುವಟಿಕೆಗಳ ಮೂಲಕ ಮನುಷ್ಯ ಧಾರ್ಮಿಕವಾಗಿ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಶ್ರೀಮಂತನಾಗಲು ಸ್ಪೂರ್ತಿ ಕೇಂದ್ರವಾಗಿರಬೇಕು.


ಈ ಮಹಾನ್ ಸಾಮಾಜಿಕ ಕ್ರಾಂತಿಕಾರ ನಾರಾಯಣ ಗುರುಗಳಿಗೆ  ಜಯಂತಿ ದಿನದೊಂದು ನಮ್ಮ ಗೌರವಪೂರ್ವಕ ನಮನ.


ಕೃಪೆ: ಸಲ್ಲಾಪ.ಕಾಮ್




Saturday, 29 August 2015

ONAM CELEBRATION 2015 
IN OUR SCHOOL WITH OUR ADORABLE KIDS...

A special thanks to everyone who helped us in this video...




Thursday, 27 August 2015

NATIONAL AWARD TO TEACHERS 2014
Congratulations from Heroor blog to Award winners..

Wednesday, 26 August 2015

"A great teacher is a great artist; 
his medium is not canvas, but the human soul."
We congratulate you Kerala state award winning teachers



Monday, 24 August 2015

Kannada Patriotic Mp3 songs



01 - JAYA BHARATHA JANANIYA.mp3 - Download
02 - JOGADA SIRI BELAKINALLI.mp3 - Download
03 - HACCHEVU KANNADADA DEEPA.mp3 - Download
04 - THAAYA BAARA.mp3 - Download
05 - KANNADA ENE.mp3 - Download
06 - KANNADADA RUSHIGALU.mp3 - Download
07 - BAARISU KANNADA DINDIMAVA.mp3 - Download
08 - YENDA YEDATHI KANNADA PADGOL.mp3 - Download
09 - MYSORE MALLIGE.mp3 - Download
10 - THANAAGI ARALITHU KANNADADA.mp3 - Download
11 - VANDISUVE KANNADAMBE.mp3 - Download
12 - YELLADHARU IRU YENTHADARU IRU.mp3 - Download
13 - KANNADA BHAVUTA.mp3 - Download
14 - ILIDHU BAA THAAYE.mp3 - Download
15 - VISHWAMUKHI NAMMA KANNADA.mp3 - Download
16 - GEL KANNADA.mp3 - Download
17 - HOTTHITHO HOTTHITHO.mp3 - Download
18 - YELLELLU USIRABEKU.mp3 - Download
19 - NAVODAYADA KIRANA LEELE.mp3 - Download
20 - HAARALI NAADAGUDI.mp3 - Download
21 - EDA NODU.mp3 - Download
22 - KANNADA KAVERI KAYIRI.mp3 - Download
23 - NUDIDARE KANNADA.mp3 - Download
24 - AJARAAMARA.mp3 - Download
25 - KATTUVEVU NAAVU.mp3 - Download
26 - NARA NARADALI.mp3 - Download
27 - DEVAADHI DEVA.mp3 - Download
28 - SIDIDELI.mp3 - Download
29 - JAGATTHINALLI.mp3 - Download
30 - ELLINDALO BANDA PARADESI.mp3 - Download

Click here to download any or all of these songs

Saturday, 22 August 2015


HAPPY ONAM VACATION


ಓಣಂ ವೆಕೇಶನ್ ಬಳಿಕ  ಶಾಲಾ ಮಕ್ಕಳಿಗೆ  ಆ: 31 ರಿಂದ ತರಗತಿಗಳು ಎಂದಿನಂತೆ ಆರಂಭಗೊಳ್ಳುತ್ತವೆ.

Friday, 21 August 2015

ಸಾಮರಸ್ಯ ಮತ್ತು ಪ್ರೀತಿ ಭ್ರಾತೃತ್ವದ ಓಣಂ ಹಬ್ಬ
ಪುಟಾಣಿಗಳೊಂದಿಗೆ ಸಂಭ್ರಮದ ಕ್ಷಣಗಳು...


ಪೂಕ್ಕಳಂ 





ಕೃಷ್ಣ ಕುಮಾರ್ ಪಳ್ಳಿಯತ್ ಅವರಿಂದ ಓಣಂ ಹಾಡು, ಕಥೆ 


ಓಣಂ ಸದ್ಯ... 




Wednesday, 19 August 2015

​ನಾಡಿನಾದ್ಯಂತ ನಾಗರ ಪಂಚಮಿ ಸಂಭ್ರಮ





ನಾಗರ ಪಂಚಮಿ ಹಬ್ಬದ ಮಹತ್ವವೇನು?

ನಾಗರ ಪಂಚಮಿ ಮತ್ತೆ ಬಂದಿದೆ. ಶ್ರಾವಣದ ಹಬ್ಬಗಳ ಸಾಲಿಗೆ ಮುನ್ನುಡಿ. ಸಾಲು ಹಬ್ಬಗಳ ಪೈಕಿ ಮೊದಲನೆಯದು ನಾಗಪಂಚಮಿ.  ಶ್ರಾವಣ  ಮಾಸದ  ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ ಅಥವಾ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ  ಆಚರಿಸುತ್ತಾರೆ.

ನಾಗರ ಪಂಚಮಿ ಎರಡು ಆಚರಣೆಗಳಲ್ಲಿ ಒಂದು ನಾಗರಪೂಜೆ ಇನ್ನೊಂದು ಸಹೋದರ ಸಹೋದರಿಯರ ಭಾವ ಸಂಬಂಧಗಳು ಮುಖ್ಯವಾದವು. ಸಹೋದರಿಯರು ಸಹೋದರರ ಬೆನ್ನಿಗೆ ಹಾಲು, ನೀರು ಎರೆಯುವ ಮೂಲಕ ತವರು ತಂಪಾಗಿರಲಿ ಎಂದು ಹಾರೈಸಿದರೆ, ಸಹೋದರರು ಪ್ರೀತಿಯ ಅಕ್ಕ ತಂಗಿಯರಿಗೆ ಉಡುಗೊರೆ ಕೊಟ್ಟು ಸಂಭ್ರಮಿಸುತ್ತಾರೆ.

ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ - ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನ ಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ.

ನಾಗಾರಾಧನೆಗೆ ಪ್ರಸಿದ್ಧಿ ಪಡೆದ ಕರಾವಳಿಯಲ್ಲಿ ನಾಗರ ಪಂಚಮಿ ಆಚರಣೆ ಬಹಳ ವಿಶಿಷ್ಟ. ಇಲ್ಲಿ ಬೆಳಗ್ಗಿನಿಂದಲೇ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಹಾವಿನ ಹುತ್ತ ಹಾಗೂ ನಾಗರ ಕಲ್ಲುಗಳಿಗೆ ಹಾಲು ಮತ್ತು ನೀರಿನ ತನಿ ಎರೆಯುತ್ತಾರೆ. ಜತೆಗೆ ತಂಬಿಲ ನೈವೇದ್ಯ ಮಾಡುತ್ತಾರೆ. ಇದೇ ದಿನ ಆಶ್ಲೇಷಾ ಬಲಿ, ನಾಗ ಮಂಡಲ ಮುಂತಾದ ನಾಗ ಸಂಬಂಧೀ ಪೂಜೆಗಳನ್ನು ಮಾಡಲಾಗುತ್ತದೆ.

ನಾಗರಪಂಚಮಿಯಂದು ವಿಷ್ಣುವಿನ ವಾಹನ ಶೇಷನಾಗನಿಗೆ ಸಲ್ಲಿಸುವ ಪೂಜೆ ಶ್ರೇಷ್ಠ. ಈ ದಿನ ನಾಗಪೂಜೆ ಮಾಡಿದರೆ ನಾಗದೋಷಕ್ಕೆ ಪರಿಹಾರ ಸಿಗುವುದು ಎಂಬ ನಂಬಿಕೆಯ ಮೂಲ ಈ ಹಬ್ಬ. ಈ ಸಲುವಾಗಿ ವಾಸುಕಿ, ತಕ್ಷಕ, ಕಾಲಿಯಾ, ಮಣಿಭದ್ರ, ಐರಾವತ, ದೃತರಾಷ್ಟ್ರ, ಕಾರ್ಕೋಟಕ, ಧನಂಜಯ ಮುಂತಾದ ಹಾವುಗಳನ್ನು ಸ್ಮರಿಸಿಕೊಂಡು ಹಾವುಗಳ ವಿಗ್ರಹಕ್ಕೆ ಅಭಿಷೇಕ ಮಾಡಿ ಪೂಜೆ ಸಲ್ಲಿಸುವುದು ರೂಢಿ.


ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.

ಎಲ್ಲರಿಗೂ ನಾಗರ ಪಂಚಮಿ ಶುಭಾಶಯಗಳು...

ಗಣಿತ ಕ್ವಿಜ್ ಕಾರ್ಯಕ್ರಮ

          19-8-2015 ರಂದು ಬೆಳಿಗ್ಗೆ ಶಾಲಾ ಮಟ್ಟದ ಗಣಿತ ಕ್ವಿಜ್ ಕಾರ್ಯಕ್ರಮ ಜರಗಿತು. ಅಧ್ಯಾಪಕರಾದ ಪ್ರವೀಣ್ ಕುಮಾರ್ ಮತ್ತು ಕೃಷ್ಣ ಕುಮಾರ್ ನಡೆಸಿಕೊಟ್ಟರು. ನಾಲ್ಕನೇ ತರಗತಿಯ ಕುಮಾರಿ ಲಕ್ಷಿತ ಪ್ರಥಮ ಸ್ಥಾನ,  ದರ್ಶಿನಿ ಹಾಗೂ  ಹಿಬಾ ಫಾತಿಮಾ ದ್ವಿತೀಯ ಸ್ಥಾನ ಪಡೆದರು. ವಿಜಯಿಗಳನ್ನು ಹೆಡ್ ಮಾಸ್ಟರ್ ಅಭಿನಂದಿಸಿದರು.

Tuesday, 18 August 2015

ಸುಭಾಷ್ ಚಂದ್ರ ಬೋಸ್  ಸ್ಮರಣೆ  



            ಜನನ: ಜನವರಿ 23, 1897  ಮರಣ (ಸಂಭಾವಿತ): ಆಗಸ್ಟ್ 18, 1945 ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸದ ಇವರು, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ತತ್ವಗಳನ್ನು ಒಪ್ಪದೆ ಪಕ್ಷದಿಂದ ಹೊರಬಂದರು. ಮುಂದೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇತಾಜಿಯವರುಭಾರತೀಯ ರಾಷ್ಟ್ರೀಯ ಸೇನೆಯನ್ನು ಅನುಸ್ಥಾಪಿಸಿದರು. ಇವರು ಟೈವಾನ್‍ನಲ್ಲಿ 1945 ರ ಆಗಸ್ಟ್ 18 ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಎಂದು ಭಾವಿಸಲಾಗಿದೆ. ಆದರೆ ಈ ಘಟನೆ ವಿವಾದಿತವಾಗಿದೆ

Saturday, 15 August 2015

"SWAATANTRYA DINA SMARANAKAL"  
Sri Krishna Kumar Palliath mashinde Madhura shabdhathil...


69ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ

69th INDEPENDENCE DAY IN OUR SCHOOL

          69 ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ, ಶ್ರದ್ದೆಯಿಂದ ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತ್ ಸದಸ್ಯರಾದ ಪುಷ್ಪರಾಜ್ ಐಲ್ ಧ್ವಜಾರೋಹಣಗೈದರು. ಶಾಲಾ ಮುಖ್ಯೋಪಾದ್ಯಾಯರಾದ ಅಬ್ಬಾಸ್ ಕೆ ಸ್ವಾಗತ ಕೋರಿದರು. ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಕೃಷ್ಣಾನಂದ ಪೈ, ಪ್ರವೀಣ್ ಪಕಳ, ಗಣೇಶ್, ಕೆ.ಎಚ್ ಹೊಳ್ಳ ಮುಂತಾದವರು ಮಕ್ಕಳಿಗೆ ಸಿಹಿ ವಿತರಿಸುವ ಜೊತೆಗೆ ಶಾಲಾ ಮಕ್ಕಳ ಅಭುದಯ ನಿಧಿಗೆ ಸಂಗ್ರಹಿಸಿದ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಹಿರಿಯ ಶಿಕ್ಷಕ ಕೃಷ್ಣ ಕುಮಾರ್ ಸ್ವಾತಂತ್ರ್ಯ ಗೀತೆಯನ್ನು ಅಲಾಪಿಸಿ ಕಳೆದು ಹೋದ ಸ್ವಾತಂತ್ರ್ಯ ಪೂರ್ವ ಕಾಲವನ್ನು ಮೆಲುಕು ಕಾಕಿದರು. ರಕ್ಷಕರು, ಸ್ಥಳೀಯ ಕ್ಲಬ್ ಸದಸ್ಯರು, ಹಳೆ ವಿದ್ಯಾರ್ಥಿಗಳು, ಊರ ಮಹನೀಯರು  ಮಕ್ಕಳಿಗೆ ಸಿಹಿ ಹಂಚಿ ಶುಭ ಹಾರೈಸಿದರು.














ಶಾಲಾ ಮಕ್ಕಳ ಅಭುದಯ ನಿಧಿಗೆ ದೇಣಿಗೆಯನ್ನು ನೀಡಿದ ಲಯನ್ಸ್ ಕ್ಲಬ್ ಪದಾಧಿಕಾರಿಗಳಿಗೆ ಶಾಲಾ ಶಿಕ್ಷಕ -ರಕ್ಷಕ ತಂಡ ಸದಾ ಆಭಾರಿಯಾಗಿರುತ್ತದೆ. 


ಸ್ವಾತಂತ್ರ್ಯ ದಿನ ಹೀಗೆ ಆಚರಿಸೋಣ...

                ನಾವು ಮತ್ತೊಂದು ಸ್ವಾತಂತ್ರ್ಯ ದಿನಾಚರಣೆಯ ಸಡಗರದಲ್ಲಿದ್ದೇವೆ. ಈ ಬಾರಿಯಾದರೂ ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡದೆ ಎಲ್ಲರೂ ಎಚ್ಚರ ವಹಿಸೋಣ. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳಲ್ಲಿ ಹರಿದ, ಕೊಳೆಯಾದ ಬಾವುಟವನ್ನು ಬಳಸದಿರಲು ಕಾಳಜಿ ವಹಿಸೋಣ. ಧ್ವಜ ವಂದನೆ, ರಾಷ್ಟ್ರಗೀತೆ ಹಾಡುವಾಗ ಅಸಭ್ಯವಾಗಿ ವರ್ತಿಸದೆ ಶಿಸ್ತು, ಘನತೆ ಗೌರವದಿಂದ ನಡೆದುಕೊಳ್ಳೋಣ. ಮಾಧ್ಯಮಗಳು ಇಂತಹ ಅಚಾತುರ್ಯಗಳನ್ನು ವರದಿ ಮಾಡುತ್ತವೆ ಎಂಬ ಭಯಕ್ಕಾಗಿ ಶಿಸ್ತು, ಶಿಷ್ಟಾಚಾರ ಪಾಲಿಸುವ ಬದಲಿಗೆ ನೈಜ ರಾಷ್ಟ್ರಭಕ್ತಿ, ದೇಶಪ್ರೇಮದೊಂದಿಗೆ ಸ್ವಾತಂತ್ರ್ಯ ದಿನ ಆಚರಿಸೋಣ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಅದಕ್ಕಾಗಿ ತನು ಮನ ಪ್ರಾಣವನ್ನೇ ಸಮರ್ಪಿಸಿದ ಮಹನೀಯರನ್ನು ಸ್ಮರಿಸಿ, ಇಂದಿನ ಪೀಳಿಗೆಗೆ ಆಚರಣೆಯ ಮಹತ್ವ ತಿಳಿಸುವಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಮನೆಯ ಹಬ್ಬದಂತೆ ಸಂಭ್ರಮದಿಂದ ಭಾಗವಹಿಸೋಣ.
                ಭಾರತಾಂಬೆಯ ಜನುಮ ದಿನವನ್ನು ಸ್ವಂತ ತಾಯಿಯ ಹುಟ್ಟು ಹಬ್ಬದಂತೆ ಅತ್ಯಂತ ಮುತುವರ್ಜಿ ವಹಿಸಿ ಆಚರಿಸೋಣ. ಪೂರ್ವಗ್ರಹಪೀಡಿತರಾಗದೆ ವಾಸ್ತವದ ನೆಲೆಗಟ್ಟಿನಲ್ಲಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಇರಿಸಿ ಸಕಾರಾತ್ಮಕ ಧೋರಣೆಯೊಂದಿಗೆ `ಜೈ ಹಿಂದ್' ಎನ್ನೋಣ.



ಎಲ್ಲರಿಗೂ ನಮ್ಮ ಶಾಲಾ ಸಿಬ್ಬಂದಿ ವರ್ಗದವರ ವತಿಯಿಂದ 69 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು...