Saturday 15 August 2015


ಸ್ವಾತಂತ್ರ್ಯ ದಿನ ಹೀಗೆ ಆಚರಿಸೋಣ...

                ನಾವು ಮತ್ತೊಂದು ಸ್ವಾತಂತ್ರ್ಯ ದಿನಾಚರಣೆಯ ಸಡಗರದಲ್ಲಿದ್ದೇವೆ. ಈ ಬಾರಿಯಾದರೂ ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡದೆ ಎಲ್ಲರೂ ಎಚ್ಚರ ವಹಿಸೋಣ. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳಲ್ಲಿ ಹರಿದ, ಕೊಳೆಯಾದ ಬಾವುಟವನ್ನು ಬಳಸದಿರಲು ಕಾಳಜಿ ವಹಿಸೋಣ. ಧ್ವಜ ವಂದನೆ, ರಾಷ್ಟ್ರಗೀತೆ ಹಾಡುವಾಗ ಅಸಭ್ಯವಾಗಿ ವರ್ತಿಸದೆ ಶಿಸ್ತು, ಘನತೆ ಗೌರವದಿಂದ ನಡೆದುಕೊಳ್ಳೋಣ. ಮಾಧ್ಯಮಗಳು ಇಂತಹ ಅಚಾತುರ್ಯಗಳನ್ನು ವರದಿ ಮಾಡುತ್ತವೆ ಎಂಬ ಭಯಕ್ಕಾಗಿ ಶಿಸ್ತು, ಶಿಷ್ಟಾಚಾರ ಪಾಲಿಸುವ ಬದಲಿಗೆ ನೈಜ ರಾಷ್ಟ್ರಭಕ್ತಿ, ದೇಶಪ್ರೇಮದೊಂದಿಗೆ ಸ್ವಾತಂತ್ರ್ಯ ದಿನ ಆಚರಿಸೋಣ. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಅದಕ್ಕಾಗಿ ತನು ಮನ ಪ್ರಾಣವನ್ನೇ ಸಮರ್ಪಿಸಿದ ಮಹನೀಯರನ್ನು ಸ್ಮರಿಸಿ, ಇಂದಿನ ಪೀಳಿಗೆಗೆ ಆಚರಣೆಯ ಮಹತ್ವ ತಿಳಿಸುವಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಮನೆಯ ಹಬ್ಬದಂತೆ ಸಂಭ್ರಮದಿಂದ ಭಾಗವಹಿಸೋಣ.
                ಭಾರತಾಂಬೆಯ ಜನುಮ ದಿನವನ್ನು ಸ್ವಂತ ತಾಯಿಯ ಹುಟ್ಟು ಹಬ್ಬದಂತೆ ಅತ್ಯಂತ ಮುತುವರ್ಜಿ ವಹಿಸಿ ಆಚರಿಸೋಣ. ಪೂರ್ವಗ್ರಹಪೀಡಿತರಾಗದೆ ವಾಸ್ತವದ ನೆಲೆಗಟ್ಟಿನಲ್ಲಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಇರಿಸಿ ಸಕಾರಾತ್ಮಕ ಧೋರಣೆಯೊಂದಿಗೆ `ಜೈ ಹಿಂದ್' ಎನ್ನೋಣ.



ಎಲ್ಲರಿಗೂ ನಮ್ಮ ಶಾಲಾ ಸಿಬ್ಬಂದಿ ವರ್ಗದವರ ವತಿಯಿಂದ 69 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು...

No comments: