Thursday, 25 June 2015

ನಿಸರ್ಗದ ಸೊಬಗಿನ ಕೊಡುಗೆ 'ಹೂಗಳಂತಿರುವ  ಮಕ್ಕಳು'

"ಕೊಂದೆ ಹೂವೆ ಕೇಳಲೆ ಪ್ರಶ್ನೆಯೊಂದ ನಾನು
ನಿನಗೆ ಉಡಲು ಹಳದಿಯಂಗಿಯ ಕೊಟ್ಟವರಾರು..
ಮಲ್ಲಿಗೆ ಹೂವೆ ಕೇಳಲೆ ಪ್ರಶ್ನೆಯೊಂದ ನಾನು
ನಿನಗೆ ಉಡಲು ಬಿಳಿಯಂಗಿಯ  ಕೊಟ್ಟವರಾರು.."

          ಹೂಗಳನ್ನು ಇಷ್ಟಪಡದವರಾರು? ಹೂಗಳೆಂದರೆ  ಎಲ್ಲರಿಗೂ ಇಷ್ಟ.  ಮನಸ್ಸಿಗೆ ಮುದ ನೀಡುವ ಹೂವುಗಳ ಛಾಯಾಚಿತ್ರ ತೆಗೆಯುವವರೂ ನಮ್ಮಲ್ಲಿ  ತುಂಬ ಮಂದಿ. ತರಗತಿ ಮಧ್ಯೆ ಹೂಗಳ ಬಗೆಗಿನ ಮಕ್ಕಳ ಒಲವು, ಕಿರು ಪ್ರಾಯದಲ್ಲೇ ಅದರ ಕುರಿತಾಗಿರುವ ಅರಿವು ನಮ್ಮನ್ನು ಚಕಿತಗೊಳಿಸುತ್ತದೆಯಲ್ಲವೇ. ಮಕ್ಕಳಲ್ಲಿ ಪರಿಸರದ ಬಗ್ಗೆ ನಿಜವಾದ ಕಾಳಜಿ ಮತ್ತು ಪ್ರೀತಿ ಹುಟ್ಟಬೇಕಾದರೆ ಅವರು ಹೂಗಳ ಸುಗಂಧ, ಗಿಡ ಮರಗಳು, ಕಲ್ಲು, ಮಣ್ಣನ್ನು  ನೇರವಾಗಿ ಕಣ್ಣಿಂದ ನೋಡಿ, ಕೈನಿಂದ ಮುಟ್ಟಿ, ಗಾಳಿಯ ಗತಿ, ಹಕ್ಕಿಯ ಕಲರವ, ಮುಂತಾದವುಗಳನ್ನು ಅನುಭವಿಸಬೇಕು, ಕುತೂಹಲಕ್ಕಿಂತ ಪ್ರೇರಣೆಯಿಲ್ಲ. ಅನುಭವಕ್ಕಿಂತ ಗುರುವಿಲ್ಲ. ನಾವು ಶಿಕ್ಷಕರ ಮತ್ತು  ವಿದ್ಯಾರ್ಥಿಗಳ  ಅನುಭವಗಳನ್ನು ಬಳಸಿಕೊಂಡರೆ ಕಲಿಕೆ ಹೆಚ್ಚು ವಿನೋದಮಯವಾಗಿರುತ್ತದೆ. ಈ ಚಟುವಟಿಕೆಗಳಲ್ಲಿ ಶಿಕ್ಷಕರ ಪಾತ್ರ ಕೇವಲ  ಮಾಹಿತಿಯನ್ನು ವರ್ಗಾಯಿಸುವುದಲ್ಲ. ಮಕ್ಕಳು ಸಕ್ರಿಯವಾಗಿ ಭಾಗವಹಿಸುವ ಒಂದು ಕಲಿಕೆಯ ಪ್ರಕ್ರಿಯೆಯಲ್ಲಿ ಅದಕ್ಕೆ ಅನುಕೂಲ ಒದಗಿಸುವ, ಒಬ್ಬ ನಾಯಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಯಾವುದೇ ಶಿಕ್ಷಕ ಎಲ್ಲಾ ಉತ್ತರಗಳನ್ನು ತಿಳಿದಿರುತ್ತಾನೆ ಎಂದು ನಿರೀಕ್ಷೆ ಮಾಡಲಾಗುವುದಿಲ್ಲ. ಅಥವಾ ಅದರ ಅಗತ್ಯವೂ ಇರಲಾರದು. ಮಕ್ಕಳ ಕುತೂಹಲಕ್ಕೆ ಸ್ಪಂದಿಸಿ ಅವರಿಗೆ ಆತ್ಮೀಯ ಸಹಾಯ ನೀಡುವುದು ಶಿಕ್ಷಕರೆಂಬ ನೆಲೆಯಲ್ಲಿ ನಮ್ಮ ಆದ್ಯ ಕರ್ತವ್ಯವಾಗಿದೆ. ನಮ್ಮ  ಮಕ್ಕಳು ಸೊಬಗಿನ ತೋಟದಲ್ಲಿ ಸ್ವಚ್ಚಂದವಾದ ಅರಳುತ್ತಿರುವ ಸುಂದರ ಹೂಗಳಂತೆ, ನೀರೆರೆದು ಪಾಲನೆ ಪೋಷಣೆ ಮಾಡಿ ಭವಿಷ್ಯದಲ್ಲಿ ಯಶಸ್ಸಿನ  ಉತ್ತುಂಗಕ್ಕೆರಲು ಸಜ್ಜುಗೊಳಿಸೋಣ.
                                                                                                                    ಪ್ರವೀಣ್ ಕುಮಾರ್. ಕೆ



ಭಾರತದ ಪ್ರಮುಖ ಹೂವುಗಳ ಫೋಟೋ ಮತ್ತು ವಿವರ ಇಲ್ಲಿವೆ. ಭಾರತೀಯ ಹೂವುಗಳಿಗೆಂದೇ ಇರುವ ಜಾಲತಾಣ.



No comments: