1945 ಆಗಸ್ಟ್ 6
ಹಿರೋಷಿಮಾ
ವಾರ್ಷಿಕದ ಸ್ಮರಣೆ
ಇಡೀ ವಿಶ್ವವೇ ಬೆಚ್ಚಿ ಬಿದ್ದ
ದಿನ. ಮನುಕುಲ ಊಹಿಸಲಾರದಂಥ ವಿಧ್ವಂಸಕ ಘಟಿಸಿದ ದಿನ. ಅದುವರೆಗೂ ಸಾಂಪ್ರದಾಯಿಕ ಬಾಂಬ್‌ಗಳ ಸದ್ದು
ಕೇಳಿದ್ದವರು 'ಅಣು ಬಾಂಬ್ ಎಂಬ ಆಧುನಿಕ ರಾಕ್ಷಸ'ನ ಅಟ್ಟಹಾಸಕ್ಕೆ ಸಾಕ್ಷಿಯಾದ ದಿನ. ಜಗತ್ತಿನಲ್ಲೇ ಪ್ರಥಮ
ಬಾರಿಗೆ ಜಪಾನ್‌ನ ಹಿರೋಷಿಮಾ ಪಟ್ಟಣದ ಮೇಲೆ ಅಣು ಬಾಂಬ್ ಅನ್ನು ಇದೇ ದಿನ ಪ್ರಯೋಗಿಸಲಾಯಿತು.
ಹಿರೋಷಿಮಾ ಮೇಲೆ ಬಾಂಬ್ ಎಸೆದ 3
ದಿನಗಳ ನಂತರ ಅಂದರೆ, ಆಗಸ್ಟ್ 9 ರಂದು ಜಪಾನ್‌ನ
ಇನ್ನೊಂದು ಪಟ್ಟಣವಾದ ನಾಗಸಾಕಿಯ ಮೇಲೆ ಅಣು ಬಾಂಬ್ ಹಾಕಲಾಯಿತು. ಅಮೆರಿಕದ ಯುದ್ಧೋನ್ಮಾದಕ್ಕೆ
ಮತ್ತು ಸಿದ್ಧಪಡಿಸಿಟ್ಟುಕೊಂಡ ಅಣುಬಾಂಬ್‌ಗಳ ಪ್ರಯೋಗಕ್ಕೆ ಜಪಾನ್ ಅಕ್ಷರಶಃ ಯುದ್ಧ ಪ್ರಯೋಗ
ಸ್ಥಳವಾಗಿ ಮಾರ್ಪಟ್ಟಿತ್ತು. ಆದರೆ, ಮನುಕುಲದ ಇತಿಹಾಸದಲ್ಲಿ ಇದೊಂದು
ಕಪ್ಪು ದಿನ. ಮಮ್ಮಲ ಮರುಗಿದ ದಿನ.
ಈ ದಿನದಂದು ನಮ್ಮ ಶಾಲಾ ಮಕ್ಕಳು ಸಡಾಕೋ ಪಾರಿವಾಳಗಳನ್ನು ತಯಾರಿಸಿದರು.
ಕ್ಯಾಂಡಲ್ ಬೆಳಗುವ ಮೂಲಕ ಮಡಿದ ಆತ್ಮಗಳಿಗೆ ಚಿರ ಶಾಂತಿ ಕೋರುತ್ತಾ "ಬೇಡ ಬೇಡ ಯುದ್ದ ಬೇಡ,
ಬೇಡ ಬೇಡ ಇನ್ನು ಒಂದು ಹಿರೋಶಿಮಾ, ಶಾಂತಿ ಮಾತ್ರ ನಮಗೆ ಸಾಕು " ಎಂದು ಸ್ನೇಹ ಮಂತ್ರ
ಹಾಡಿದರು. ಪ್ರೊಜೆಕ್ಟರ್ , ಚಿತ್ರ ಪ್ರದರ್ಶನಗಳ ಮೂಲಕ ಮಕ್ಕಳಿಗೆ ಯುದ್ದದ ಭೀಕರ ಪರಿಣಾಮವನ್ನು
ತಿಳಿಸಲಾಯಿತು. ಅಧ್ಯಾಪಕ ಕೃಷ್ಣ ಕುಮಾರ್ ಶಾಂತಿ ಗೀತೆಯನ್ನು ಅಲಾಪಿಸಿದರು. ಮುಖ್ಯ ಶಿಕ್ಷಕ ಅಬ್ಬಾಸ್ ಕೆ, ಶಾಲೆಯ ಪೂರ್ವ ಅಧ್ಯಾಪಕ ಅಮೃತ್ ಲಾಲ್, ಪ್ರವೀಣ್, ಪೂರ್ಣಿಮಾ, ಮುಂತಾದವರು ಮಕ್ಕಳೊಂದಿಗೆ ಶಾಂತಿ ಗೀತೆಯನ್ನು ಹಾಡಿದರು.
==========================================
ನಿಮ್ಮ ವಿದ್ಯಾರ್ಥಿಗಳು ಕಾಗದದ ಕೊಕ್ಕರೆ ತಯಾರಿಸಿ ವಿಶ್ವಶಾಂತಿಗೆ ಪ್ರಾರ್ಥಿಸಲಿ . ತಯಾರಿಸುವ ವಿಧಾನ ಕೆಳಗಿದೆ.
ಸ್ನೇಹ ಸಂದೇಶದೊಂದಿಗೆ ಪುಟಾಣಿಗಳು.
ಶಾಂತಿ ಗೀತೆ ಆಲಾಪಿಸುತ್ತಿರುವ ಕೃಷ್ಣ ಕುಮಾರ್
==========================================
2000 ಕಾಗದದ ಕೊಕ್ಕರೆ- ಸಡಾಕೊ ಸಸಾಕಿಗೊಂದು ಸ್ಮಾರಕ
ಹಿರೋಷಿಮಾ ಅಣು ಬಾಂಬ್ ದಾಳಿಯು ಯಿಂದ ರಕ್ತಕ್ಯಾನ್ಸರ್ ಬಲಿಯಾದ ಮಕ್ಕಳಲ್ಲಿ ಸಡಾಕೊ ಸಸಾಕಿ ಒಬ್ಬಳು.ಸಡಾಕೊ ಸಸಾಕಿ ಗುಣಮುಖವಾಗಲು ಸಾಧನವಾಗಿ ಕಾಗದದ ಕೊಕ್ಕರೆಗಳನ್ನು ತಯಾರಿಸಲು ಪ್ರಾರಂಭಿಸಿದಳು. ಆದರೆ ತನ್ನದೇನೂ ತಪ್ಪಿಲ್ಲದೆ ಯುದ್ಧದ ಮಾರಕ ಪರಿಣಾಮಕ್ಕೆ ಈ ಮುಗ್ದೆ ಬಲಿಯಾದಳು. ಈಕೆಯ ಜೀವನ ಮತ್ತು ಸಾವಿನ ವಿರುದ್ದ ನಡೆಸಿದ ಹೋರಾಟ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಮತ್ತು ಭರವಸೆಯ ಸ್ಫೂರ್ತಿಯಾಗಿದೆ ಈಕೆಗೆ 2000 ಕಾಗದದ ಕೊಕ್ಕರೆಗಳ ಸ್ಮಾರಕ ಸಮರ್ಪಿಸಲಾಗಿದೆ. ಒಂದು ಒರಿಗಮಿ ಕೊಕ್ಕರೆ ಶಾಂತಿಯ ಸಾರ್ವತ್ರಿಕ ಸಂಕೇತವಾಗಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಮಡಚಿ ತಯಾರಿಸಿದ ಕಾಗದದ ಕೊಕ್ಕರೆಗಳು ಅಗಾಧ ಸ್ಫೂರ್ತಿಯ ಸೆಲೆಯಾಗಿವೆ.. ದ್ವೇಷ ಮತ್ತು ದುರಾಶೆ ಹೇರಳವಾಗಿ ನಮ್ಮ ಜಗತ್ತಿನಲ್ಲಿ ತಾಂಡವವಾಡುತ್ತಿದ್ದರೂ ಕರುಣೆ ಮತ್ತು ಸಹಾನುಭೂತಿ ಇನ್ನೂ ಜಗತ್ತಿನಲ್ಲಿ ಉಳಿದಿದೆ. ಈ ಭಾವನೆಗಳು, ಈ ಪ್ರೀತಿಯಾಗಲೀ ದ್ವೇಷವಾಗಲಿ, ಯಾವುದೇ ಒಂದು ಮತಕ್ಕೆ ಮೀಸಲಲ್ಲ ಇದು ಸಾರ್ವತ್ರಿಕ, ಮತ್ತು ಸರ್ವವ್ಯಾಪಿ.ಎಲ್ಲರ ಒಳಗೆ ಇದು ಇದ್ದೇ ಇದೆ. ಇಲ್ಲಿ ಲುಕೇಮಿಯಾ ಕುರಿತು ಅರಿವು ಮೂಡಿಸಲು ಎಲಿಜಬೆತ್ ಡುಆಂಗ್ ತಯಾರಿಸಿದ ಒಂದು ಮನಮಿಡಿಯುವ ಕಿರುಚಿತ್ರವಿದೆ.
==========================================
Thanks to: GOOGLE AND YOU TUBE
No comments:
Post a Comment