ಸಡಗರದ ಶಾಲಾ ಪ್ರವೇಶೋತ್ಸವ
2015-16 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರವೇಶೋತ್ಸವವನ್ನು ನವಾಗತ ಪುಟಾಣಿಗಳೊಂದಿಗೆ ಸಡಗರದಿಂದ ಆಚರಿಸಲಾಯಿತು. ಮುಖ್ಯೋಪಾಧ್ಯಾಯರಾದ ಅಬ್ಬಾಸ್ .ಕೆ ಮತ್ತು ಕಾರ್ಯಕ್ರಮ ಉದ್ಘಾಟಿಸಿದ ಪಂಚಾಯತ್ ಸದಸ್ಯರಾದ ಪುಷ್ಪರಾಜ್ ಐಲ್ ಹೊಸತಾಗಿ ಸೇರಿದ ಪುಟಾಣಿಗಳನ್ನ ಕೈಹಿಡಿದು ಬರಮಾಡಿಕೊಂಡರು. ಹೆತ್ತವರ ಜೊತೆಗೂಡಿ ಅಧ್ಯಾಪಕರಾದ ಕೃಷ್ಣ ಕುಮಾರ್, ಪ್ರವೀಣ್, ಜಾಫರ್, ಪೂರ್ಣಿಮಾ ಎಲ್ಲರೂ ಮಕ್ಕಳಿಗೆ ಸಿಹಿ ತಿಂಡಿ, ಬಲೂನ್, ಹೂಗಳನ್ನು ನೀಡುತ್ತಾ ಅಕ್ಷರ ಲೋಕಕ್ಕೆ ಸ್ವಾಗತಿಸಿದರು. ಅಧ್ಯಾಪಕರೂ ಮಕ್ಕಳೂ ಸೇರಿ ಪ್ರವೇಶೋತ್ಸವ ಗೀತೆ ಹಾಡಿದರು. ಸಮಾರಂಭದಲ್ಲಿ ಹೊಸತಾಗಿ ಸೇರಿದ ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಲಾಯಿತು.
ಪ್ರವೇಶೋತ್ಸವ ಮೆರವಣಿಗೆ
ಮುಖ್ಯ ಶಿಕ್ಷಕ ಅಬ್ಬಾಸ್ ಕೆ ಯಿಂದ ಶುಭಾಶಂಸನೆ...
ಉದ್ಘಾಟನಾ ಭಾಷಣ ಪಂಚಾಯತ್ ಸದಸ್ಯ ಶ್ರೀ ಪುಷ್ಪರಾಜ್ ಐಲ್
ಪ್ರವೇಶೋತ್ಸವ ಗೀತೆ
ಪುಟಾಣಿಗಳಿಗೆ ಕಲಿಕಾ ಕಿಟ್ ವಿತರಣೆ
ಅಧ್ಯಾಪಕ ಜಾಫಾರ್ ರಿಂದ ವಂದನಾರ್ಪಣೆ
No comments:
Post a Comment