69ನೇ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ
69th INDEPENDENCE DAY IN OUR SCHOOL
          69 ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ,
ಶ್ರದ್ದೆಯಿಂದ ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತ್ ಸದಸ್ಯರಾದ ಪುಷ್ಪರಾಜ್ ಐಲ್
ಧ್ವಜಾರೋಹಣಗೈದರು. ಶಾಲಾ ಮುಖ್ಯೋಪಾದ್ಯಾಯರಾದ ಅಬ್ಬಾಸ್ ಕೆ ಸ್ವಾಗತ ಕೋರಿದರು. ಸಭಾ
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪದಾಧಿಕಾರಿಗಳಾದ ಕೃಷ್ಣಾನಂದ ಪೈ, ಪ್ರವೀಣ್ ಪಕಳ, ಗಣೇಶ್,
ಕೆ.ಎಚ್ ಹೊಳ್ಳ ಮುಂತಾದವರು ಮಕ್ಕಳಿಗೆ ಸಿಹಿ ವಿತರಿಸುವ ಜೊತೆಗೆ ಶಾಲಾ ಮಕ್ಕಳ ಅಭುದಯ ನಿಧಿಗೆ ಸಂಗ್ರಹಿಸಿದ
ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಹಿರಿಯ ಶಿಕ್ಷಕ ಕೃಷ್ಣ ಕುಮಾರ್
ಸ್ವಾತಂತ್ರ್ಯ ಗೀತೆಯನ್ನು ಅಲಾಪಿಸಿ ಕಳೆದು ಹೋದ ಸ್ವಾತಂತ್ರ್ಯ ಪೂರ್ವ ಕಾಲವನ್ನು ಮೆಲುಕು
ಕಾಕಿದರು. ರಕ್ಷಕರು, ಸ್ಥಳೀಯ ಕ್ಲಬ್ ಸದಸ್ಯರು, ಹಳೆ ವಿದ್ಯಾರ್ಥಿಗಳು, ಊರ ಮಹನೀಯರು  ಮಕ್ಕಳಿಗೆ ಸಿಹಿ ಹಂಚಿ ಶುಭ ಹಾರೈಸಿದರು. 
ಶಾಲಾ
ಮಕ್ಕಳ ಅಭುದಯ ನಿಧಿಗೆ ದೇಣಿಗೆಯನ್ನು ನೀಡಿದ ಲಯನ್ಸ್ ಕ್ಲಬ್ ಪದಾಧಿಕಾರಿಗಳಿಗೆ ಶಾಲಾ ಶಿಕ್ಷಕ -ರಕ್ಷಕ
ತಂಡ ಸದಾ ಆಭಾರಿಯಾಗಿರುತ್ತದೆ. 
 









 
No comments:
Post a Comment