ಶ್ರೀ ನಾರಾಯಣ ಗುರು ಜಯಂತಿ
ಶುಭಾಶಯಗಳು
ಸೆಪ್ಟೆಂಬರ್-8
“ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು.”
ಸಮಾಜ ಸೇವಕ, ದಲಿತೋದ್ದಾರಕ, ದೀನರ ಬಂಧು, ಸಾಧುವೂ, ಸಂತರೂ, ಜ್ಞಾನಿಯೂ ಆದ ಮಹಾನ್ ಚೇತನ ಶ್ರೀ ನಾರಾಯಣಗುರುಗಳ ಜನನವು 1856ರ ವರ್ಷದಲ್ಲಿ ಕೇರಳದ ಚೆಂಬಳಂತಿ ಎಂಬಲ್ಲಿ ಸಿಂಹ ಮಾಸದ ಶತಭಿಷ
ನಕ್ಷತ್ರದ ಓಣಂ ದಿನವಾದ ಆಗಸ್ಟ್ 20ರ ದಿನದಂದು ಆಯಿತು. ಸಮಾಜದಲ್ಲಾಗುವ ಶೋಷಣೆಯನ್ನು ಕಂಡು ಬಹಳ ಮನನೊಂದಿದ್ದ
ಅವರು ಬಾಲ್ಯದಲ್ಲೇ ವಿಧೇಯತೆ, ಕರ್ತವ್ಯನಿಷ್ಠೆ, ಸೌಜನ್ಯತೆಗಳನ್ನು ಬೆಳೆಸಿಕೊಂಡಿದ್ದರು. ಏಕಾಗ್ರತೆಯಿಂದ ಸಂಸ್ಕ್ರತ ವಿದ್ಯೆ ಕಲಿತು ಪಂಡಿತರಾದರು.
“ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿರಿ” ಎಂದು ಸಂದೇಶ ನೀಡಿದವರು ನಾರಾಯಣ ಗುರುಗಳು. ನಾರಾಯಣ ಗುರು ಅವರು
ಸಮಾಜದಲ್ಲಿದ್ದ ಅಸ್ಪೃಶ್ಯತೆ, ದಲಿತ ನಿಂದನೆ, ಹಿಂಸಾಚಾರ, ಜಾತಿಭೇದ, ಸ್ತ್ರೀದಾಸ್ಯತ್ವ, ಅಸಮಾನತೆ, ಮೂಢನಂಬಿಕೆ ಇವುಗಳ ನಿವಾರಣೆಗಾಗಿ ಅವಿರತವಾಗಿ ಶ್ರಮಿಸಿದರು. ನಾರಾಯಣ ಗುರು ಅವರು
ಈ ಲೋಕವನ್ನಗಲಿದ ದಿನ ಸೆಪ್ಟೆಂಬರ್ 20, 1928. ಜನರಲ್ಲಿರುವ ಮೂಢನಂಬಿಕೆಯ ಅಜ್ಞಾನವನ್ನು ಹೋಗಲಾಡಿಸಲು ನಾರಾಯಣ ಗುರು ಅವರು ಹಲವಾರು
ವಿದ್ಯಾಕೇಂದ್ರಗಳನ್ನು ಪ್ರಾರಂಭಿಸಿದರು. ಕೀಳ್ಜಾತಿಯ ಜನರ ಕಷ್ಟ ಪರಿಹಾರಕ್ಕಾಗಿ ಮೇಲ್ಜಾತಿಯವರ ವಿರುದ್ಧ ಶಾಂತಿಯ ಹೋರಾಟ ನಡೆಸಿದರು. “ಮಾನವರೆಲ್ಲರೂ ಒಂದೇ” ಎಂಬ ತತ್ವವನ್ನು ಜನತೆಗೆ ಸಾರಿ ಹೇಳಿದರು.
















