Tuesday, 30 June 2015

MANJESHWARA SUB DIST


VIDYARANGA    : Smt. SHASHIKALA. HSA ( Kan ) GHSS PAIVALIKE NAGAR

MATHEMATICS   :  Sri. PRAKASHAN. HSA (Maths) GHSS MANGALPADY

SOCIAL SCIENCE: Sri. SANJEEVA. HSA ( SS ) GHSS PAIVALIKE

SCIENCE     : Smt. SUNITHA. HSA ( PS ) GHSS KUNJATHUR

WORK EXP     : Sri. MOHANA. UPSA AUPS BAKRABAIL

Saturday, 27 June 2015

ಜೂನ್ : 27  ಬಂಕಿಮ ಚಂದ್ರ ಚಟರ್ಜಿ ಜನ್ಮ ದಿನ


        ಜೂನ್ : 27  ಬಂಕಿಮ ಚಂದ್ರ ಚಟರ್ಜಿ ಜನ್ಮ ದಿನ

          ಬಂಕಿಮ ಚಂದ್ರ ಚಟರ್ಜಿಯವರು  27 ಜೂನ್ 1838 ರಲ್ಲಿ ಬಂಗಾಲದ ಪರಗಣ ಜಿಲ್ಲೆಗೆ ಸೇರಿದ ಕಾಂಚಲಪಾಡಾ ಗ್ರಾಮದಲ್ಲಿ ಜನಿಸಿದರು. ತಂದೆ ಯಾದವ ಚಂದ್ರ  ಚಟ್ಟೌಪಾಧ್ಯಾಯರು ಸರಕಾರಿ ಕೆಲಸದಲ್ಲಿದ್ದರು. ಬಂಕಿಮ ಚಂದ್ರ ಜನಿಸಿದ ವರ್ಷವೇ ಡೆಪ್ಯುಟಿ  ಕಲೆಕ್ಟರರಾಗಿ ಮಿಡ್ನಾಪುರಕ್ಕೆ  ಬಂದರು. ಚಿಕ್ಕಂದಿನಲ್ಲಿ ತುಂಬಾ ಬುದ್ದಿವಂತ  ಬಾಲಕ  ಒಂದೇ ದಿನದಲ್ಲಿ ವರ್ಣ ಮಾಲೆ  ಕಲಿತನಂತೆ  ಪ್ರಾಥಮಿಕ ಶಿಕ್ಷಣ ಮಿಡ್ನಾಪುರದಲ್ಲಿ  ಆಯಿತು.  ಹುಗ್ಗಿಯ ಮೋಸಿನ್ ಕಾಲೇಜಿನಲ್ಲಿ ಆರು ವರ್ಷ ಶಿಕ್ಷಣ ಆಯಿತು.  ಪ್ರಥಮ ಸ್ಥಾನ ಇವರದೇ ಆಗಿತ್ತು. ಆಟ  ಎಂದರೆ ಅಷ್ಟಕಷ್ಟೆ ಪಠ್ಯ ಪುಸ್ತಕ ಓದುವದಕ್ಕಿಂತ  ಪಕ್ಷೇತರ  ಪುಸ್ತಕ ಓದುವುದು ಇಷ್ಟವಾಗುತ್ತಿತ್ತು. ಸಂಸ್ಕ್ಕತ  ಪುಸ್ತಕ ಹೆಚ್ಚು ಆಸಕ್ತಿಯಿಂದ ಓದುತ್ತಿದ್ದನು.

ನಂತರ 1856 ರಲ್ಲಿ ಕಲ್ಕತ್ತ  ಪ್ರೇಸಿಡೆನ್ಸಿ ಕಾಲೇಜಿಗೆ ಬಿ. ವಿ. ಪದವಿ ಪಡೆದರು. ಕಲ್ಕತ್ತಾದ ಲೆಫ್ಟಿನೆಂಟ್ ಗವರ್ನರು ಜಿಲ್ಲಾಧಿಕಾರಿ ಹುದ್ದೆಯನ್ನು ಕೊಟ್ಟರು ಅವಾಗ ಅವರಿಗೆ ಇಪ್ಪತ್ತು ವರ್ಷಗಳು  ಮಾತ್ರ ನಂತರ ಬಿ.ಎಲ್. ಪದವಿ  ಪಡೆದರು.  32 ವರ್ಷ ಸೇವೆ ಸಲ್ಲಿಸಿ  1891 ರಲ್ಲಿ ನಿವೃತ್ತರಾದರು. ಇವರ ಮೇಲಿನ ಅಧಿಕಾರಿಗಳು ಬ್ರಿಟೀಷರು ಇವರಿಗೂ ಅವರಿಗೂ ಆಗಿ ಬರುತ್ತಿರಲಿಲ್ಲ. ಹೀಗಾಗಿ ದೊಡ್ಡ ಸ್ಥಾನ  ಸಿಗಲಿಲ್ಲ ಬ್ರಿಟೀಷ್ ಸರಕಾರ  ಇವರಿಗೆ  ರಾವ್ ಬಹದ್ದೂರ್ ಬಿರುದನ್ನು ಕೊಟ್ಟಿತು.

ಜಸ್ಸೂರಿನಲ್ಲಿದ್ದಾಗ  ಬಂಗಾಲದ  ಶ್ರೇಷ್ಠ ನಾಟಕಕಾರರಾದ ದೀನಬಂಧು ಮಿತ್ರ  ಮುಂದೆ ಅವರ ನೆನೆಪಿಗಾಗಿ ಆನಂದಮಠ ಕಾದಂಬರಿ ಬರೆದರು  ಬಂಗಾಳದಲ್ಲಿ  ಬಂಕಿಮಚಂದ್ರರು  ಪ್ರಸಿದ್ಧ ಬರಹಗಾರರಾದರು ಕಾದಂಬರಿ ಕವನ ಬರೆದರು ಇವರ ಕಾದಂಬರಿಗಳು ಬೇರೆ ಬೇರೆ ಭಾಷೆಗಳಿಗೆ ಭಾಷಾಂತರ ಆಗಿವೆ. ಮೊದ ಮೊದಲು ಕವನ ಬರೆದರು ಆನಂತರ ಇಂಗ್ಲೀಷನಲ್ಲಿ ಕಾದಂಬರಿ  ಬರೆದರು. ಮುಂದೆ  ಬಂಗಾಳಿ ಭಾಷೆಯಲ್ಲಿ ಕಾದಂಬರಿ ಬರೆದರು. ಸೇವೆಯ ಮಧ್ಯದಲ್ಲಿ ಕಿರುಕುಳಗಳಿಂದ ಬೇಸರವಾಗಿ ಸ್ವ ನಿವೃತ್ತಿ  ಹೊಂದಲು ಬಯಸಿದರು. ಅವಕಾಶ ಕೊಡಲಿಲ್ಲ.  ನಂತರ ಚಾರ್ಲ್ಸ  ಇಲಿಯಟ್ ಲೆಫ್ಟಿನೆಂಟ್  ಗವರ್ನರ್ ನಿವೃತ್ತಿಗೆ ಒಪ್ಪಿಗೆಕೊಟ್ಟರು.   ಇವರು ಪ್ರಾರಂಭಿಸಿದ  ಮಾರ್ಗದರ್ಶನ   ಮಾಸಪತ್ರಿಕೆ  ಅತಿಜನಪ್ರೀಯವಾಗಿತ್ತು.  ಇವರು ಹದಿನಾಲ್ಕು  ಕಾದಂಬರಿಗಳನ್ನು ಬರೆದರು.  ಅವುಗಳಲ್ಲಿ ದುರ್ಗೇಶ ನಂದಿನಿ  ಕಪಾಲ ಕುಂಡಲಾಮೃಣಾಳೀನೀ,  ಚಂದ್ರಶೇಖರ,  ರಾಜಹಂಸ ಆನಂದಮರಿ ದೇವಿ ಚೌಧುರಾಣಿಸೀತಾರಾಮ ವಿಷ ವೃಕ್ಷ  ಇಂದಿರಾ ಯುಗಳಾಂಗುರೀಯ ರಾಧಾರಾಣಿ  ರಜನಿ ಕೃಷಿಕಾಂತನ

ಇವರ ಆನಂದ ಮಠ ಎಂಬುದು ಕಾದಂಬರಿ ಅದರಲ್ಲಿ  ಅವರು  ಸ್ವಾತಂತ್ರ್ಯ ಹೋರಾಟದ  ಕಥೆಯನ್ನು ಬಣ್ಣಿಸುವುದನ್ನು ಓದುವಾಗ ಉತ್ಸಾಹದಿಂದ  ಮೈ ಜುಂ ಎನ್ನುತ್ತದೆ. ಇದರಲ್ಲಿ ಇವರು ಬರೆದ

ವಂದೇ ಮಾತರಂ
ಸುಜಲಾಂ ಸುಫಲಾಂ
ಮಲ ಯಜ ಶೀತಲಾಂ
ಸಸ್ಯಶ್ಯಾಮಲಾಂ ಮಾತರಂ

ಹುರಿದುಂಬಿಸುವ ಹಾಡು ಕಾಣಿಸಿಕೊಳ್ಳುತ್ತದೆ. ವಂದೇ ಮಾತರಂ ಗೀತೆಯಂತೂ ಭಾರತೀಯರಿಗೆ ಸ್ವಾತಂತ್ರ್ಯದ ಹೋರಾಟದಲ್ಲಿ ಮಂತ್ರವಾಯಿತು.  ಇದರ ಪ್ರಭಾವ  ಎಷ್ಟೊಂದು ಆಯಿತು. ಎಂದರೆ ಇದರ ಹೆಸರು  ಕೇಳಿದರೇ ಇಂಗ್ಲೀಷ ಅಧಿಕಾರಿಗಳಿಗೆ ಕೋಪ ಉಕ್ಕುತ್ತಿತ್ತು.  ಇದನ್ನು ಯಾರಾದರೂ ಹಾಡುತ್ತಾರೆ. ಎಂದರೆ  ಅವರನ್ನು ಜೈಲಿಗೆ ಹಾಕುವಂತಾಯಿತು.

ಯಾರಿಗೂ  ಮಾತನಾಡುವ ಧೈರ್ಯ ಇಲ್ಲ ಇಂತಹ ಕಾಲದಲ್ಲಿ ಸತ್ಯಾನಂದ ಎನ್ನುವವನು ತಾಯಿಯ ಕಷ್ಟವನ್ನು ಕೊನೆಗಾಣಿಸಬೇಕು ಎಂದು ಹಂಬಲಿಸುತ್ತಾನೆ. ನಾಡೇ ಕಾಡಾಗಿದ್ದ ಕಾಲದಲ್ಲಿ ಒಬ್ಬನ ಹಂಬಲದ ಧ್ವನಿ ಕೇಳುತ್ತಿದೆ. ನನ್ನ ಮನಸ್ಸಿನ ಇಷ್ಟ ಕೈಗೂಡುವುದಿಲ್ಲವೇನಿಮ್ಮ ಅರ್ಥವಿದೆ. ಕಪಾಲ ಕುಂಡಲಾರಂಜನಿ ರಾಜಸಿಂಹ ಮೃಣಾಲಿನಿದೇವಿ ಚೌಧುರಾಣೀ ಮೊದಲಾದ ಅವರ ಕಾದಂಬರಿಗಳು ಜನಪ್ರೀಯ ವಾಗಿವೆ. ಶ್ರೀ ಕೃಷ್ಣ ಚರಿತ್ರೆ ಧರ್ಮ ತತ್ವ ದೇವತತ್ವ ಭಗವದ್ಗೀತೆಯ ಟೀಕೆ ಮೊದಲಾದ  ಪುಸ್ತಕಗಳನ್ನು ಬರೆದರು.

ದೇಶದ ಆಡಳಿತಕ್ಕೆ ಸಿಕ್ಕು ಸ್ವಾತಂತ್ರ್ಯ ವಿಲ್ಲದ  ಭಾರತೀಯ ರಲ್ಲಿ ಸ್ವಾತಂತ್ರ್ಯದ ಬಯಕೆಯನ್ನು  ಹುಟ್ಟಿಸಿದವರಲ್ಲಿ ಒಂದೇ ಮರ ಒಬ್ಬರು  ರಾಷ್ಟ್ತ್ರೀಯತ್ವ  ಎಂದರೇನು ಎಂದು ಅವರ ಲೇಖನಗಳು ತಿಳಿಸಿಕೊಟ್ಟವು.  ನಮ್ಮ ದೇಶಕ್ಕೆ ತಮ್ಮ ಕೀವಂತ ಕೊಡುಗೆಯಾಗಿ ನೀಡಿದ  ಮಹಾಸಾಹಿತ್ಯ ಶಿಲ್ಪಿಯಾಗಿದ್ದವು. ಬಂಕಿಮರಿಗೆ ರಾಮಕೃಷ್ಣ ಪರಮಹಂಸರ  ಪರಿಚಯವಿತ್ತು ಬಂಕಿಮ ಎಂದರೆ ಬಾಗಿರುವುದು  ಹಾಸ್ಯನಾಗಿ ಯಾವುದು ನಿನ್ನನ್ನು  ಬಗ್ಗಿಸಿತುಎಂದು ಕೇಳಿದಾಗ ಬಂಕಿಮರು ಬ್ರಿಟೀಷರ ಬೂಟಿನ ಹೊಡೆತ  ಎಂದರು. ಇವರು 8 ಏಪ್ರೀಲ್ 1894 ರಲ್ಲಿ   ನಿಧನ ರಾದರು.  

Friday, 26 June 2015


ಜೂನ್ 26  ವಿಶ್ವ ಮಾದಕ ವಸ್ತು ವಿರೋಧಿ ದಿನ


ದಿನಾಂಕ 26-6-2015 ರಂದು ನಮ್ಮ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನವನ್ನು ಶ್ರದ್ದಾಪೂರ್ವಕವಾಗಿ ಅಚರಿಸಲಾಯಿತು. ಸಮಾಜಕ್ಕೆ ಶಾಪವಾಗಿ ಪರಿಣಮಿಸಿದ ಅಮಲು ಪದಾರ್ಥಗಳ ಚಟಕ್ಕೆ ದಾಸರಾಗದಂತೆ ಹಾಗೂ ಶರೀರದ ಮೇಲುಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಯಿತು ಹಾಗೂ ಮಾದಕ ವಸ್ತುಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆಯೆಂದು  ಶಾಲಾ ಮುಖ್ಯೊಪಾಧ್ಯಾಯರಾದ ಅಬ್ಬಾಸ್ .ಕೆ  ಅಭಿಪ್ರಾಯಪಟ್ಟರು. ಶಾಲಾ ಅಸ್ಸೆಂಬ್ಲಿ ಯಲ್ಲಿ ಪ್ರತಿಜ್ನೆಯನ್ನು ಮಕ್ಕಳಿಗೆ ಓದಿ ಹೇಳಲಾಯಿತು. ಸ್ಲೈಡ್, ಕಾರ್ಟೂನ್ ಪ್ರದರ್ಶನ ಕಾರ್ಯಕ್ರಮ ಜರಗಿತು.




Thursday, 25 June 2015

ಜೂನ್ 25;  ವಾಚನಾ ಸಪ್ತಾಹ ಸಮಾರೋಪ

          ಪಿ.ಎನ್.ಪಣಿಕ್ಕರ್ ರವರ ಸ್ಮರಣಾರ್ಥ ನಡೆಸಿದ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ 25-6-2015 ರಂದು ನಡೆಸಲಾಯಿತು .ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಶ್ರೀ ಅಬ್ಬಾಸ್ ವಹಿಸಿ ಹಿತವಚನಗಳನ್ನು ನುಡಿದರು. ವಾಚನಾ ವಾರದ ಅಂಗವಾಗಿ ನಡೆದ  ಕಥಾ ರಚನೆ, ರಸಪ್ರಶ್ನೆ, ಚಿತ್ರ ರಚನೆ, ಪುಸ್ತಕ ವರದಿ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುರಸ್ಕಾರಗಳನ್ನು ನೀಡಿ ಅಭಿನಂದಿಸಲಾಯಿತು. ಮಕ್ಕಳ ಸ್ವ-ರಚನೆಗಳ  ಹಸ್ತ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.
ನಿಸರ್ಗದ ಸೊಬಗಿನ ಕೊಡುಗೆ 'ಹೂಗಳಂತಿರುವ  ಮಕ್ಕಳು'

"ಕೊಂದೆ ಹೂವೆ ಕೇಳಲೆ ಪ್ರಶ್ನೆಯೊಂದ ನಾನು
ನಿನಗೆ ಉಡಲು ಹಳದಿಯಂಗಿಯ ಕೊಟ್ಟವರಾರು..
ಮಲ್ಲಿಗೆ ಹೂವೆ ಕೇಳಲೆ ಪ್ರಶ್ನೆಯೊಂದ ನಾನು
ನಿನಗೆ ಉಡಲು ಬಿಳಿಯಂಗಿಯ  ಕೊಟ್ಟವರಾರು.."

          ಹೂಗಳನ್ನು ಇಷ್ಟಪಡದವರಾರು? ಹೂಗಳೆಂದರೆ  ಎಲ್ಲರಿಗೂ ಇಷ್ಟ.  ಮನಸ್ಸಿಗೆ ಮುದ ನೀಡುವ ಹೂವುಗಳ ಛಾಯಾಚಿತ್ರ ತೆಗೆಯುವವರೂ ನಮ್ಮಲ್ಲಿ  ತುಂಬ ಮಂದಿ. ತರಗತಿ ಮಧ್ಯೆ ಹೂಗಳ ಬಗೆಗಿನ ಮಕ್ಕಳ ಒಲವು, ಕಿರು ಪ್ರಾಯದಲ್ಲೇ ಅದರ ಕುರಿತಾಗಿರುವ ಅರಿವು ನಮ್ಮನ್ನು ಚಕಿತಗೊಳಿಸುತ್ತದೆಯಲ್ಲವೇ. ಮಕ್ಕಳಲ್ಲಿ ಪರಿಸರದ ಬಗ್ಗೆ ನಿಜವಾದ ಕಾಳಜಿ ಮತ್ತು ಪ್ರೀತಿ ಹುಟ್ಟಬೇಕಾದರೆ ಅವರು ಹೂಗಳ ಸುಗಂಧ, ಗಿಡ ಮರಗಳು, ಕಲ್ಲು, ಮಣ್ಣನ್ನು  ನೇರವಾಗಿ ಕಣ್ಣಿಂದ ನೋಡಿ, ಕೈನಿಂದ ಮುಟ್ಟಿ, ಗಾಳಿಯ ಗತಿ, ಹಕ್ಕಿಯ ಕಲರವ, ಮುಂತಾದವುಗಳನ್ನು ಅನುಭವಿಸಬೇಕು, ಕುತೂಹಲಕ್ಕಿಂತ ಪ್ರೇರಣೆಯಿಲ್ಲ. ಅನುಭವಕ್ಕಿಂತ ಗುರುವಿಲ್ಲ. ನಾವು ಶಿಕ್ಷಕರ ಮತ್ತು  ವಿದ್ಯಾರ್ಥಿಗಳ  ಅನುಭವಗಳನ್ನು ಬಳಸಿಕೊಂಡರೆ ಕಲಿಕೆ ಹೆಚ್ಚು ವಿನೋದಮಯವಾಗಿರುತ್ತದೆ. ಈ ಚಟುವಟಿಕೆಗಳಲ್ಲಿ ಶಿಕ್ಷಕರ ಪಾತ್ರ ಕೇವಲ  ಮಾಹಿತಿಯನ್ನು ವರ್ಗಾಯಿಸುವುದಲ್ಲ. ಮಕ್ಕಳು ಸಕ್ರಿಯವಾಗಿ ಭಾಗವಹಿಸುವ ಒಂದು ಕಲಿಕೆಯ ಪ್ರಕ್ರಿಯೆಯಲ್ಲಿ ಅದಕ್ಕೆ ಅನುಕೂಲ ಒದಗಿಸುವ, ಒಬ್ಬ ನಾಯಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಯಾವುದೇ ಶಿಕ್ಷಕ ಎಲ್ಲಾ ಉತ್ತರಗಳನ್ನು ತಿಳಿದಿರುತ್ತಾನೆ ಎಂದು ನಿರೀಕ್ಷೆ ಮಾಡಲಾಗುವುದಿಲ್ಲ. ಅಥವಾ ಅದರ ಅಗತ್ಯವೂ ಇರಲಾರದು. ಮಕ್ಕಳ ಕುತೂಹಲಕ್ಕೆ ಸ್ಪಂದಿಸಿ ಅವರಿಗೆ ಆತ್ಮೀಯ ಸಹಾಯ ನೀಡುವುದು ಶಿಕ್ಷಕರೆಂಬ ನೆಲೆಯಲ್ಲಿ ನಮ್ಮ ಆದ್ಯ ಕರ್ತವ್ಯವಾಗಿದೆ. ನಮ್ಮ  ಮಕ್ಕಳು ಸೊಬಗಿನ ತೋಟದಲ್ಲಿ ಸ್ವಚ್ಚಂದವಾದ ಅರಳುತ್ತಿರುವ ಸುಂದರ ಹೂಗಳಂತೆ, ನೀರೆರೆದು ಪಾಲನೆ ಪೋಷಣೆ ಮಾಡಿ ಭವಿಷ್ಯದಲ್ಲಿ ಯಶಸ್ಸಿನ  ಉತ್ತುಂಗಕ್ಕೆರಲು ಸಜ್ಜುಗೊಳಿಸೋಣ.
                                                                                                                    ಪ್ರವೀಣ್ ಕುಮಾರ್. ಕೆ



ಭಾರತದ ಪ್ರಮುಖ ಹೂವುಗಳ ಫೋಟೋ ಮತ್ತು ವಿವರ ಇಲ್ಲಿವೆ. ಭಾರತೀಯ ಹೂವುಗಳಿಗೆಂದೇ ಇರುವ ಜಾಲತಾಣ.



Sunday, 21 June 2015




        International Yoga Day, June 21, was declared as the International Day of Yoga by the United Nations General Assembly on December 11, 2014. Yoga is a physical, mental and spiritual practice or discipline that originated in India. The Indian Prime Minister Narendra Modi in his UN Address suggested the date to be June 21 as the International Day of Yoga as it is the longest day of the year (Summer Solstice) in the Northern Hemisphere and has special significance in many parts of the world.
From the perspective of yoga, the Summer Solstice marks the transition to Dakshinayana. The first full moon after Summer Solstice is known as Guru Poornima. Lord Shiva, the first yoga practitioner (Adi Yogi) is said to have begun imparting the knowledge of yoga to the rest of mankind on this day and became the first guru (Adi Guru). Dakshinayana is also considered a time when there is natural support for those pursuing spiritual practices.
The declaration of this day came after the call for the adoption of 21 June as International Day of Yoga by Indian Prime MinisterNarendra Modi during his address to UN General Assembly on September 27, 2014 wherein he stated:
"Yoga is an invaluable gift of India's ancient tradition. This tradition is 5000 years old. It embodies unity of mind and body; thought and action; restraint and fulfilment; harmony between man and nature; a holistic approach to health and well-being. It is not about exercise but to discover the sense of oneness with yourself, the world and the nature. By changing our lifestyle and creating consciousness, it can help us deal with climate change. Let us work towards adopting an International Yoga Day."

Source:- 
http://idayofyoga.org/ 
https://en.wikipedia.org/wiki/International_Yoga_Day

Friday, 19 June 2015

ಮಹಾನ್ ಸಾಹಿತಿ ಪಿ.ಎನ್ ಪಣಿಕ್ಕರ್ ಚರಮ ವಾರ್ಷಿಕ ಪ್ರಯುಕ್ತ ವಾಚನಾ ಸಪ್ತಾಹ 2015-16 ನ್ನು ಶಾಲಾ ಮಕ್ಕಳೊಂದಿಗೆ ಆಚರಿಸಲಾಯಿತು. 




Thursday, 18 June 2015

ವರ್ಷದ ಮೊದಲ ಬೆಳೆ ಕೊಯ್ಲು- ಶಾಲಾ ತರಕಾರಿ ತೋಟದಲ್ಲಿ ಬೆಳೆದ ಸಿಹಿ ಗೆಣಸಿನೊಂದಿಗೆ ಮಕ್ಕಳು.




ಎಸ್.ಎಂ.ಸಿ ಮಹಾಸಭೆ ಮತ್ತು ಉಚಿತ ಸಮವಸ್ತ್ರ ವಿತರಣೆ

ಹೇರೂರು ಸರಕಾರೀ ಯಲ್.ಪಿ ಶಾಲೆಯಲ್ಲಿ ಜೂನ್ 17 ರಂದು S.M.C ಮಹಾಸಭೆ ಜರಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕೃಷ್ಣ ಹೆಬ್ಬಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಅಬ್ಬಾಸ್ .ಕೆ ಸ್ವಾಗತಿಸಿ  ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ನೂತನ ಕಾರ್ಯಕಾರೀ ಸಮಿತಿಯನ್ನು ರಚಿಸಲಾಯಿತು. ಶ್ರೀ ಅಬೂಬಕರ್ ಸಿದ್ದಿಕ್ ಯಸ್.ಎಂ.ಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಶ್ರೀಮತಿ ವನಜ ಶೆಟ್ಟಿ ಮಾತೃ ಸಂಘದ  ಅಧ್ಯಕ್ಷೆಯಾದರು. ಬಳಿಕ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವು ಜರಗಿತು. ಅಧ್ಯಾಪಕರಾದ ಕೃಷ್ಣ ಕುಮಾರ್, ಪ್ರವೀಣ್ ಕುಮಾರ್, ಪೂರ್ಣಿಮಾ ಮತ್ತಿತರರು ಉಪಸ್ತಿತರಿದ್ದರು.

  ಸ್ವಾಗತ  ಶ್ರೀ ಅಬ್ಬಾಸ್ .ಕೆ (HM)
ಉದ್ಘಾಟನಾ ಭಾಷಣ ಶ್ರೀ ಕೃಷ್ಣ ಹೆಬ್ಬಾರ್



 ಉಚಿತ ಸಮವಸ್ತ್ರ ವಿತರಣೆ 



Wednesday, 17 June 2015



TRIBAL DEVELOPMENT Department is conducting a CAMP to distribute LUMPSUM GRANT AND STIPEND of the sub district at AEO OFFICE MANJESHWARA on 19-06-2015 . All the school Headmasters are directed to collect LUMPSUM GRANT AND STIPEND from the authorities after producing relevent documents. 

Monday, 15 June 2015

ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆ ಹೇರೂರು
ಹೇರೂರು ಪೋಸ್ಟ್, ಗ್ರಾಮ, ಮಂಗಲ್ಪಾಡಿ -671324
ಮಾನ್ಯರೇ,
       ಪ್ರಸ್ತುತ ಶೈಕ್ಷಣಿಕ ಸಾಲಿನ ಶಾಲಾ ಯಸ್.ಎಂ.ಸಿ  ಮಹಾ ಸಭೆಯು ದಿನಾಂಕ 17-06-2015 ನೇ ಬುಧವಾರ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ನಮ್ಮ ಶಾಲಾ ಸಭಾಂಗಣದಲ್ಲಿ ಜರಗಲಿದೆ. ಎಲ್ಲ ರಕ್ಷಕ ಬಾಂಧವರು ತಪ್ಪದೇ ಭಾಗವಹಿಸಬೇಕಾಗಿ ವಿನಂತಿ.
ಅಜೆಂಡಾ:-
Ø  ಉಚಿತ ಸಮವಸ್ತ್ರ ವಿತರಣೆ.
Ø  ನೂತನ ಕಾರ್ಯಕಾರೀ ಸಮಿತಿ ರೂಪೀಕರಣ , ವಾರ್ಷಿಕ ವರದಿ
Ø  ಅಕಾಡಮಿಕ್ ಮತ್ತು ಇತರ ವಿಷಯಗಳು

ಹೇರೂರು
15-6-2015                                                                            ಮುಖ್ಯೋಪಾಧ್ಯಾಯರು


          ಕಂಪ್ಯೂಟರ್‌ ಶಿಕ್ಷಣ


        ಇದು ಸ್ಪರ್ಧಾತ್ಮಕ ಯುಗ. ಜೊತೆಗೆ ಕಂಪ್ಯೂಟರ್‌ ಯುಗವೂ ಹೌದು. ಅದರಲ್ಲೂ ಎಡಿಟಿಂಗ್, ಏನಿಮೇಷನ್, ಡಿ.ಟಿ.ಪಿ, ಇಂಟರ್ನೆಟ್ ತಾಂತ್ರಿಕ ಕೌಶಲಗಳ ಅವಶ್ಯಕತೆಯೂ ಹೆಚ್ಚಾಗಿದೆ. ಕಂಪ್ಯೂಟರ್ ಇಂದಿನ ದಿನಗಳಲ್ಲಿ ಕೇವಲ ಒಂದು ಪರಿಕಲ್ಪನೆಯಾಗಿ ಉಳಿದಿಲ್ಲ, ಅದು ನಮ್ಮ ಜೀವನದ ದಿಶೆಯನ್ನೇ  ಬದಲಿಸಿದೆ. ನಿತ್ಯ ಬದುಕಿನ ವಿಧಾನವೇ ಆಗಿದೆ. 1950ರ ನಂತರದ ದಶಕಗಳಲ್ಲಿ ಯಾರೂ ಊಹಿಸಲಾರದಷ್ಟು ತ್ವರಿತ ಗತಿಯಲ್ಲಿ ಬೆಳವಣಿಗೆ ಕಂಡ ಕಂಪ್ಯೂಟರ್, ಇಂದು ಎ.ಟಿ.ಎಮ್. ಮೂಲಕ ಹಣ ನೀಡುವ ಹೆಮ್ಮರವಾಗಿ ಬೆಳೆದು ನಿಂತಿದೆ. ಇಂದಿನ ದಿನಗಳಲ್ಲಿ ವಿದ್ಯಾವಂತರಾಗಿ ಕಂಪ್ಯೂಟರ್ ಕಲಿಯುವುದೂ ಬದ್ದಿವಂತಿಕೆಯ ಲಕ್ಷಣವೆನಿಸಿದೆ. ಹೀಗಾಗಿ ಶಾಲಾ ಮಟ್ಟದಲ್ಲಿಯೇ ತಾಂತ್ರಿಕ ಕೌಶಲಗಳನ್ನು ಬೆಳೆಸಲು ಸಾಕಷ್ಟು ಯೋಜನೆ­ಗಳನ್ನು ರೂಪಿಸಬೇಕು. ಆದರೆ ಅದಕ್ಕೆ ಸೂಕ್ತ ತರಬೇತಿ, ಅಗತ್ಯ ಮಾಹಿತಿ ಅತ್ಯವಶ್ಯಕ. ಶಿಕ್ಷಕರು ತಮ್ಮ ಕಂಪ್ಯೂಟರ್‌ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಬಲು ಅತ್ಯಾವಶ್ಯಕ. ಈ ಎಲ್ಲ ಸಮಸ್ಯೆಗಳನ್ನು ದಾಟಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಕಲಿಸುವ ಕಾರ್ಯಕ್ರಮವು ವ್ಯವಸ್ಥಿತವಾಗಿ ನಡೆಯಬೇಕು. ಶಾಲೆಗಳಲ್ಲಿನ ಕಂಪ್ಯೂಟರ್‌ಗಳ ದುರಸ್ತಿ, ಅವುಗಳ ವ್ಯವಸ್ಥಿತ ಜೋಡಣೆ, ಅದಕ್ಕೆ ಶಿಕ್ಷಕರಿಗೆ ಬೇಕಾದ ತರಬೇತಿ, ಅಗತ್ಯ ಇರುವ ಶಾಲೆಗಳಿಗೆ ಕಂಪ್ಯೂಟರ್‌ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕಂಪ್ಯೂಟರ್‌ ಶಿಕ್ಷಣವನ್ನು ಫಲಪ್ರದವಾಗಿ ಮಾಡಬೇಕಿದೆ.
                                                                                                      
                                                                                                      ಪ್ರವೀಣ್ ಕುಮಾರ್ .ಕೆ 

Saturday, 13 June 2015

ಈ ವರ್ಷದ ಮೊದಲ ಬೆಳೆ--- ಸಿಹಿಗೆಣಸಿನಲ್ಲಿ ಮೂಡಿಬಂದ ಅಪೂರ್ವ ಕಲಾಕೃತಿ...

Friday, 5 June 2015


Click here for Digital Text Books - STD I -X
A Milestone in Kerala General Education from IT@School, 
Govt Of Kerala

 ಜೂನ್ - 5 ವಿಶ್ವ ಪರಿಸರ ದಿನ
ಇಂದು ಜೂನ್ -5 ವಿಶ್ವ ಪರಿಸರ ದಿನ. ನೀರು, ಜೀವಿ ವೈವಿದ್ಯ, ಇಂಧನ, ಪರಿಸರ ನೈರ್ಮಲ್ಯ ಇವುಗಳ ಉಳಿವಿಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ. ದಿನೇ ದಿನೇ ನಡೆಯುತ್ತಿರುವ ಅವಜ್ಞತೆ, ಪೋಲು ಸಂಪನ್ಮೂಲಗಳ ಕೊರತೆಯ ಕರಾಳ ದಿನ ಇನ್ನೇನು ಬರಲಿದೆ ಎಂಬುದನ್ನು ಸೂಚಿಸುತ್ತಿವೆ. ಎಚ್ಚೆತ್ತು ಮುನ್ನಡೆಯೋಣ... ನಮ್ಮ ಪ್ರಕೃತಿಯನ್ನು ಸದಾ ಹಸಿರಾಗಿಡೋಣ...  




 ಜೂನ್ - 5 
ವಿಶ್ವ ಪರಿಸರ ದಿನ | World Environment Day




Monday, 1 June 2015


Click Here to Download Education Calender 2015-16


ಸಡಗರದ ಶಾಲಾ ಪ್ರವೇಶೋತ್ಸವ

         2015-16 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರವೇಶೋತ್ಸವವನ್ನು ನವಾಗತ ಪುಟಾಣಿಗಳೊಂದಿಗೆ ಸಡಗರದಿಂದ ಆಚರಿಸಲಾಯಿತು. ಮುಖ್ಯೋಪಾಧ್ಯಾಯರಾದ ಅಬ್ಬಾಸ್ .ಕೆ ಮತ್ತು ಕಾರ್ಯಕ್ರಮ ಉದ್ಘಾಟಿಸಿದ ಪಂಚಾಯತ್ ಸದಸ್ಯರಾದ ಪುಷ್ಪರಾಜ್ ಐಲ್ ಹೊಸತಾಗಿ ಸೇರಿದ  ಪುಟಾಣಿಗಳನ್ನ ಕೈಹಿಡಿದು ಬರಮಾಡಿಕೊಂಡರು. ಹೆತ್ತವರ ಜೊತೆಗೂಡಿ ಅಧ್ಯಾಪಕರಾದ ಕೃಷ್ಣ ಕುಮಾರ್, ಪ್ರವೀಣ್, ಜಾಫರ್, ಪೂರ್ಣಿಮಾ  ಎಲ್ಲರೂ ಮಕ್ಕಳಿಗೆ ಸಿಹಿ ತಿಂಡಿ, ಬಲೂನ್, ಹೂಗಳನ್ನು ನೀಡುತ್ತಾ ಅಕ್ಷರ ಲೋಕಕ್ಕೆ ಸ್ವಾಗತಿಸಿದರು. ಅಧ್ಯಾಪಕರೂ ಮಕ್ಕಳೂ ಸೇರಿ ಪ್ರವೇಶೋತ್ಸವ ಗೀತೆ ಹಾಡಿದರು. ಸಮಾರಂಭದಲ್ಲಿ ಹೊಸತಾಗಿ ಸೇರಿದ ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಲಾಯಿತು.


 ಪ್ರವೇಶೋತ್ಸವ ಮೆರವಣಿಗೆ 


ಮುಖ್ಯ ಶಿಕ್ಷಕ ಅಬ್ಬಾಸ್ ಕೆ ಯಿಂದ ಶುಭಾಶಂಸನೆ...
 ಉದ್ಘಾಟನಾ ಭಾಷಣ ಪಂಚಾಯತ್ ಸದಸ್ಯ ಶ್ರೀ ಪುಷ್ಪರಾಜ್ ಐಲ್ 

 ಪ್ರವೇಶೋತ್ಸವ ಗೀತೆ 
 ಪುಟಾಣಿಗಳಿಗೆ ಕಲಿಕಾ ಕಿಟ್ ವಿತರಣೆ 
 ಅಧ್ಯಾಪಕ ಜಾಫಾರ್ ರಿಂದ ವಂದನಾರ್ಪಣೆ